ಕರಾವಳಿ

ವಿವಿಧ ಭೇಡಿಕೆಗಳಿಗೆ ಆಗ್ರಹಿಸಿ ವೆನ್ಲಾಕ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ವೆನ್ಲಾಕ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ಪಠ್ಯ ಚಟುವಟಿಕೆಗಳು ಆರಂಭವಾಗಿಲ್ಲ.ಹಾಗಾಗಿ ಪಠ್ಯ ಚಟುವಟಿಕೆಗಳನ್ನು ಆರಂಭಿಸಲು, ಪೋಸ್ಟಿಂಗ್ ಹೆಸರಿನಲ್ಲಿ ನಿಯಮ ಮೀರಿ ಆಸ್ಪತ್ರೆಯ ಕೆಲಸಗಳಿಗೆ ವಿಧ್ಯಾರ್ಥಿಗಳನ್ನು ನಿಯೋಜಿಸುತ್ತಿರುವುದನ್ನು ವಿರೋಧಿಸಿ, ನುರಿತ ಉಪನ್ಯಾಸಕರನ್ನು ನೇಮಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು.

ಪ್ರತಿಭಟನಾಕಾರರನ್ನುದ್ದೇಶಿಸಿ, SFI ಜಿಲ್ಲಾಧ್ಯಕ್ಷರೂ, ವಕೀಲರಾದ ಚರಣ್ ಶೆಟ್ಟಿ,ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ, ಮಾಜಿ ವಿಧ್ಯಾರ್ಥಿ ನಾಯಕರಾದ ಸುನಿಲ್ ಕುಮಾರ್ ಬಜಾಲ್, ವಿಧ್ಯಾರ್ಥಿ ನಾಯಕಿಯಾದ ರೇಷ್ಮಾರವರು ಮಾತನಾಡಿದರು.

Comments are closed.