ಕರಾವಳಿ

ಆಯುರ್ವೇದದ ಪ್ರಕಾರ ಹಾಲಿನ ಜೊತೆ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ …ಯಾಕೆ?

Pinterest LinkedIn Tumblr

ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಮನೆಯಲ್ಲಿ ಪೋಷಕರು ಒತ್ತಾಯ ಮಾಡುತ್ತಾರೆ. ಕಾರಣ, ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಉತ್ತಮ ಎಂದು. ‌ಆದರೆ ಅದೇ ಹಾಲನ್ನು ಕೆಲ ಆಹಾರದ ಜೊತೆ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಕೆಡುತ್ತದೆ ಮತ್ತು ಆಯುರ್ವೇದದ ಪ್ರಕಾರ ಈ ಆಹಾರಗಳ ಸೇವನೆ ಮಾಡಿದರೆ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಉಪ್ಪಿನ ಆಹಾರ : ಹಾಲಿನ ಜೊತೆ ಚಿಪ್ಸ್‌, ಮಿಕ್ಷರ್‌, ಲೇಸ್‌ ಮೊದಲಾದ ಆಹಾರ ಸೇವನೆ ಮಾಡುವುದು ಹಾನಿಕಾರಕ, ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಕಾರಣ ಹಾಲಿನ ಪ್ರೊಟೀನ್‌ ನಿಮ್ಮ ದೇಹಕ್ಕೆ ಸೇರುವುದಿಲ್ಲ. ಜೊತೆಗೆ ಸ್ಕಿನ್‌ಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಈರುಳ್ಳಿ : ಆಹಾರದಲ್ಲಿ ಈರುಳ್ಳಿ ಇದ್ದರೆ ಅದರ ಜೊತೆಗೆ ಅಥವಾ ನಂತರ ಹಾಲು ಸೇವನೆ ಮಾಡುವುದನ್ನು ಅವಾಯ್ಡ್‌ ಮಾಡಿ. ಇದನ್ನು ಸೇವನೆ ಮಾಡಿದರೆ ತುರಿಕೆ, ಇನ್‌ಫೆಕ್ಷನ್‌, ಮೊದಲಾದ ಸ್ಕಿನ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಉದ್ದಿನ ಬೇಳೆ : ಉದ್ದಿನ ಬೇಳೆಯಿಂದ ಮಾಡಿದ ಆಹಾರ ಮತ್ತು ಹಾಲು ಎರಡು ಸಹ ಜೀರ್ಣವಾಗಲು ತುಂಬಾ ಸಮಯವಾಗುತ್ತದೆ. ಇದನ್ನು ಜೊತೆಯಾಗಿ ಸೇವನೆ ಮಾಡಿದರೆ ಅಜೀರ್ಣ ಮತ್ತು ಗ್ಯಾಸ್‌ ಸಮಸ್ಯೆ ಉಂಟಾಗುತ್ತದೆ.

ಮೆಣಸು : ಮೆಣಸು ಅಥವಾ ಮಸಾಲೆ ಪದಾರ್ಥದ ಜೊತೆಗೂ ಹಾಲು ಸೇವನೆ ಮಾಡಬೇಡಿ. ಯಾಕೆಂದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನೋವು, ಆಸಿಡಿಟಿ, ಗ್ಯಾಸ್‌, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೀನು : ಮೀನು ತುಂಬಾ ಉಷ್ಣವುಳ್ಳ ಆಹಾರವಾಗಿದೆ. ಮೀನಿನ ಜೊತೆ ಹಾಲು ಸೇವನೆ ಮಾಡಿದರೆ ಗ್ಯಾಸ್‌, ಎಲರ್ಜಿ ಜೊತೆಗೆ ಸ್ಕಿನ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೊಸರು : ಹಾಲು ಮತ್ತು ಮೊಸರಿನ ಉತ್ಪನ್ನಗಳನ್ನು ಜೊತೆಯಾಗಿ ಸೇವನೆ ಮಾಡಬಾರದು. ಇದನ್ನು ಜೊತೆಯಾಗಿ ತಿಂದರೆ ಆಸಿಡಿಟಿ, ಗ್ಯಾಸ್‌, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಬಾಳೆಹಣ್ಣು : ನಿಮಗೆ ಶೀತ, ಕೆಮ್ಮು, ನೆಗಡಿ ಮೊದಲಾದ ಸಮಸ್ಯೆ ಇದ್ದರೆ ಹಾಲಿನ ಜೊತೆಗೆ ಬಾಳೆಹಣ್ಣು ಸೇವನೆ ಮಾಡಬೇಡಿ. ಇದರಿಂದ ಕಫ ಹೆಚ್ಚಾಗುತ್ತದೆ.

Comments are closed.