ಕರಾವಳಿ

ಜೇಸಿಐ ಮುಂಡ್ಕೂರು ಭಾರ್ಗವ ಘಟಕಕ್ಕೆ 25 ಕ್ಕೂ ಅಧಿಕ ಪ್ರಶಸ್ತಿಗಳ ಸಂಭ್ರಮ

Pinterest LinkedIn Tumblr

ಮಂಗಳೂರು : ಪ್ರತಿಷ್ಠಿತ ಭಾರತೀಯ ಜೇಸಿಐನ ವಲಯ 15 ವಲಯ ಸಮ್ಮೇಳನವು ಜೇಸಿಐ ಕಟಪಾಡಿ ಆತಿಥ್ಯದಲ್ಲಿ ಉಡುಪಿಯ ಬಾಸೆಲ್ ಮಿಶೆನ್ ನ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭ  ವಲಯ 15 ರ ಪ್ರತಿಷ್ಠಿತ ಘಟಕ ಜೇಸಿ ಹೆಚ್ ಜಿ ಎಫ್ ಅರುಣಾ ಕುಲಾಲ್ ನೇತೃತ್ವದ ಜೇಸಿಐ ಮುಂಡ್ಕೂರು ಭಾರ್ಗವ ತನ್ನ ಸಾಧನೆಗಳಿಗೆ ಹಾದಿಯಲ್ಲಿ ಸುಮಾರು 25ಕ್ಕೂ ಅಧಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

ವಲಯಾಧ್ಯಕ್ಷ ಪಿಪಿಪಿ ರಾಕೇಶ್ ಕುಂಜೂರುರವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.

ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದ ಕಾರ್ಯಕ್ರಮಗಳಿಗಾಗಿ ವಲಯ ಮಟ್ಟದ ಶ್ರೇಷ್ಠ ಪ್ರಶಸ್ತಿ, ಜೂನಿಯರ್ ಜೇಸಿ ವಿಭಾಗದಲ್ಲಿ ಜೆಜೆಸಿ ಕಾರ್ಯಾಧ್ಯಕ್ಷೆ ಜೆಜೆಸಿ ಅಮೂಲ್ಯ ರಾವ್ ರವರಿಗೆ ರನ್ನರ್ ಅವಾರ್ಡ್, ಜೇಸಿರೆಟ್ ವಿಭಾಗದ ಕಾರ್ಯಕ್ರಮಗಳಿಗೆ ಮನ್ನಣೆ, ರಾಷ್ಟ್ರಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಜೆಜೆಸಿ ಹರೀಶ್ ಗೂಡಿಕಲ್ ರವರಿಗೆ ರನ್ನರ್ ಅವಾರ್ಡ್, ವಲಯ ಮಟ್ಟದ ಮೀಡಿಯ ಕವರೇಜ್ ವಿಭಾಗದಲ್ಲಿ ರನ್ನರ್ ಅವಾರ್ಡ್ ಪಡೆಯುವುದರೊಂದಿಗೆ ಸರ್ಟಿಫಿಕೇಟ್, ಟ್ರೋಫಿ ಹಾಗೂ ಬೆಳ್ಳಿಯ ನಾಣ್ಯದೊಂದಿಗೆ ಬೆಳ್ಳಿಯ ಘಟಕವೆಂಬ ಬಿರುದು, ಜನಹಿತ ಕಾರ್ಯಕ್ರಮಗಳಿಗಾಗಿ ಬೆಳ್ಳಿಯ ಘಟಕವೆಂಬ ಅವಾರ್ಡ್, ಘಟಕದ ಕಾರ್ಯಕ್ರಮಗಳ ಛಾಯಾಚಿತ್ರಗಳ ಪ್ರದರ್ಶನದ ಸ್ಪರ್ಧೆಯಲ್ಲಿ ವಿನ್ನರ್ ಅವಾರ್ಡ್, ಸಾಧನೆಗೆ ಪೂರಕವಾಗಿ ವಲಯಾಧ್ಯಕ್ಷರ ವಿಶೇಷ ಮನ್ನಣೆ, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳಿಗೆ ವಿಶೇಷ ಮನ್ನಣೆ, ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮಕ್ಕೆ ವಿಶೇಷ ಮನ್ನಣೆ, ಜೇಸಿ ಪ್ರಕಾಶ್ ನಾಯ್ಕ್ ರವರಿಗೆ ಸ್ಪೀಚ್ ಕ್ರಾಫ್ಟ್ ಸರ್ಟಿಫಿಕೇಟ್, ಜೂನಿಯರ್ ಜೇಸಿ ವಿಭಾಗದ ಕಾರ್ಯಕ್ರಮಗಳಿಗೆ ಮನ್ನಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮನ್ನಣೆ, ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರ ಮನ್ನಣೆ, ಗೋ ಗ್ರೀನ್ ಕಾರ್ಯಕ್ರಮಗಳಿಗೆ ಮನ್ನಣೆ, ಕ್ರೀಡಾಕೂಟದ ಆಯೋಜನೆಗಳಿಗೆ ಮನ್ನಣೆ, ರಾಷ್ಟ್ರೀಯ ಕಾರ್ಯಕ್ರಮಗಳ ಆಯೋಜನೆಗಾಗಿ ವಲಯ ನಿರ್ದೇಶಕರ ಮನ್ನಣೆ, ವಲಯ 15 ರಲ್ಲಿ ಉತ್ತಮ ಹೊಸ ತರಬೇತುದಾರರಾಗಿ ಪೂರ್ವಾಧ್ಯಕ್ಷ ಜೆ ಎಫ್ ಎಮ್ ಗಿರೀಶ್ ಎಸ್ ಪಿ ಯವರಿಗೆ ಮನ್ನಣೆ, ಟೇಕ್ ಆಫ್ ತರಬೇತಿಗಾಗಿ ಮನ್ನಣೆ, ತರಬೇತಿ ವಿಭಾಗದಲ್ಲಿ ವಿಶೇಷ ಮನ್ನಣೆ, ವಲಯ ಸಮ್ಮೇಳನಕ್ಕೆ ಮೊದಲು ನೋಂದಾವಣೆಗಾಗಿ ಆತಿಥ್ಯ ಘಟಕದಿಂದ ವಿಶೇಷ ಮನ್ನಣೆ, ಘಟಕದಿಂದ ವಲಯಾಧಿಕಾರಿಗಳಾಗಿ ಘಟಕ ಹಾಗೂ ವಲಯಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಪಕಿಣಾಮವಾಗಿ ಮೂವರು ವಲಯಾಧಿಕಾರಗಳಾದ ಜೆ ಎಫ್ ಡಿ ಸುರೇಂದ್ರ ಭಟ್, ಜೆ ಎಫ್ ಎಮ್ ಗಿರೀಶ್ ಎಸ್ ಪಿ ಹಾಗೂ ವಲಯ ನಿರ್ದೇಶಕಿ ಜೆ ಎಫ್ ಎಮ್ ರಮ್ಯಾ ಅರುಣ್ ರಾವ್ ರವರಿಗೆ ವಲಯಾಧ್ಯಕ್ಷರಿಂದ ವಿಶೇಷ ಮನ್ನಣೆ ಹಾಗೂ ಸನ್ಮಾನ, ವಲಯ ತರಬೇತುದಾರರಾದ ಜೆ ಎಫ್ ಎಮ್ ಪ್ರಭಾಕರ್ ಶೆಟ್ಟಿಯವರಿಗೆ ವಲಯಾಧ್ಯಕ್ಷರಿಂದ ಗೌರವ ಸನ್ಮಾನ ಹೀಗೆ ವಲಯ ಸಮ್ಮೆಳನದಲ್ಲಿ ಜೇಸಿಐ ಮುಂಡ್ಕೂರು ಭಾರ್ಗವ ಹಲವು 25 ಕ್ಕೂ ಅಧಿಕ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭ ವಲಯಾಧ್ಯಕ್ಷ ಪಿಪಿಪಿ ರಾಕೇಶ್ ಕುಂಜೂರು, ವಲಯದ ಪ್ರಥಮ ಮಹಿಳೆ ಪಿಪಿಪಿ ಸೌಮ್ಯಾ ರಾಕೇಶ್, ವಲಯ ಉಪಾಧ್ಯಕ್ಷ ಜೆ,ಎಫ್ ಎಮ್ ರಘುನಾಥ್ ನಾಯಕ್, ವಲಯ ತರಬೇತುದಾರರಾದ ಜೆ ಎಫ್ ಎಮ್ ಪ್ರಭಾಕರ್ ಶೆಟ್ಟಿ, ವಲಯಾಧಿಕಾರಿಗಳಾದ ಜೆ ಎಫ್ ಡಿ ಸುರೇಂದ್ರ ಭಟ್, ಜೆ, ಎಫ್ ಎಮ್ ಗಿರೀಶ್ ಎಸ್ ಪಿ, ವಲಯ ನಿರ್ದೇಶಕಿ ಜೆ,ಎಫ್ ಎಮ್ ರಮ್ಯಾ ಅರುಣ್ ರಾವ್, ಘಟಕದ ಪೂರ್ವಾಧ್ಯಕ್ಷರಾದ ಜೆ ಎಫ್ ಎಮ್ ಶಿವರಾಮ್ ಸಪಳಿಗ ಜೇಸಿ ಅರುಣ್ ರಾವ್, ಜೇಸಿ ಸುಧಾಕರ್ ಪೊಸ್ರಾಲ್, ಜೇಸಿ ವೆಂಕಟೇಶ್ ಪೂಜಾರಿ, ಘಟಕದ ಉಪಾಧ್ಯಕ್ಷೆ ಜೇಸಿ ವಿಜಯಲಕ್ಮೀ, ಜೇಸಿರೇಟ್ ಕಾರ್ಯಾಧ್ಯಕ್ಷೆ ಜೇಸಿರೇಟ್ ಸೌಮ್ಯಾ ವೆಂಕಟೇಶ್, ಜೇಸಿ ಉದಯ್ ಕುಮಾರ್, ಹೊಸ ಜೇಸಿಗಳಾದ ಜೇಸಿ ಆಶಾ, ಜೇಸಿ ಹೆಚ್ ಜಿ ಎಫ್ ಜ್ಯೋತಿ, ಜೇಸಿ ಪ್ರಶಾಂತ್ ಕುಮಾರ್, ಜೇಸಿ ಅಶ್ವಿನಿ, ಜೇಸಿ ಪ್ರತಿಮಾ ಶೆಟ್ಟಿ, ಜೇಸಿ ತ್ರಿವೇಣಿ, ಜೇಸಿ ಹೆಚ್ ಜಿ ಎಫ್ ಸುಜಾತ ಕುಲಾಲ್, ಜೇಸಿ ಹೆಚ್ ಜಿ ಎಫ್ ಲತಾ ಕುಲಾಲ್, ಜೆಜೆಸಿ ಕಾರ್ಯಾಧ್ಯಕ್ಷೆ ಜೆಜೆಸಿ ಅಮೂಲ್ಯ ರಾವ್, ಜೆಜೆಸಿ ಹರ್ಷಿತಾ ಕುಲಾಲ್, ಜೇಸಿಲೆಟ್ ಆದ್ಯಾ, ಜೇಸಿಲೆಟ್ ಯಶ್ ಹಾಗೂ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments are closed.