ಕರಾವಳಿ

ಕುಮಾರ ಸ್ವಾಮಿ ಅವರ ಪಕ್ಷದ ಮತದಾರರಿಗೆ ಮಾತ್ರ ಮುಖ್ಯಮಂತ್ರಿಯೇ..?

Pinterest LinkedIn Tumblr

ರೈತರ ಬಗೆಗಿನ ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನ ವಿರೋಧಿ : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು : ಕಬ್ಬು ಬೆಳೆಗಾರರ ಕುರಿತು ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿ ಕಾರಿದ್ದಾರೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರ ಸ್ವಾಮಿಯವರು ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ನೊಂದ ರೈತರಿಗೆ ಬರೆ ಎಳೆಯುತ್ತಿರುವುದು ನಿಜಕ್ಕೂ ಖಂಡನೀಯ ಘಟನೆಯಾಗಿದೆ.ಚುನಾವಣೆಯಲ್ಲಿ ತನಗೆ ಮತ ನೀಡಿಲ್ಲ ಎನ್ನುವ ಕೋಪವನ್ನು ಅಧಿಕಾರ ಹಿಡಿದ ಮೇಲೆ ಕುಮಾರ ಸ್ವಾಮಿಯವರು ಜನ ಸಾಮಾನ್ಯರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕುಮಾರ ಸ್ವಾಮಿಯವರು ಕೇವಲ ಅವರ ಪಕ್ಷದ ಮತದಾರರಿಗೆ ಮಾತ್ರ ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದ್ದಾರೆ.

ಇಂತಹ ದ್ವೇಷ ರಾಜಕಾರಣ ಘನ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ.ರೈತ ತಾನು ಕಹಿ ನುಂಗಿ ರಾಜ್ಯಕ್ಕೆ ಸಿಹಿ ನೀಡುತಿದ್ದಾರೆ.ಒಂದು ಕ್ಷಣ ಅವರ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಖ್ಯಮಂತ್ರಿಗಳು ಇಂತಹ ಮಾತನ್ನು ಆಡುತ್ತಿರಲಿಲ್ಲ.ಅದಲ್ಲದೆ ಒಬ್ಬ ರೈತ ಸ್ತ್ರೀಯ ಬಗ್ಗೆ ಮಾನಹಾನಿಕರವಾಗಿ,ರೈತರ ಬಗ್ಗೆ ಅಮಾನವೀಯವಾಗಿ ಮಾತನಾಡಿದ ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

Comments are closed.