ಕರಾವಳಿ

ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಏಳು ಮಂದಿ ಸೆರೆ : ನಗದು ವಶ

Pinterest LinkedIn Tumblr

ಮಂಗಳೂರು, ನವೆಂಬರ್.19: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು (ಜೂಜಾಟ) ಆಡುತ್ತಿದ್ದ ಆರೋಪದ ಮೇಲೆ 7 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಜುನಾಥ ಶೆಟ್ಟರ್ (26), ಮಂಜುನಾಥ ಹನುಮಂತಪ್ಪ ಯಲಬರ್ದಿ (23), ರಂಗನಾಥ (43), ಪ್ರತಾಪ್ (36), ಖಾದರ್ ಶಾ (25), ನಾಗಪ್ಪ (36) ಮತ್ತು ಮುತ್ತಪ್ಪ (38) ಎಂದು ಗುರುತಿಸಲಾಗಿದೆ.. ಈ ಸಂದರ್ಭ ಕೆಲವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ನಗರದ ಪಡುಶೆಡ್ಡೆ ಗ್ರಾಮದ ಮಂಜಲ್ಪಾದೆ ಸಮೀಪ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳಿಂದ ಆಟಕ್ಕೆ ಬಳಸಿ ಇಸ್ಪೀಟು ಎಲೆಗಳು, ಪಣವಾಗಿಟ್ಟಿದ್ದ 22,410ರೂ. ನಗದು ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಉತ್ತರ ವಿಭಾಗದ ಎಸಿಪಿ ರಾಜೇಂದ್ರ ಅವರ ಮಾರ್ಗದರ್ಶನದಂತೆ ಕಾವೂರು ಠಾಣಾ ನಿರೀಕ್ಷಕ ಕೆ.ಆರ್. ನಾಯ್ಕ, ಹೆಡ್ ಕಾನ್‌ಸ್ಟೇಬಲ್ ವಿಶ್ವನಾಥ, ದುರ್ಗಾಪ್ರಸಾದ್ ಶೆಟ್ಟಿ, ರಾಜಶೇಖರ್ ಗೌಡ, ಪಿಸಿಗಳಾದ ಕೇಶವ್, ವಿನಯ್ ಕುಮಾರ್ ಎಚ್.ಕೆ., ರಶೀದ್ ಶೇಖ್, ಸಿಖಂದರ್ ಚಿಂಚಲಿ, ಶರಣಪ್ಪ, ಕೃಷ್ಣಪ್ಪ, ಶಿವರಾಜ್ ಅಸೋಡೆ, ಕಿರಣ್ ಕುರಿಮನಿಯವರು ಭಾಗವಹಿಸಿದ್ದರು.

Comments are closed.