ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ ಆದೇಶ ಜಾರಿಗೆ ಸಮಯಾವಕಾಶ ಕೋರಿ ‘ಸುಪ್ರೀಂ’ಗೆ ದೇವಸ್ವಂ ಮಂಡಳಿ ಅರ್ಜಿ

Pinterest LinkedIn Tumblr

ಶಬರಿಮಲೆ: ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶ ನೀಡಿದ್ದರು. ಈವರೆಗೂ ಯಾವುದೇ ಮಹಿಳೆಯರು ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ದೇವಸ್ವಂ ಮಂಡಳಿ ಈ ಆದೇಶ ಜಾರಿಗೆ ತರಲು ಇನ್ನು ಸ್ವಲ್ಪ ದಿನ ಸಮಯಬೇಕಿದೆ ಎಂದು ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ. ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವಲ್ಲಿ ಮಂಡಳಿ ವಿಫಲವಾಗಿದ್ದು, ಮಹಿಳೆಯರ ಪ್ರವೇಶಕ್ಕೆ ನಿರಾಕರಿಸಿ ಮಂಡಳಿ ಕೂಡ ಪ್ರತಿಭಟನೆ ನಡೆಸಿದೆ.

ಸೆ. 28ರಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಇದು ಮೂರನೇ ಬಾರಿ ದೇವಾಲಯ ಬಾಗಿಲು ತೆರೆದಿದ್ದು, ಇದುವರೆಗೂ 50 ವರ್ಷ ವಯೋಮಾನ ಒಳಗಿನ ಒಬ್ಬ ಮಹಿಳೆ ಕೂಡ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಈ ಹಿಂದೆ ಎರಡು ಬಾರಿ ಬಾಗಿಲು ತೆಗೆದಾಗಲು ಮಹಿಳೆಯರು ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಬಲಪಂಥೀಯ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ಅಲ್ಲದೇ ದೇವಾಲಯದ ತಂತ್ರಿ ಕೂಡ ಮಹಿಳೆಯರು ದೇವಾಲಯ ಪ್ರವೇಶಿಸಿದರೆ, ಬಾಗಿಲು ಬಂದ್​ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸುಪ್ರೀಂ ತೀರ್ಪಿನ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕೂಡ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು ಆದರೆ, ಈ ಅರ್ಜಿಯನ್ನು ಜ.22ಕ್ಕೆ ನ್ಯಾಯಾಲಯ ಮುಂದೂಡಿತು.

Comments are closed.