ಹೌದು ನಾವು ತಂಪು ಪಾನೀಯಗಳಿಗೆ ಮಾರು ಹೋಗಿ ಹಲವಾರು ರೋಗಗಳನ್ನು ನಾವೇ ತಂದು ಕೊಳ್ಳುತ್ತಿದ್ದೇವೆ, ಆದರೆ ಇವೆಲ್ಲ ಬಿಟ್ಟು ಕಬ್ಬಿನ ಹಾಲು ಕುಡಿಯಿರಿ ಮತ್ತು ಇದರಿಂದ ಸಿಗುವ ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಂಡು ಆರೋಗ್ಯವಾಗಿರಿ.
ಕಬ್ಬಿನಹಾಲು ತ್ವಚೆಯ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಜ್ಯೂಸು ಅನ್ನು ಸೇವಿಸುವುದರಿಂದ ತ್ವಚೆ ಮೃದುವಾಗುತ್ತದೆ ಮತ್ತು ಕಾಂತಿಯುತವಾಗಿ ಆರೋಗ್ಯವಾಗಿರುತ್ತದೆ. ತ್ವಚೆ ಸದಾ ಯಂಗ್ ಆಗಿ ಕಾಣುವಂತೆ ಮಾಡಲು ಕಬ್ಬಿನಹಾಲು ಸಹಕಾರಿ.
ಕಬ್ಬಿನ ಹಾಲಿನಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಪೊಟ್ಯಾಶಿಯಮ್ ಹಾಗು ಇತರೆ ಪೌಷ್ಟಿಕಾಂಶಗಳಿರುವುದರಿಂದ ದೇಹಕ್ಕೆ ತ್ವರಿತವಾಗಿ ಎನರ್ಜಿಯನ್ನು ನೀಡುತ್ತದೆ ಆದ್ದರಿಂದ ನಿಮಗೆ ಸುಸ್ತು, ಅಶಕ್ತತೆ ಎನಿಸಿದಾಗ ಕಬ್ಬಿನಹಾಲು ಸೇವಿಸಿದರೆ ದೇಹಕ್ಕೆ ಎನರ್ಜಿ ಸಿಗುತ್ತದೆ.
ಮೂತ್ರನಾಳಗಳಲ್ಲಿ ಉಂಟಾಗುವ ಇನ್ಸ್ಪೆಕ್ಷನ್ ಗೆ ಕಬ್ಬಿನಹಾಲಿನ ಜ್ಯೂಸ್ ಉತ್ತಮ. ಇದು ಸೋಂಕನ್ನು ದೂರ ಮಾಡುವುದರ ಜೊತೆಗೆ ಕಿಡ್ನಿ ಸ್ಟೋನ್ಗಳು ಹೊರಹೊಗಲು ಸಹಾಯ ಮಾಡುತ್ತದೆ ಮತ್ತು ಸ್ಟೋನ್ ಉಂಟಾಗದಂತೆ ತಡೆಯುತ್ತದೆ.
ಕಬ್ಬಿನ ಹಾಲಿನಲ್ಲಿ ಅನೇಕ ರೀತಿಯ ಮಿನರಲ್ಸ್ಗಳಿವೆ ಇವು ಬಾಯಿಯ ಆರೋಗ್ಯವನ್ನು ಕಾಪಾಡಿ ವಾಸನೆಯುಕ್ತ ಉಸಿರಾಟ, ಹಲ್ಲು ಹಾಳಾಗುವುದನ್ನು ತಡೆಯುತ್ತದೆ.
ಸ್ತನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್ ಕ್ಯಾನ್ಸರ್ನಿಂದ ಬಳಲುತ್ತಿರುವವರು ಕೂಡ ಕಬ್ಬಿನಹಾಲಿನ ಜ್ಯೂಸ್ನ್ನು ಕುಡಿದರೆ ಒಳ್ಳೆಯದು.
ಕಬ್ಬಿನಹಾಲಿನಲ್ಲಿ ಪೊಟ್ಯಾಶಿಯಮ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ವಿವಿಧ ರೀತಿಯ ಸೋಂಕುಗಳಿಂದ ಜಿರ್ಣಾಂಗವ್ಯವಸ್ಥೆ ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.
ಜಾಯಿಂಡೀಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಬ್ಬಿನಹಾಲನ್ನು ಸೇವಿಸಲು ಸಲಹೆ ನೀಡುತ್ತಾರೆ. ಕಾರಣ ಕಬ್ಬಿನಹಾಲು ಲಿವರ್ಗೆ ಶಕ್ತಿ ನೀಡುತ್ತದೆ ಮತ್ತು ಜಾಯಿಂಡೀಸ್ ಸಮಸ್ಯೆಯಿಂದ ಕಳೆದುಹೋದ ಪೌಷ್ಠಿಕಾಂಶವನ್ನು ಮರಳಿ ನೀಡುತ್ತದೆ.
Comments are closed.