ರಾಷ್ಟ್ರೀಯ

ಅಮೃತಸರ: ಗ್ರೆನೇಡ್ ದಾಳಿಗೆ 3 ಸಾವು; ಪಾಕ್ ಕೈವಾಡದ ಶಂಕೆ

Pinterest LinkedIn Tumblr


ಚಂಡೀಗಢ: ಅಮೃತಸರದಲ್ಲಿನ ರಾಜಸಾನ್ಸಿ ಗ್ರಾಮದಲ್ಲಿರುವ ನಿರಂಕಾರಿ ಪಂಥದ ಪ್ರಾರ್ಥನಾ ಭವನದಲ್ಲಿ ಗ್ರೆನೇಡ್ ಸ್ಫೋಟವೊಂದಕ್ಕೆ ಮೂರು ಮಂದಿ ಮೃತಪಟ್ಟು10 ಜನರು ಗಾಯಗೊಂಡಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಐಜಿ (ಗಡಿ) ಸುರೀಂದರ್ ಪಾಲ್ ಸಿಂಗ್ ಪರ್ಮಾರ್ ” ಅಮೃತಸರ ರಾಜಸಾನ್ಸಿ ಗ್ರಾಮದ ನಿರಾಂಕರಿ ಭವನದಲ್ಲಿ ನಡೆದ ಸ್ಫೋಟದಲ್ಲಿ 3 ಮೃತರು ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ ಮೂವರು ಮುಖಕ್ಕೆ ಮುಖವಾಡ ಧರಿಸಿ ಗ್ರೆನೇಡ್ ದಾಳಿಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಗುಪ್ತಚರ ಇಲಾಖೆ ಪೋಲಿಸ್ ಠಾಣೆಗಳಿಗೆ ಎಚ್ಚರಿಕೆಯನ್ನು ನೀಡಿದೆ.ಈ ಘಟನೆಯ ಕೈವಾಡ ಹಿಂದಿರುವ ಶಕ್ತಿಗಳ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಪಂಜಾಬ್ ಪೋಲಿಸರಿಂದ ಬಂದಿಲ್ಲ. ಆದರೆ ಈ ಕೃತ್ಯದ ಹಿಂದೆ ಪಾಕಿಸ್ತಾನದ ಗೂಢಚರ್ಯ ಸಂಸ್ಥೆ ಐಎಸ್ಐ ನ ಕೈವಾಡದ ಶಂಕೆಯಿದೆ. ಸಾಯಂಕಾಲ ಈ ಘಟನೆಯ ಬಗ್ಗೆ ಪಂಜಾಬ್ ನ ಡಿಜಿಪಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಏತನ್ಮಧ್ಯೆ, ಸ್ಫೋಟದ ಸಮೀಪದ ಪ್ರದೇಶಗಳಿಂದ ಸಿ.ಸಿ.ಟಿ.ವಿ. ತುಣುಕನ್ನು ಪಡೆದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.