ಕರಾವಳಿ

ಕದ್ರಿ ಶ್ರೀ ಕ್ಷೇತ್ರ : ಬ್ರಹ್ಮಕಲಶೋತ್ಸವ ಪ್ರತ್ಯೇಕ ಸೇವಾ ಕೌಂಟರ್ ಆರಂಭ

Pinterest LinkedIn Tumblr

ಮಂಗಳೂರು : ಧಾರ್ಮಿಕದತ್ತಿ‌ಇಲಾಖೆಯ ವ್ಯಾಪ್ತಿಗೊಳಪಟ್ಟಿರುವ ‘ಎ’ ವರ್ಗದ‌ಅಧಿಸೂಚಿತ ದೇವಾಲಯಗಳಲ್ಲೊಂದಾದ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ೨೦೧೯ರ ಮೇ ೯ರಂದು ಬ್ರಹ್ಮಕಲಶೋತ್ಸವಜರಗಿಸಲು ದೇವಳದ ವ್ಯವಸ್ಥಾಪನಾ ಸಮಿತಿ ಹಾಗೂ ಸಾರ್ವಾಜನಿಕ ಭಕ್ತಾದಿಗಳಿಂದೊಡಗೂಡಿದ ಬ್ರಹ್ಮಕಲಶೋತ್ಸವ ಸಮಿತಿಯು ನಿರ್ಧರಿಸಿದ್ದು. ಈ ಬಗ್ಗೆ ಪ್ರತ್ಯೇಕ ಸೇವಾ ಕೌಂಟರನ್ನು‌ ಆರಂಭಿಸಲಾಗಿದೆ.

ದೇವಳದ ವ್ಯವಸ್ಥಾಪನಾ ಸಮಿತಿಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ‌ಅಧ್ಯಕ್ಷ ಎ. ಜನಾರ್ದನ ಶೆಟ್ಟಿಯವರ ನೇತೃತ್ವದಲ್ಲಿಕ್ಷೇತ್ರದ ತಂತ್ರಿಗಳಾದ ವಿಠಲದಾಸತಂತ್ರಿಯವರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ರಂಜನ್‌ಕುಮಾರ್ ಬಿ.ಎಸ್. , ಶ್ರೀಮತಿ ಚಂದ್ರಕಲಾ ದೀಪಕ್, ಶ್ರೀಮತಿ ಪುಷ್ಪಲತಾ ಶೆಟ್ಟಿ, ಶ್ರೀ ಹರಿನಾಥಜೋಗಿ, ಶ್ರೀ ದಿನೇಶ್‌ದೇವಾಡಿಗ, ಶ್ರೀ ದಯಾಕರ ಮೆಂಡನ್, ಶ್ರೀ ಸುರೇಶ್‌ಕುಮಾರ್, ಪ್ರಧಾನ್‌ಅರ್ಚಕ ಹಾಗೂ ಸದಸ್ಯರಾದ ಶ್ರೀ ರಾಘವೇಂದ್ರ ಭಟ್ ಮತ್ತು ಮಹಾನಗರ ಪಾಲಿಕೆ ಮಂಗಳೂರು ಇಲ್ಲಿನಮೇಯರ್ ಶ್ರೀ ಕೆ. ಭಾಸ್ಕರ್‌ಅವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ‌ಉಪಾಧ್ಯಕ್ಷರು, ಸಂಘಟನಾಕಾರ್ಯದರ್ಶಿಗಳು, ಸದಸ್ಯರು, ಊರಿನ ಹತ್ತು ಸಮಸ್ತರು ಹಾಗೂ ಭಕ್ತಾದಿಗಳು ಹಾಜರಿದ್ದರು.

Comments are closed.