ಬೆಂಗಳೂರು: ಬೆಂಗಳೂರಿನಿಂದ ಚಿಂತಾಮಣಿ ರಸ್ತೆಯಲ್ಲಿ ತೆರಳುತ್ತಿದ್ದ ಪೇಜಾವರ ಶ್ರೀಗಳ ಎಸ್ಕಾರ್ಟ್ (ಬೆಂಗಾವಲು) ವಾಹನಕ್ಕೆ ಇಂಡಿಗೋ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿಗಳು ಸ್ಥಳದಲ್ಲೆ ಸಾವನ್ನಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಪನಹಳ್ಳಿ ಎಂಬಲ್ಲಿ ಭಾನುವಾರ ನಡೆದಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊಸಕೋಟೆ ಮುಖಾಂತರ ಚಿಂತಾಮಣಿ ರಸ್ತೆಯಲ್ಲಿ ತೆರಳುತ್ತಿದ್ದ ಪೇಜಾವರ ಶ್ರೀಗಳ ಕಾರಿನ ಮುಂದೆ ಸಾಗುತ್ತಿದ್ದ ಪೊಲೀಸ್ ಎಸ್ಕಾರ್ಟ್ ವಾಹನಕ್ಕೆ, ಚಿಂತಾಮಣಿ ಕಡೆಯಿಂದ ಎದುರಿನಿಂದ ಅತಿವೇಗವಾಗಿ ಬಂದ ಇಂಡಿಗೋ ಕಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಂಡಿಗೋ ಕಾರಿನಲ್ಲಿದ್ದ ಚಿಂತಾಮಣಿ ಮೂಲದ ದಂಪತಿಗಳಾದ ರಾಮಕೃಷ್ಣಯ್ಯ (63) ಮತ್ತು ಸರ್ವಲೋಚನಂ(55) ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎಸ್ಕಾರ್ಟ್ ವಾಹನಕ್ಕೆ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಇನ್ನೊಂದು ಕಾರಿನಲ್ಲಿ ಸಂಚರಿಸುತ್ತಿದ್ದ ಪೇಜಾವರ ಶ್ರೀಗಳು ಪಾರಾಗಿದ್ದಾರೆ. ಇನ್ನೂ ಎಸ್ಕಾರ್ಟ್ ಕಾರಿನಲ್ಲಿದ್ದ ಎಎಸ್ಐ ಶಂಭಯ್ಯ ಕಾಲಿಗೂ ಸಹ ಗಂಭಿರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಆಸ್ವತ್ರೆಗೆ ದಾಖಲಿಸಲಾಗಿದೆ.
Comments are closed.