ಕರಾವಳಿ

ವಿಷಯುಕ್ತ ಆಹಾರ(Food Poison)ದಿಂದಾಗುವ ಅಡ್ಡ ಪರಿಣಾಮಗಳನ್ನು ಹೋಗಲಾಡಿಸುವ ಗುಣ ಈ ಸೊಪ್ಪಿಗಿದೆ.

Pinterest LinkedIn Tumblr

ಜೀರ್ಣಕ್ರಿಯೆಯನ್ನು ಸುಧಾರಿಸುವ ಏಲಕ್ಕಿಯು ವಾಕರಿಕೆ, ವಾಂತಿ ಮೊದಲಾದ ಫುಡ್‌ ಪಾಯ್ಸನ್‌ ರೋಗ ಲಕ್ಷ ಣಗಳನ್ನು ಹೋಗಲಾಡಿಸುತ್ತದೆ. ಶುಂಠಿಯು ವಾಕರಿಕೆ, ವಾಂತಿ ಮೊದಲಾದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಚಹಾ ಅಥವಾ ಜ್ಯೂಸ್‌ನಲ್ಲಿ ಶುಂಠಿಯನ್ನು ಬಳಸಿಕೊಳ್ಳಬಹುದು. ಶುಂಠಿಯನ್ನು ಜಗಿದು ರಸ ಕುಡಿದರೆ ಹೊಟ್ಟೆಯನ್ನು ಹಗುರವಾಗಿಸುತ್ತದೆ.

ತುಳಸಿ ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ. ಜತೆಗೆ ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಬೆಳೆಯದಂತೆ ತಡೆಯುತ್ತದೆ. ತುಳಸಿ ಜ್ಯೂಸ್‌ ತಯಾರಿಸಿ ಪ್ರತಿನಿತ್ಯ ಕುಡಿಯುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.

ಫುಡ್‌ ಪಾಯ್ಸನ್‌ನಿಂದ ಉಂಟಾಗುವ ಯಾವುದೇ ಅಡ್ಡ ಪರಿಣಾಮಗಳಿಗೆ ನಿಂಬೆಯು ಪರಿಹಾರ ನೀಡುತ್ತದೆ. ಇದು ಸೋಂಕಿತ ವೈರಸ್‌ಗಳನ್ನು ಕೊಲ್ಲುತ್ತದೆ. ನಿಂಬೆ ಜ್ಯೂಸ್‌ ತಯಾರಿಸಿ ನಿತ್ಯವೂ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

ಜೀರಿಗೆಯು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಒಂದು ಕಪ್‌ ನೀರಿಗೆ ಜೀರಿಗೆ ಹಾಕಿ ಕುದಿಸಿ ಕುಡಿದರೆ ನಿಮಗೆ ಒಳ್ಳೆಯದು.ಬೆಳ್ಳುಳ್ಳಿ ರೋಗನಿರೋಧಕ, ಆ್ಯಂಟಿ ಬ್ಯಾಕ್ಟೀರಿಯಾ ಅಂಶಗಳನ್ನು ಒಳಗೊಂಡಿದ್ದು, ಭೇದಿ ಮತ್ತು ಹೊಟ್ಟೆ ನೋವಿಗೆ ರಾಮಬಾಣ. ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿ ಇದ್ದರೆ ಒಳ್ಳೆಯದು. ಫುಡ್‌ ಪಾಯ್ಸನ್‌ನಿಂದಾಗುವ ಅಡ್ಡ ಪರಿಣಾಮಗಳನ್ನು ಹೋಗಲಾಡಿಸುವ ಗುಣ ಕೊತ್ತಂಬರಿ ಸೊಪ್ಪಿನಲ್ಲಿದೆ. ಕೊತ್ತಂಬರಿ ಸೊಪ್ಪನ್ನು ದೈನಂದಿನ ಆಹಾರದಲ್ಲಿ ಬಳಸುವುದು ಉತ್ತಮ.

Comments are closed.