ಸಾಮಾನ್ಯವಾಗಿ ರಕ್ತದ ಒತ್ತಡ ಸಮಸ್ಯೆಯು ಎಲ್ಲ ಕಡೆ ಸರ್ವೆ ಸಾಮಾನ್ಯವಾಗಿಬಿಟ್ಟಿದೆ.ಎಲ್ಲರೂ ಇತಂಹ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆಂದು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಈ ರೀತಿಯ ಸಮಸ್ಯೆಯನ್ನು ನಿಯಂತ್ರಿಸಲು ಕೇವಲ ಜೌಷಧದಿಂದ ಮಾತ್ರ ಸಾದ್ಯವಾಗುವುದಿಲ್ಲ ಬದಲಿಗೆ ಆಹಾರ ಪಧಾರ್ಥಗಳಿಂದಲೂ ಪ್ರಯತ್ನಿಸಬೇಕು. ಈ ಲೇಖನದಲ್ಲಿ ರಕ್ತದ ಒತ್ತಡ ಸಮಸ್ಯೆ ನಿಯಂತ್ರಣಕ್ಕಾಗಿ ಕೆಲವು ಆಹಾರ ಪದಾರ್ಥಗಳ ಪಟ್ಟಿ ನೀಡಲಾಗಿದೆ ಅವುಗಳಿಂದ ನೀವು ದೂರ ಇದಷ್ಠು ನಿಮಗೆ ಉತ್ತಮ….
ಮೊದಲನೇದಾಗಿ ಪಿಜ್ಜಾ-ಬರ್ಗರ್
ಪಿಜ್ಜಾ ಬರ್ಗರ್ ಅನ್ನು ತುಂಬಾ ಬಿಪಿ ಇರುವವರು ತಿನ್ನಬಾರದು ಏಕೆಂದರೆ ಇದರಲ್ಲಿ ಸೋಡಿಯಂ ಅನ್ನು ಜಾಸ್ತಿ ಬಳಕೆ ಮಾಡುತ್ತಾರೆ, ಈ ಸೋಡಿಯಂ ನಲ್ಲಿ ಉಪ್ಪಿನ ಪದಾರ್ಥ ಜಾಸ್ತಿಯಾಗಿರುತ್ತದೆ ಇದರಿಂದ ಬಿಪಿ ಹೆಚ್ಚಾಗುವ ಸಾಧ್ಯತೆ ತುಂಬಾ ಇರುತ್ತದೆ. ಅದರಿಂದ ಪಿಜ್ಜಾ ಬರ್ಗರ್ ಇಂದ ಸ್ವಲ್ಪ ದೂರ ಇರುವುದು ಒಳಿತು.
ಚಾಕ್ಲೇಟ್
ಚಾಕ್ಲೆಟ್ ಯಾಕೆ ತಿನ್ನಬಾರದು ಗೋತ್ತೆ..? ತುಂಬಾ ರಕ್ತದ ಒತ್ತಡ ಇರುವವರು ಇದನ್ನು ತಿನ್ನಬಾರದು ಯಾಕೆಂದರೆ, ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಹಾಗೂ ಸಕ್ಕರೆ ಪದಾರ್ಥಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಇದರಿಂದ ನಿಮಗೆ ಇರುವಂತಹ ರಕ್ತದ ಒತ್ತಡ ಇನ್ನು ಸ್ವಲ್ಪ ಜಾಸ್ತಿ ಆಗುವ ಚಾನ್ಸ್ ಇರುತ್ತದೆ. ಇದರ ಬದಲಾಗಿ ನೀವು ಹಣ್ಣಿನ ಪದಾರ್ಥವನ್ನು ತಿಂದರೆ ನಿಮ್ಮ ಬೇಕಾಗುವಂತಹ ಸಾಕಷ್ಟು ಕ್ಯಾಲೋರಿಗಳನ್ನು ಯಾವುದೇ ನಿಮ್ಮ ದೇಹಕ್ಕೆ ರಕ್ತದ ಒತ್ತಡವನ್ನು ಹೆಚ್ಚಿಸುವಂತಹ problem ಇರುವುದಿಲ್ಲ.
ತಂಪು ಪಾನೀಯಗಳು
ತಂಪು ಪಾನೀಯಗಳಲ್ಲಿ ಸಹಿತ ಜಾಸ್ತಿ ಸೋಡಿಯಮ್ ಅನ್ನು ಬಳಕೆ ಮಾಡಲಾಗುತ್ತದೆ ಅದರಿಂದ ನಿಮಗೆ ರಕ್ತ ಒತ್ತಡ ಇನ್ನು ಸ್ವಲ್ಪ ಜಾಸ್ತಿ ಆಗುವ ಚಾನ್ಸ್ ಇರುತ್ತದೆ. ಹಾಗೆಯೇ ತಂಪು ಪಾನೀಯಗಳಲ್ಲಿ ಉಪ್ಪಿನ ಮಿಶ್ರಣ ಹಾಗೂ ಸಕ್ಕರೆ ಮಿಶ್ರಣ ಕುಡಿಯುವುದರಿಂದ ನಿಮಗೆ ಬಿಪಿ ಬರಬಹುದು.
ಕುಡಿಯುವುದು ಹಾಗೂ ಮದ್ಯ ವಸನ
ಕುಡಿಯುವುದು ದೇಹಕ್ಕೆ ತುಂಬಾ ಒಳ್ಳೆಯದು ಹಾಗೆ ಜಾಸ್ತಿ ಕುಡಿತ ದೇಹಕ್ಕೆ ತುಂಬಾ ಕೆಟ್ಟದ್ದು, ನೀವು ಏನಾದರೂ ದಿನ ನಿತ್ಯ ಒಂದು ಲೋಟ Wine ಅಥವಾ ಒಂದು ಲೋಟ ಬಿಯರ್ ಕುಡಿದರೆ ನಿಮ್ಮ ದೇಹಕ್ಕೆ ಸ್ವಲ್ಪ ಸಹಾಯಕಾರಿ ಆಗಬಹುದು. ಆದರೆ ಇದನ್ನು ಮೀರಿ ಕುಡಿದರೆ ನಿಮ್ಮ ದೇಹಕ್ಕೆ ಕೆಟ್ಟದಾಗುವುದು ಕಟ್ಟಿಟ್ಟ ಬುತ್ತಿ. ಇದರಲ್ಲಿರುವ ಅಲ್ಕೊಲ ಮಿಶ್ರಣವು ನಿಮ್ಮ ರಕ್ತದ ಒತ್ತಡವನ್ನು ನಿಮಗೆ ಗೊತ್ತಾಗದ ಹಾಗೆ ಸರಾಸರಿ 40 ವರೆಗೂ ಹೆಚ್ಚಿಸುತ್ತದೆ. ಇದರಿಂದ ನಿಮಗೆ ಬಿಪಿ ಹೆಚ್ಚಾಗುವುದರಿಂದ ತುಂಬ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಉಪ್ಪಿನಕಾಯಿ ತಿನ್ನುವುದು
ಎಲ್ಲರಿಗೂ ಗೊತ್ತಿರುವ ಹಾಗೆ ಉಪ್ಪಿನಕಾಯಿ ಉಪ್ಪಿನಲ್ಲಿ ಸೇರಿಸಿ ಮಾಡಿರುತ್ತಾರೆ, ಅದರಲ್ಲಿ ಸಾಕಷ್ಟು ಉಪ್ಪಿನ ಪ್ರಮಾಣ ಹೆಚ್ಚಿರುವುದರಿಂದ ಯಾರಿಗೆ ರಕ್ತದ ಒತ್ತಡ ಇದೆ ಅವರು ಉಪ್ಪಿನಕಾಅಯಿ ತಿನ್ನಬಾರದು.
Comments are closed.