
ಮಂಗಳೂರು: ಕೊಡಗು ಪ್ರವಾಹ ಪೀಡಿತರ ನೆರವಿಗಾಗಿ ನಗರದ ಐಟಿ ಕಂಪನಿ ಸೆಮ್ನಾಕ್ಸ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ವತಿಯಿಂದ ರೂ. 5,12,000 ದೇಣಿಗೆಯಾಗಿ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ನೀಡಲಾಯಿತು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಇಕ್ಬಾಲ್ ಮೊಹಮ್ಮದ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಶ್ರೀ ಎಂ.ಎನ್. ಪೈ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಸಸಿಕಾಂತ್ ಸೆಂಥಿಲ್ ಎಸ್. ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಈ ಮೊತ್ತವನ್ನು ಹಸ್ತಾಂತರಿಸಿದರು.
ಉದ್ಯೋಗಿಗಳ ಸ್ವಯಂಪ್ರೇರಿತ ವೈಯಕ್ತಿಕ ದೇಣಿಗೆಗಳಿಂದ ಈ ಮೊತ್ತವನ್ನು ಸಂಗ್ರಹಿಸಲಾಯಿತು, ಹಾಗು ಇದಕ್ಕೆ ಕಂಪನಿಯು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ತನ್ನ ಕೊಡುಗೆಯನ್ನು ಸೇರಿಸಿತು.ಸೆಮ್ನಾಕ್ಸ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್, ಮನರಂಜನೆ ಮತ್ತು ವಿರಾಮ ಉದ್ಯಮಕ್ಕಾಗಿ ಸಮಗ್ರ ಐಟಿ ಪರಿಹಾರಗಳನ್ನು ನಿರ್ಮಿಸುತ್ತದೆ. ಕಂಪನಿಯ ಉತ್ಪನ್ನಗಳು ಪ್ರಮುಖ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ಅವುಗಳನ್ನು ಕೇಂದ್ರೀಕೃತವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ ಎಂದು ಈ ವೇಳೆ ಕಂಪನಿಯ ಅಧಿಕಾರಿಗಳು ತಿಳಿಸಿದರು.
ಸೆಮ್ನಾಕ್ಸ್ ಕಂಪನಿಯ ಪರಿಹಾರಗಳು 40+ ದೇಶಗಳಲ್ಲಿ 1000+ ಸೈಟ್‌ಗಳಲ್ಲಿ ಸಕ್ರಿಯವಾಗಿವೆ ಹಾಗೂ ಹಲವು ಉದ್ಯಮ ಮುಖಂಡರು ಶ್ಲಾಘಿಸಿದ್ದಾರೆ. 2009, 2013, 2014, ಮತ್ತು 2016 ರಲ್ಲಿ ಸತತ ವಾರ್ಷಿಕ ಐಎಎಪಿಐ ಸಮ್ಮೇಳನಗಳಲ್ಲಿ ಅವರ ಉತ್ಪನ್ನ ಸೂಟ್ ಪಾರ್‌ಫೈಟ್ ವರ್ಷದ ಹೊಸ ನಾವಿನ್ಯತೆಯುಳ್ಳ ಉತ್ಪನ್ನ’ ಪ್ರಶಸ್ತಿಯನ್ನು ಗೆದ್ದಿದೆ. ಕಂಪನಿಯ ನಗರ ಕಚೇರಿ ಬಳ್ಳಾಲ್ ಭಾಗ್‌ನಲ್ಲಿರುವ ಪುಂಜ ಕಟ್ಟಡದಲ್ಲಿದೆ ಎಂದವರು ವಿವರಿಸಿದರು.
Comments are closed.