ಕರಾವಳಿ

ಉಡುಪಿಯಲ್ಲಿ 8 ದಿನದಿಂದ ನಡೆದ ಮರಳು ಪ್ರತಿಭಟನೆಗೆ ತಾತ್ಕಾಲಿಕ ಅಂತ್ಯ

Pinterest LinkedIn Tumblr

ಉಡುಪಿ: ಮಣಿಪಾಲದ ರಜತಾದ್ರಿಯಲ್ಲಿ ನಡೆಯುತ್ತಿರುವ ಮರಳು ಪ್ರತಿಭಟನೆ 8 ದಿನದ ಬಳಿಕ ತಾತ್ಕಾಲಿಕ ಅಂತ್ಯ ಕಂಡಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಸಭೆಯಲ್ಲಿ ಗಣಿ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಭಾಗವಹಿಸಿದ್ದು, ಈ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಂಘಟನೆಗಳ ಮುಖಂಡರೊಂದಿಗೆ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಆ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟು ನ. 20ರೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ನಿರ್ಧರಿಸಲಾಯಿತು.

ನಾನ್‌ ಸಿಆರ್‌ಝಡ್‌ ಸಮಸ್ಯೆ ಇಲ್ಲಿಯೇ ಪರಿಹರಿಸುವುದಾಗಿ ಭರವಸೆ ನೀಡಿದ ಕಠಾರಿಯಾ, ಸಿಆರ್‌ಝಡ್‌ ಸಮಸ್ಯೆ ಪರಿಸರ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಪ್ರತಿಭಟನ ಸ್ಥಳಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಬಂದ ಅವರು ಪ್ರತಿಭಟಕಾರರ ಮನವೊಲಿಸುವ ಯತ್ನ ಮಾಡಿದರು. 2015-16ರಲ್ಲಿ ಹಸಿರು ಪೀಠದಲ್ಲಿ 2 ಪ್ರಕರಣ ದಾಖಲಾದ ಹಿನ್ನೆಲೆ 2 ವರ್ಷ ಮರಳುಗಾರಿಕೆಗೆ ಅವಕಾಶ ಇರಲಿಲ್ಲ. ಹೊಸ ಮರಳು ನೀತಿ ಕೂಡ ವಿಳಂಬವಾಗಿದೆ ಎಂದು ಕಠಾರಿಯಾ ಹೇಳಿದರು.

ಶಾಸಕರಾದ ರಘುಪತಿ ಭಟ್, ಸುನೀಲ್‌ ಕುಮಾರ್‌, ಭೋಜೇಗೌಡ, ಕೋಟ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಇದ್ದರು.

Comments are closed.