ಕರಾವಳಿ

ಉಡುಪಿ: ದಾಖಲೆಯಿಲ್ಲದೇ ರೈಲಿನಲ್ಲಿ ಸಾಗಿಸುತ್ತಿದ್ದ 1.65 ಕೋಟಿ ಹಣ, ಮೂವರು ವಶಕ್ಕೆ

Pinterest LinkedIn Tumblr

ಉಡುಪಿ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1.65 ಕೋಟಿ ಹಣವನ್ನು ಪೊಲೀಸ್‌ ಅಧಿಕಾರಿಗಳು ಉಡುಪಿ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಮುಂಬೈನಿಂದ ಎರ್ನಾಕುಲಂಗೆ ಹೋಗುತ್ತಿದ್ದ ರೈಲಿನಲ್ಲಿ ರಾಜಸ್ಥಾನ ಮೂಲದ ಮೂವರು ಸಾಗಾಣಿಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕುಮಟಾ ಬಳಿ ರೈಲ್ವೇ ಪೊಲೀಸರು ಅನುಮಾನಗೊಂಡು ಪರಿಶೀಲನೆಗಿಳಿದಾಗ ಹಣವಿರುವುದು ಕಂಡು ಬಂದಿದೆ. ಬಳಿಕ ಉಡುಪಿ ನಿಲ್ದಾಣದಲ್ಲಿ ಈ ಅನುಮಾನಾಸ್ಪದವಾಗಿದ್ದ ಮೂವರನ್ನು ವಿಚಾರಣೆ ನಡೆಸಿದ್ದು 500, 2000 ಮುಖಬೆಲೆಯ ನೋಟುಗಳು ಇದ್ದಿದೆ. ತಹಶಿಲ್ದಾರ್, ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದ್ದು ಹಣ ಕಣ್ಣೂರಿಗೆ ಸಾಗಿಸಲಾಗುತ್ತಿತ್ತು ಎಂದು ಹೇಳಿದ್ದಾರೆನ್ನಲಾಗಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

Comments are closed.