ಕರಾವಳಿ

ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಎಚ್ಡಿಕೆ

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಮುಖ್ಯಂಮತ್ರಿ ಕುಮಾರಸ್ವಾಮಿ ಮಂಗಳವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

 

ಮುಖ್ಯಮಂತ್ರಿಯವರನ್ನು ನೋಡಿ ಮಕ್ಕಳು ಸೆಲ್ಫಿ‌‌ ಕ್ಲಿಕ್ಕಿಸಿಕೊಳ್ಳಲು‌ ಮುಂದಾದರು. ಈ ವೇಳೆಯಲ್ಲಿ ತಮ್ಮ ಬಿಡುವಿರದ ಕೆಲಸದ ನಡುವೆಯೂ ಕುಮಾರಸ್ವಾಮಿ‌ ವಿದ್ಯಾರ್ಥಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆಯಲ್ಲಿ ಸಚಿವರಾದ ಜಯಮಾಲ, ವೆಂಕಟರಾವ್‌ ನಾಡಗೌಡ,ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇ ಗೌಡ,ಗೋಪಾಲಸ್ವಾಮಿ ಚನ್ನರಾಯಪಟ್ಟಣ, ಮಾಜಿ ಶಾಸಕ ಕೋನ ರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ಜೆಡಿಎಸ್‌ ಪ್ರಮುಖರಾದ ಎನ್‌.ಮಂಜಯ್ಯ ಶೆಟ್ಟಿ ಸಬ್ಲಾಡಿ, ಶಾಲಿನಿ ಶೆಟ್ಟಿ ಕೆಂಚನೂರು, ಸಂದೇಶ ಭಟ್‌ ಉಪ್ಪುಂದ ಇದ್ದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಅರ್ಚಕರ ನೇತ್ರತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ ಎಂ. ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ್‌ ಶೆಟ್ಟಿ, ರಮೇಶ್‌ ಗಾಣಿಗ ಕೊಲ್ಲೂರು, ನರಸಿಂಹ ಹಳಗೇರಿ,ಅರ್ಚಕರಾದ ಎನ್‌.ನರಸಿಂಹ ಅಡಿಗ, ರಾಮಚಂದ್ರ ಅಡಿಗ ಇದ್ದರು.

ತ್ರಾಸಿಯಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಚಾರ ಸಭೆಗೆ ಆಗಮಿಸುವ ಸಲುವಾಗಿ ಬೈಂದೂರಿಗೆ ಆಗಮಿಸಿದ ಅವರು ಮೊದಲು ಶ್ರೀ ಮೂಕಾಂಬಿಕೆ ದರ್ಶನ ಪಡೆಯಬೇಕಿತ್ತು. ಆದರೆ ಶಿವಮೊಗ್ಗದಿಂದ‌ ಬರುವುದು ತಡವಾಗಿದ್ದರಿಂದ ದೇವಳ ಕಾರ್ಯಕ್ರಮ ಮೊಟಕುಗೊಳಿಸಿ ನೇರವಾಗಿ ತ್ರಾಸಿ ಪ್ರಚಾರಸಭೆಗೆ ತೆರಳಿದ್ದರು. ಪ್ರಚಾರಸಭೆ ಮುಗಿದ ಬಳಿಕ ಸಿಎಂ ಕೊಲ್ಲೂರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದಲ್ಲಿಯೇ ಅನ್ನಪ್ರಸಾದ ಸ್ವೀಕರಿಸಿ ಹೆಲ್ಪ್ಯಾಡಿಗೆ ನಿರ್ಗಮಿಸಿದರು.

ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಉಡುಪಿ ಡಿವೈಎಸ್ಪಿ ಜಯಶಂಕರ್ ನೇತ್ರತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಡೆದಿತ್ತು.

Comments are closed.