ಕರಾವಳಿ

ವೇದಿಕೆಯಲ್ಲಿ ‘ಸಿನಿಮಾ ಹಾಡು’ ಹಾಡುವ ಮೂಲಕ ಜನಮನ ರಂಜಿಸಿದ ಮಂಗಳೂರು ಮೇಯರ್

Pinterest LinkedIn Tumblr

ಮಂಗಳೂರು : ಎಸ್.ಕೆ. ಮುನಿಸಿಪಲ್ ಎಂಪ್ಲಾಯಿಸ್‌ಯೂನಿಯನ್ ಸಂಸ್ಥೆಯು ದಸರಾ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಸಮಾರಂಭದ‌ ಅಧ್ಯಕ್ಷತೆ ವಹಿಸಿದ್ದ ಮ.ನಾ.ಪ ಮೇಯರ್ ಭಾಸ್ಕರ ಕೆ. ಸಭಾಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ‘ಸಿನಿಮಾ ಹಾಡು’ ಹಾಡುವ ಮೂಲಕ ಜನಮನ ರಂಜಿಸಿದರು. ಸುರ್ ಸಂಗಮ್‌ಆರ್ಕೆಸ್ಟ್ರಾ ತಂಡದವರು ಹಿನ್ನಲೆ ಸಂಗೀತ ನೀಡಿದ್ದರು.

ಶಾಸಕ ವೇದವ್ಯಾಸಕಾಮತ್ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಮ.ನಾ.ಪ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ‌ಅಧ್ಯಕ್ಷ ನವೀನ್‌ಆರ್. ಡಿ’ಸೋಜಾ, ಕಾರ್ಪೋರೇಟರ್‌ಗಳಾದ ರೂಪಾ ಡಿ. ಬಂಗೇರ, ಮೀರಾಕರ್ಕೇರಾ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.

ಸಾಧಕರಾದ ಸುಬೇದಾರ್ ಮೇಜರ್‌ಚಂದ್ರ ಶೇಖರ್, ಕೃಷ್ಣಪ್ಪಗೌಡ ಪಡಂಬೈಲ್, ಪ್ರವೀಣ್‌ಕೋಟ್ಯಾನ್, ಕು| ಸುಧಾರತ್ನ, ಶ್ರೀಮತಿ ಗೌರಿ, ರವೀಂದ್ರ‌ಇವರನ್ನು ಸನ್ಮಾನಿಸಲಾಯ್ತು.

Comments are closed.