ಕ್ರೀಡೆ

ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಶೈಲಿ ಬಗ್ಗೆ ಬಾಂಗ್ಲಾದೇಶದ ಓಪನರ್ ತಮೀಮ್ ಇಕ್ಬಾಲ್ ಹೇಳಿದ್ದೇನು..?

Pinterest LinkedIn Tumblr

ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಶೈಲಿಗೆ ಮಾರುಹೋಗಿರುವವರು, ಅಚ್ಚರಿಪಟ್ಟಿರುವವರು ಹಲವರು. ವಿರಾಟ್ ಕೊಹ್ಲಿ ಅಗ್ರೆಸೀವ್ ಆಟದ ಬಗ್ಗೆ ವಿದೇಶಿ ಆಟಗಾರರೂ ಪ್ರತಿಕ್ರಿಯೆ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗ ಬಾಂಗ್ಲಾದೇಶದ ಓಪನರ್ ತಮೀಮ್ ಇಕ್ಬಾಲ್ ಸಹ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ತಮೀಮ್ ಇಕ್ಬಾಲ್ ಕೆಲವೊಮ್ಮೆ ವಿರಾಟ್ ಕೊಹ್ಲಿ ಮನುಷ್ಯ ಅಂತಲೇ ಅನ್ನಿಸೋದಿಲ್ಲ, ಬ್ಯಾಟ್ ಹಿಡಿದು ಕ್ರೀಸ್ ಗೆ ಬಂದರೆ ಆತ ಮನುಷ್ಯ ಅಂತಲೇ ಅನ್ನಿಸೋದಿಲ್ಲ, ಪ್ರತಿ ಬಾರಿಯೂ ಶತಕ ದಾಖಲಿಸುತ್ತಾರೆ ಎನಿಸುತ್ತದೆ ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರ ಪ್ರದರ್ಶನ ಅತ್ಯಂತ ಅಚ್ಚರಿ ಮೂಡಿಸುವಂತಹದ್ದು, ಎಲ್ಲಾ ಫಾರ್ಮೆಟ್ ಗಳಲ್ಲೂ ಆತನೇ ನಂ.1 ಅವರಿಂದ ಕಲಿಯುವುದು ಸಾಕಷ್ಟಿದೆ, ಆತನೋರ್ವ ಅದ್ಭುತ ಆಟಗಾರ ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ. ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗವಾಗಿ10,000 ರನ್ ಪೂರೈಸಿರುವ ಕ್ರಿಕೆಟಿಗರ ದಾಖಲೆಯನ್ನು ಸರಿಗಟ್ಟಲು ಕೇವಲ 81 ರನ್ ಗಳಷ್ಟೇ ಬಾಕಿ ಇದೆ. ಸಚಿನ್ ತೆಂಡೂಲ್ಕರ್ 10,000 ರನ್ ಪೂರೈಸಲು 259 ಇನ್ನಿಂಗ್ಸ್ ತೆಗೆದುಕೊಂಡರೆ ವಿರಾಟ್ ಕೊಹ್ಲಿ 204 ಇನ್ನಿಂಗ್ಸ್ ನಲ್ಲಿಯೇ ಈ ಸಾಧನೆಯ ಸನಿಹಕ್ಕೆ ಬಂದು ನಿಂತಿದ್ದಾರೆ.

ನಾನು 12 ವರ್ಷಗಳಲ್ಲಿ ಸಾಕಷ್ಟು ಆಟಗಾರರೊಂದಿಗೆ ಆಡಿದ್ದೇನೆ, ಅವರೆಲ್ಲರಿಗೂ ಅವರದ್ದೇ ಆದ ಬಲವಾದ ಅಂಶಗಳಿದ್ದವು, ಆದರೆ ಕೊಹ್ಲಿ ರೀತಿಯಲ್ಲಿ ಯಾರನ್ನೂ ನೋಡಿರಲಿಲ್ಲ ಎಂದು ಇಕ್ಬಾಲ್ ಹೇಳಿದ್ದಾರೆ.

Comments are closed.