ಕರಾವಳಿ

‘ಮುಖ್ಯಮಂತ್ರಿ ಕಪ್’: ಉಡುಪಿ ಡಿವೈಇಎಸ್ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

Pinterest LinkedIn Tumblr

ಉಡುಪಿ: ಮೈಸೂರು ಎನ್ಐಇ ಕಾಲೇಜಿನ, ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 9 ರಿಂದ 12 ರವರೆಗೆ ನಡೆದ ಮುಖ್ಯಮಂತ್ರಿ ಕಪ್ ದಸರಾ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಉಡುಪಿ ಜಿಲ್ಲಾ ಕ್ರೀಡಾಂಗಣದ ಡಿವೈಇಎಸ್ ತಂಡವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

ತಂಡದ ಸದಸ್ಯರು: ಸುಮನಾ ಎಂ., ವಿಶ್ಮಾ, ಶವೀನಾ, ಪ್ರತೀಕ್ಷಾ ಜಿ.ಎಂ, ರಜನಿ ನಾಯ್ಕ, ಪ್ರತೀಕ್ಷಾ ಶೆಟ್ಟಿ, ಐಶ್ವರ್ಯ, ಶರಣಿತಾ, ಶ್ರಾವ್ಯ.
ರಾಜ್ಯ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಎನ್ಐಎಸ್ ತರಬೇತುದಾರರಾದ ರಘುನಾಥ್.ಬಿ.ಎಸ್ ಇವರು ಈ ತಂಡಕ್ಕೆ ತರಬೇತಿಯನ್ನು ನೀಡಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.