ಕರಾವಳಿ

ಬಾವು,ನೋವು, ತಲೆನೋವು, ಜ್ವರ ಶೀಘ್ರದಲೇ ಕಡಿಮೆಯಾಗಲು ಬೆಳ್ಳುಳ್ಳಿ ಬಳಕೆ

Pinterest LinkedIn Tumblr

ಬೆಳ್ಳುಳ್ಳಿಯನ್ನು ಸಹಜ ಔಷದೀಯ ಆಹಾರ ಪದಾರ್ಥವನ್ನಾಗಿ ನಮ್ಮ ಹಿರಿಯರು ಉಪಯೋಗಿಸುತ್ತಿದ್ದರು. ನಮ್ಮ ಶರೀರದ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ಎಂತಹ ಅನಾರೋಗ್ಯ ಸಮಸ್ಯೆಗಳಿದ್ದರೂ ಇವೆಲ್ಲವನ್ನೂ ಬೆಳ್ಳುಳ್ಳಿ ಪರಿಹರಿಸುತ್ತದೆ. ಬೆಳ್ಳುಳ್ಳಿಯನ್ನು ಕೇವಲ ಅಡುಗೆಯಲ್ಲಿ ಸುವಾಸನೆ ಹಾಗೂ ರುಚಿಗಾಗಿ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಲು ,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುತ್ತೇವೆ. ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೊಣ.

1. ಮೈ ಕೈ ನೋವನ್ನು ಕಡಿಮೆ ಮಾಡುತ್ತದೆ:
ಮೈಕೈಗಳ ನೋವಿದ್ದರೆ, ಬೆಳ್ಳುಳ್ಳಿಯನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ಉಪಶಮನ ಲಭಿಸುತ್ತದೆ.
ಕಿವಿಯಿಂದ ಕೀವು ಸೋರುತ್ತಿದ್ದರೆ, ಬೆಳ್ಳಿಳ್ಳಿಯನ್ನು ಕಿವಿಯ ಬಳಿ ಇರಿಸಿ ಕೊಂಡರೆ, ದುರ್ವಾಸನೆ ಕಡಿಮೆಯಾಗುತ್ತದೆ.

2. ನೋವು ನಿವಾರಕ :
ಕಿವಿಯಲ್ಲಿ ಬೆಳ್ಳುಳ್ಳಿಯನ್ನು ಇರಿಸಿಕೊಳ್ಳುವುದರಿಂದ, ಶರೀರದ ಒಳಗಿನ ಉಷ್ಣಾಂಶ ಹೆಚ್ಚಾಗಿ, ಬಾವು,ನೋವು, ತಲೆನೋವು, ಜ್ವರ ಹಾಗೂ ಕಿವಿ ನೋವು ಕಡಿಮೆಯಾಗುತ್ತದೆ.

3. ಕಿವಿ ನೋವನ್ನು ಹೋಗಲಾಡಿಸಲು :
ಕಿವಿ ನೋವಿನಿಂದ ನರಳುತ್ತಿರುವವರು ಒಂದು ಹಿಳುಕು ಬೆಳ್ಳುಳ್ಳಿ ಯನ್ನು ರಾತ್ರಿ ಮಲಗುವ ಮುಂಚೆ ಕಿವಿಯಲ್ಲಿ ಇಟ್ಟುಕೊಂಡು ಮಲಗಿದರೆ, ಬೆಳಗಾಗುವುದರೊಳಗೆ ಕಿವಿ ನೋವು ಮಾಯವಾಗಿರುತ್ತದೆ.

4. ಕೆಮ್ಮು :
ಕೆಮ್ಮಿನಿಂದ ನರಳುತ್ತಿರುವವರು, ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಜೇನನ್ನು ಸೇರಿಸಿ ಎರಡು ಗಂಟೆಗಳಿಗೊಮ್ಮೆ ಸೇವಿಸುತ್ತಿದ್ದರೆ, ಕೆಮ್ಮು ಗುಣವಾಗುತ್ತದೆ.

5. ಹೃದಯವನ್ನು ರಕ್ಷಿಸುತ್ತದೆ :
ರಕ್ತ ಪ್ರಸಾರ ಸರಿಯಾಗಿ ಆಗಲು, ಕೊಬ್ಬನ್ನು ತೊಲಗಿಸಲು ಬೆಳ್ಳುಳ್ಳಿ ಸಹಕಾರಿಯಾಗಿರುತ್ತದೆ. ಹೃದಯ ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಹೃದಯ ಸಂಬಂದಿ ರೋಗಿಗಳು ಪ್ರತೀ ದಿನ ಬೆಳಿಗ್ಗೆ ಒಂದೆರಡು ಬೆಳ್ಳುಳ್ಳಿ ಹಿಳುಕುಗಳನ್ನು ತಿನ್ನಬೇಕು.

6.ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :
ಶುದ್ಧವದ ರಕ್ತ ಸರಿಯಾಗಿ ಹರಿಯಲು ಸಹಕಾರಿ. ಅಧಿಕ ರಕ್ತದೊತ್ತಡ ದಿಂದ ನರಳುತ್ತಿರುವವರು ಬೆಳಿಗ್ಗೆ ಹೊತ್ತು ಬೆಳ್ಳುಳ್ಳಿ ತಿನ್ನಬೇಕು.

7. ಅಂಟು ರೋಗಗಳ ವಿರುದ್ಧ ಹೋರಾಡುತ್ತದೆ :
ಎಗ್ಜಿಮಾ,ತುರಿಕೆ, ಪಾದಗಳು ಒಡೆಯುವುದು ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬೆಳ್ಳುಳ್ಳಿ ಎಣ್ಣೆಯನ್ನು ಹಚ್ಚಬೇಕು.

8. ಕೀಲು ನೋವು ನಿವಾರಿಣಿ :
ಮೊಣಕಾಲು ನೋವು, ಕೀಲು ನೋವುಗಳಿಂದ ನರಳುತ್ತಿರುವವರು, ಬೆಳಿಗ್ಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ.

9. ಅಲರ್ಜಿಯನ್ನು ಹೊಡೆದೋಡಿಸುತ್ತದೆ:
ಶೀತ, ನೆಗಡಿ ,ಕೆಮ್ಮು ಮೊದಲಾದವುಗಳಿಂದ ನರಳುತ್ತಿರುವವರು, ಬೆಳ್ಳುಳ್ಳಿಯನ್ನಿ ಜಜ್ಜಿ, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಟ್ಟುಕೊಂಡು ಸೇವಿಸಿದರೆ ಉಪಶಮನ ದೊರೆಯುತ್ತದೆ. ಸಣ್ಣ ಗುಳ್ಳೆಗಳು, ಸೊಳ್ಳೆ ಕಡಿತ ಹಾಗೂ ತುರಿಕೆ ಇರುವ ಪ್ರದೇಶಗಳಲ್ಲಿ ಬೆಳ್ಳುಳ್ಳಿರಸ ಹಚ್ಚಿದರೆ, ಗುಣಕಾರಿ.

10. ಹಲ್ಲು ನೋವು :
ಆಂಟಿ ಬ್ಯಾಕ್ಟೀರಿಯಲ್ ಹಾಗೂ ನೋವು ನಿವಾರಕ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಸೇವಿಸಿದರೆ, ನೋವಿನಿಂದ ಮುಕ್ತಿ ಪಡೆಯಬಹುದು.

Comments are closed.