ರಾಷ್ಟ್ರೀಯ

ಪೆಟ್ರೋಲ್ ದರದಲ್ಲಿ 21 ಪೈಸೆ, ಡೀಸೆಲ್ 11 ಪೈಸೆ ಇಳಿಕೆ

Pinterest LinkedIn Tumblr

ನವದೆಹಲಿ: ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕೊನೆಗೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ಕೋಲ್ ಮತ್ತು ಡೀಸೆಲ್ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 21 ಪೈಸೆ ಮತ್ತು ಡೀಸೆಲ್ ದರದಲ್ಲಿ 11 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.

ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 82.62ರೂ ಗೆ ಇಳಿಕೆಯಾಗಿದ್ದು, ಡೀಸೆಲ್ ದರ 75.58 ರೂಗೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 88.08 ರೂ ಮತ್ತು ಡೀಸೆಲ್ 79.24 ರೂಗೆ ಇಳಿಕೆಯಾಗಿದೆ.

Comments are closed.