ಕರಾವಳಿ

ಕಣ್ಣಿನ ರೆಪ್ಪೆಯಲ್ಲಿನ ಕೀವು ನಿವಾರಣೆಗೆ ಸುಲಭ ಮನೆಮದ್ದು

Pinterest LinkedIn Tumblr

ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎಂದರೆ ಮೊದಲು ನಮಗೆ ನೆನಪಾಗುವುದು ಕಣ್ಣಿನ ರೆಪ್ಪೆಗಳ ಊತ. ಅಧಿಕ ಮಂದಿಗೆ ಆಗಾಗ ಕಣ್ಣಿನ ರೆಪ್ಪೆ ಉದಿಕೊಳ್ಳುವುದು, ಅವುಗಳಿಂದ ನೀರು ಸೋರುವುದು, ಉರಿ, ತುರಿಕೆ ಅನ್ನಿಸುವುದು ನಡೆಯುತ್ತಿರುತ್ತದೆ. ಕೆಲವರಲ್ಲಿ ಉಬ್ಬಿದ ಕಣ್ಣಿನ ರೆಪ್ಪೆಗಳಿಂದ ಕೀವು ಸೋರುವುದು ಸಹ ಸಂಭವಿಸುತ್ತದೆ. ಆದರೆ ಈ ಅನಾರೋಗ್ಯಕ್ಕೆ ಕಾರಣ ಕೇವಲ ಬ್ಯಾಕ್ಟೀರಿಯಾ ಸೋಂಕು. ಹಾಗಾಗಿ ನಮ್ಮ ಕಣ್ಣುಗಳು ಆಗಾಗ ಈ ರೀತಿ ಊದಿಕೊಳ್ಳುತ್ತವೆ. ಕೆಳಗೆ ನೀಡಿರುವ ಟಿಪ್ಸ್ ಪಾಲಿಸಿದರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬೀಳಬಹುದು. ಆ ಟಿಪ್ಸ್ ಏನು ಎಂದು ಈಗ ನೋಡೋಣ.

1. ಹಸಿ ಟೊಮೇಟೋ ತೆಗೆದುಕೊಂಡು ಅದನ್ನು ಅಡ್ಡಲಾಗಿ ಚಕ್ರದ ರೀತಿಯಲ್ಲಿ ಕತ್ತರಿಸಿಕೊಳ್ಳಬೇಕು. ಆ ರೀತಿ ಕಟ್ ಮಾಡಿದ ಹೋಳುಗಳನ್ನು ಊತ ಇರುವ ಜಾಗದಲ್ಲಿ 5 ನಿಮಿಷಗಳ ಕಾಲ ಇಡಬೇಕು. ನಿತ್ಯ ಈ ರೀತಿ 3 ಸಲ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಅಷ್ಟೇ ಅಲ್ಲ ಆ ಭಾಗದ ಚರ್ಮ ಸಹ ಕಾಂತಿಯುತವಾಗುತ್ತದೆ.

2. ಕಣ್ಣಿನ ರೆಪ್ಪೆಗೆ ಉಂಟಾಗುವ ಊತವನ್ನು ನಿವಾರಿಸುವಲ್ಲಿ ಕೊತ್ತಂಬರಿ ಸೊಪ್ಪು ಸಹ ಉಪಯುಕ್ತ. ಸ್ವಲ್ಪ ಕೊತ್ತಂಬರಿ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ಬಳಿಕ ಆ ನೀರನ್ನು ಶೋಧಿಸಿ ಸಮಸ್ಯೆ ಇರುವ ಜಾಗದಲ್ಲಿ ಹಚ್ಚಬೇಕು. ನಿತ್ಯ ಈ ರೀತಿ 3 ಸಲ ಮಾಡಿದರೆ ಕಣ್ಣಿನ ರೆಪ್ಪೆಗಳ ಊತ ಕಡಿಮೆಯಾಗುತ್ತದೆ.

3. ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸೌತೆಕಾಯಿ ಸಹ ತುಂಬಾ ಉಪಯುಕ್ತ. ಒಂದು ಸೌತೆಕಾಯಿ ತೆಗೆದುಕೊಂಡು ಅದನ್ನು ಚಕ್ರದ ರೀತಿಯಲ್ಲಿ ಕತ್ತರಿಸಿ ಕಣ್ಣಿನ ಮೇಲೆ 30 ನಿಮಿಷಗಳ ಕಾಲ ಇಡಬೇಕು. ನಿತ್ಯ ಈ ರೀತಿ 3 ಸಲ ಮಾಡಿದರೆ ಕಣ್ಣಿನ ರೆಪ್ಪೆಯ ಊತ ಕಡಿಮೆಯಾಗುತ್ತದೆ. ಕಣ್ಣು ಸುರಕ್ಷಿತವಾಗಿ ಇರುತ್ತದೆ.

4. ಸ್ವಲ್ಪ ನೀರನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ತನಕ ಕಾಯಿಸಿಕೊಳ್ಳಬೇಕು. ಬಳಿಕ ಆ ನೀರಿನಲ್ಲಿ ಒಂದು ಹತ್ತಿಬಟ್ಟೆಯನ್ನು ಇಟ್ಟು ಸಮಸ್ಯೆ ಇರುವ ಜಾಗದಲ್ಲಿ ಕಾವು ಕೊಡಬೇಕು. ಇದರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ.

5. ಮಾರುಕಟ್ಟೆಯಲ್ಲಿ ಸಿಗುವ ಚಿಕ್ಕ ಟೀ ಬ್ಯಾಗನ್ನು ತೆಗೆದುಕೊಳ್ಳಬೇಕು. ಅದನ್ನು ಬಿಸಿ ನೀರಿನಲ್ಲಿ ಹಾಕಿ ಕಣ್ಣಿನ ರೆಪ್ಪೆಯ ಮೇಲೆ ಹಚ್ಚಬೇಕು. ಪ್ರತಿ 10 ನಿಮಿಷಗಳಿಗೆ ಒಮ್ಮೆ ಈ ರೀತಿ ಮಾಡಿದರೆ ಕಣ್ಣಿನ ಊತ ಕಡಿಮೆಯಾಗುತ್ತದೆ.

6. ಕಣ್ಣಿನ ಸಮಸ್ಯೆಗಳು ನಿವಾರಿಸುವಲ್ಲಿ ಅರಿಶಿಣ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚಾಗಿ ಇವೆ. ಒಂದು ಕಪ್ ನೀರು ತೆಗೆದುಕೊಂಡು ಅದಲ್ಲಿ ಒಂದು ಟೀ ಸ್ಫೂನ್ ಅರಿಶಿಣ ಹಾಕಿ ಆ ನೀರನ್ನು ಅರ್ಧ ಆಗುವವರೆಗೂ ಕುದಿಸಬೇಕು. ಐ ಡ್ರಾಪರ್ ಸಹಾಯದಿಂದ ಆ ದ್ರಾವಣವನ್ನು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಬೇಕು. ನಿತ್ಯ ಈ ರೀತಿ 2, 3 ಸಲ ಮಾಡಿದರೆ ಸಮಸ್ಯೆಯಿಂದ ಉಪಶಮನ ಸಿಗುತ್ತದೆ.

7. ಅಲೋವೆರಾ ಜೆಲ್ ಸ್ವಲ್ಪ ತೆಗೆದುಕೊಂಡು ಅದರಲ್ಲಿ ಕಾಟನ್ ಬಟ್ಟೆ ಅದ್ದಿ, ಆ ಬಳಿಕ ಆ ಬಡ್‍ನ್ನು ಕಣ್ಣಿನ ಮೇಲೆ ಹಚ್ಚಬೇಕು. ಈ ರೀತಿ ನಿತ್ಯ 3, 4 ಸಲ ಮಾಡಬೇಕು. ಆ ರೀತಿ ಮಾಡಿದಾಗಲೆಲ್ಲಾ ಕಣ್ಣನ್ನು ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ಕಣ್ಣಿನ ರೆಪ್ಪೆಯ ಊತ ಕಡಿಮೆಯಾಗುತ್ತದೆ.

Comments are closed.