ಮುಂಬಯಿ : ಕಳೆದ ಹದಿನೇಳು ವರ್ಷಗಳಿಂದ ನಾಡಿನ ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಾತ್ರವಲ್ಲದೆ ನೆರೆಯ ಕಾಸರಗೋಡು ಜಿಲ್ಲೆಯ ಹಾಗೂ ಪರಿಸರದ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲೆಗಳ ಅಭಿವೃದ್ದಿಗಾಗಿ ವಿವಿಧ ರೀತಿಯಲ್ಲಿ ಕಾರ್ಯನಿರತರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 17 ನೆಯ ವಾರ್ಷಿಕ ಮಹಾಸಭೆಯು Bunts Sangha’s Annex Bldg. , Buntara Bhawan Marg , Kulra (E) , Mumbai 400 070 ಇಲ್ಲಿ ಜರಗಿತು.
ಈ ಸಂಘಟನೆ ಯು ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಯು ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ ಮುಂಬಯಿ ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿಯೂ ಕ್ರೀಯಾಶೀಲವಾಗಿದ್ದು ಈಗಾಗಲೇ ಜಿಲ್ಲೆಗಳ ಹಲವಾರು ಸಮಸ್ಯೆಗಳನ್ನು ಬಗೆಹರಿಸುದರಲ್ಲಿ ಯಶಸ್ವಿಯಾಗಿದೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ವಾರ್ಷಿಕ ವರದಿಯನ್ನು ಓದಿದರು. ಗೌ. ಕೋಶಾಧಿಕಾರಿ ತುಳಸಿದಾಸ್ ಅಮೀನ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷರುಗಳಾದ ಸಿ. ಎ. ಐ. ಆರ್ ಶೆಟ್ಟಿ, ಮೊಯಿದ್ದೀನ್ ಮುಂಡ್ಕೂರು, ಜಗನ್ನಾಥ ಗಾಣಿಗ, ಪಿ. ಡಿ. ಶೆಟ್ಟಿ, ಜಗದೀಶ್ ಅತಿಕಾರಿ ಪೆಲೆಕ್ಸ್ ಡಿ.ಸೋಜ ರಾಮಚಂದ್ರ ಬೈಂಕಂಪಾಡಿ, ಸುರೇಂದ್ರ ಮೆಂಡನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯಡ್ಕ ಮೋಹನ್ ದಾಸ್, ಗೌ. ಕೋಶಾಧಿಕಾರಿಯಾಗಿ ಸುರೇಂದ್ರಕುಮಾರ್ ಮುಂಡ್ಕೂರು ಆಯ್ಕೆಯಾಗಿರುವರು. ವಿವಿಧ ಜಾತೀಯ ಸಂಘಟನೆಗಳ ಪ್ರಮುಖರನ್ನು ಸನ್ಮಾನಿಸಲಾಯಿತು.
ವಾರ್ಷಿಕ ಮಹಾಸಭೆಯ ಬಳಿಕ ಬಹಿರಂಗ ಅಧಿವೇಶನ ನಡೆದಿದ್ದು ಹಿರಿಯ ಕನ್ನಡಿಗೆ ಎಂ. ಡಿ. ಶೆಟ್ಟಿ,ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹಿರಿಯ ಹೋಟೇಲು ಉಧ್ಯಮಿ ರಘುರಾಮ ಶೆಟ್ಟಿ, ವಿರಾರ್ ಶಂಕರ ಶೆಟ್ಟಿ, ನ್ಯಾ. ಸುಭಾಶ್ ಶೆಟ್ಟಿ, ಐಕಳ ಗುಣಪಾಲ್ ಶೆಟ್ಟಿ, ಬೋಳ ಪ್ರಭಾಕರ ಶೆಟ್ಟಿ, ಉಳ್ತೂರು ಮೋಹನ್ ದಾಸ್ ಶೆಟ್ಟಿ ಹಾಗೂ ನಗರದ ಅನೇಕ ಗಣ್ಯರು ಬಾಗವಹಿಸಿದ್ದರು.
ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್











Comments are closed.