ಮನೋರಂಜನೆ

ಮಿ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ : ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ!

Pinterest LinkedIn Tumblr

ಮುಂಬೈ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.

ಸಜಿದ್ ಖಾನ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ನಟಿ ರಾಚೆಲ್ ವೈಟ್, ಸಹಾಯಕ ನಿರ್ದೇಶಕಿ ಸಲೊನಿ ಚೊಪ್ರಾ ಹಾಗೂ ಪತ್ರಕರ್ತ ಮಹಿಳೆಯೊಬ್ಬರು ಮಿ ಟೂ ಅಭಿಯಾನದಲ್ಲಿ ಆರೋಪ ಮಾಡಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಕುಟುಂಬ ಹಾಗೂ ಸಿನಿಮಾದ ನಿರ್ಮಾಪಕರು, ಕಲಾವಿದರ ಒತ್ತಡದಿಂದಾಗಿ ನೈತಿಕ ಹೊಣೆ ಹೊತ್ತು, ಸತ್ಯಾಂಶ ಹೊರಬರುವವರೆಗೂ ನಿರ್ದೇಶಕ ಸ್ಥಾನದಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಟ್ವಿಟ್ ಮಾಡಿದ್ದಾರೆ.

ಸಜಿದ್ ಖಾನ್ ನಿರ್ಧಾರಕ್ಕೂ ಮುಂಚಿತವಾಗಿ ಅಕ್ಷಯ್ ಕುಮಾರ್ ಕೂಡಾ ಹೌಸ್ ಪುಲ್ 4 ಚಿತ್ರದ ಶೂಟಿಂಗ್ ರದ್ದುಪಡಿಸಿದ್ದರು. ವಿಚಾರಣೆ ಮುಗಿಯುವವರೆಗೂ ಚಿತ್ರೀಕರಣ ಮಾಡದಂತೆ ನಿರ್ಮಾಪಕರ ಬಳಿ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದರು.

ನಾನು ಯಾವುದೇ ಅಪರಾಧಿಗಳೊಂದಿಗೆ ಕೆಲಸ ಮಾಡುವುದಿಲ್ಲ ಮತ್ತು ಕಿರುಕುಳಕ್ಕೆ ಒಳಗಾದವರೆಲ್ಲರಿಗೂ ನ್ಯಾಯ ನೀಡಬೇಕು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಸಾಜಿದ್ ನದಿದ್ವಾಲಾ ಹೌಸ್ ಪುಲ್ 4 ಚಿತ್ರವನ್ನು ನಿರ್ಮಿಸುತ್ತಿದ್ದು, ಲಂಡನ್ , ಜೈಸಲ್ಮಾರ್ ಮತ್ತಿತರ ಕಡೆಗಳಲ್ಲಿ ಈಗಾಗಲೇ ಶೇ.70 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ.

Comments are closed.