ಕರಾವಳಿ

‘ಕಾರಂತರು‌ ಅನುಭವ ಸಿದ್ಧ ಸಾಹಿತಿ : ಡಾ. ಪ್ರಭಾಕರ ಶಿಶಿಲ

Pinterest LinkedIn Tumblr

ಮಂಗಳೂರು : ಜೀವನಾಧ್ಯಯನವೇಕಾರಂತರ ಸಾಹಿತ್ಯದ ಸತ್ವವಾಗಿದೆ.ಡಾ. ಶಿವರಾಮ ಕಾರಂತರು‌ಅನುಭವ ಸಿದ್ಧ ಸಾಹಿತ್ಯವನ್ನು ರಚಿಸಿದವರು.ಇದು ಸಾಹಿತ್ಯಾಸಕ್ತರಿಗೆ ಪ್ರಿಯವಾಯಿತು.ಆದುದರಿಂದಲೇಕಾರಂತರು೨೦ನೇ ಶತಮಾನದಜಗತ್ತಿನ ಶ್ರೇಷ್ಠ ಸಾಹಿತಿಯಾಗಿದ್ದಾರೆ‌ಎಂದುಡಾ.ಪ್ರಭಾಕರ ಶಿಶಿಲ ನುಡಿದರು.

ಅವರು ನಗರದಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮದರ್ಜೆಕಾಲೇಜು ಮಂಗಳೂರು ರಥಬೀದಿ ಇದರಕನ್ನಡ ಸಂಘ ಆಯೋಜಿಸಿದ್ದ ‘ಕಾರಂತಜನುಮ ದಿನ’ ಕಾರ್ಯಕ್ರಮದಲ್ಲಿ ವಿಶೇಷ‌ಉಪನ್ಯಾಸ ನೀಡುತ್ತಿದ್ದರು.

ಶಿವರಾಮ ಕಾರಂತರು ಸಾಂಸ್ಕೃತಿಕಜ್ಞಾನದೊಡನೆ ವಿಜ್ಞಾನ ಬೆರೆತ ವಿಚಾ ಸಾಹಿತ್ಯವನ್ನುನೀಡಿದರು. ಪರಿಸರವಾದಿಯಾಗಿದ್ದ ಕಾರಂತರು ವಿಜ್ಞಾನ ಹಾಗೂ ಸಮಾಜ ವಿಜ್ಞಾನವು ಸಮಾನವಾಗಿರ ಬೇಕು‌ ಎಂದು ಪ್ರತಿಪಾದಿಸಿದರು. ಸತ್ಯದರ್ಶನಕ್ಕಾಗಿ ಕಾರಂತರ‌ ಓದು‌ ಅಗತ್ಯ‌ ಎಂದು ಡಾ.ಪ್ರಭಾಕರ ಶಿಶಿಲ ನುಡಿದರು.

ಕಾರ್ಯಕ್ರಮದ‌ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್‌ಅವರು ಶಿವರಾಮ ಕಾರಂತರದ್ದು ಬಹುಮುಖೀ ವ್ಯಕ್ತಿತ್ವ, ಅವರ‌ಓದು ಬಹುಮುಖ ಜ್ಞಾನವನ್ನು ವಿಸ್ತರಿಸುತ್ತದೆ‌ಎಂದರು. ಕನ್ನಡ ವಿಭಾಗದ ಮುಖ್ಯಸ್ಥರಾದಡಾ.ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ.ಶಿವರಾಮ ಪಿ, ಡಾ.ನಾಗಪ್ಪಗೌಡ, ಡಾ.ನಾಗವೇಣಿ ಮಂಚಿ, ಪ್ರೊ.ಶೇಷಪ್ಪ, ಮತ್ತುಡಾ.ಜಯಶ್ರೀ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಪ್ರೊ.ರವಿಕುಮಾರ ಎಂ.ಪಿ ವಂದನಾರ್ಪಣೆಗೈದರು. ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಕು.ರೂಪಶ್ರೀ ಮತ್ತು ಶ್ರೀಮತಿ ಸುಪ್ರಿಯ‌ಆಶಯಗೀತೆಯನ್ನುಹಾಡಿದರು. ವಿದ್ಯಾರ್ಥಿನಿ ಕು. ಕಾವೇರಿ ಶಿವಾಜಿ ಆನೆಗುದ್ದಿ ಕಾರ್ಯಕ್ರಮ ನಿರೂಪಿಸಿದರು.

Comments are closed.