ಕರಾವಳಿ

ದಾಹ ತೀರಿಸುವುದರ ಜತೆಗೆ ಆರೋಗ್ಯ ಲಾಭ ನೀಡುವ ದ್ರವ ಪದಾರ್ಥ ಬಗ್ಗೆ ತಿಳಿಯಿರಿ..!

Pinterest LinkedIn Tumblr

ಕಲುಷಿತವಾಗದ ಸ್ವಚ್ಛವಾದ ಎಳನೀರು ಸರ್ವರೋಗ ನಿವಾರಿಣಿಯಾಗಿ ಭಾವಿಸುತ್ತಾರೆ. ಎಳನೀರನ್ನು ವಾರಕಾಲ ತಪ್ಪದೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಂಡರೆ… ಅದ್ಭುತವಾದ ಪ್ರಯೋಜನ ಸಿಗುತ್ತದೆ.ದಾಹವನ್ನು ತೀರಿಸುವುದರ ಜತೆಗೆ ಉತ್ತಮವಾದ ಆರೋಗ್ಯ ಲಾಭಗಳನ್ನು ನೀಡುವ ದ್ರವ ಪದಾರ್ಥ ಎಳನೀರು ಮಾತ್ರ.

* ಖಾಲಿಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
* ದೇಹದಲ್ಲಿನ ಬ್ಯಾಕ್ಟೀರಿಯಾವನ್ನು ಹೊರಗೆ ಕಳುಹಿಸಿ, ಯೂರಿನರಿ ಸೋಂಕು ಬಾರದಂತೆ ಎಳನೀರು ತಡೆಯುತ್ತದೆ.
* ಎಳನೀರನ್ನು ವಾರಕಾಲ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಒಳ್ಳೆಯ ಉತ್ಸಾಹ ಬರುತ್ತದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
* ಒಂದು ವಾರ ಖಾಲಿಹೊಟ್ಟೆಯಲ್ಲಿ ನಿತ್ಯ ನಿಯಮಿತವಾಗಿ ಎಳನೀರು ಕುಡಿದರೆ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆಂದು ವೈದ್ಯರು ಹೇಳುತ್ತಿದ್ದಾರೆ.
* ಚರ್ಮ ನಿರ್ಜೀವವಾಗಿ ಬದಲಾಗಿ ತೊಂದರೆ ಅನುಭವಿಸುತ್ತಿರುವರು ಎಳನೀರನ್ನು ವಾರ ಕಾಲ ಕುಡಿದರೆ ಚರ್ಮದ ಕಾಂತಿ ಉತ್ತಮವಾಗುತ್ತದೆ.
* ಎಳನೀರು ಕುಡಿಯುವುದರಿಂದ ದೇಹದಲ್ಲಿನ ಟಾಕ್ಸಿನ್ಸ್ ನಿವಾರಣೆಯಾಗಿ ಕಿಡ್ನಿಯಲ್ಲಿನ ಕಲ್ಲುಗಳು ಸಹ ಕ್ರಮೇಣ ಕಡಿಮೆಯಾಗುತ್ತವೆ.
* ಎಳನೀರು ನಿತ್ಯ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
* ದೇಹಕ್ಕೆ ಬೇಕಾದ ಫೈಬರನ್ನು ಎಳನೀರು ನೀಡುತ್ತದೆ.
* ಎಳನೀರು ಕುಡಿದರೆ… ಡೀಹೈಡ್ರೇಷನ್‌ನಿಂದ ಬರುದ ತಲೆನೋವು ಕಡಿಮೆ ಮಾಡಿಕೊಳ್ಳಬಹುದು.
* ತಾಯಿ ಹಾಲಿನಲ್ಲಿ ಇರುವ ಲಾಕ್ಟಿಕ್ ಆಸಿಡ್ ಎಳನೀರಿನಲ್ಲಿ ಸಹ ಇರುತ್ತದೆಂದು ವೈದ್ಯರು ಹೇಳುತ್ತಿದ್ದಾರೆ. ಆದಕಾರಣ ಈ ನೀರನ್ನು ಮಕ್ಕಳಿಗೆ ಕುಡಿಸಿದರೆ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿ.
* ಗರ್ಭಿಣಿಯರು ನಿತ್ಯ ಎಳನೀರನ್ನು ಕುಡಿಯುವುದರಿಂದ ಗರ್ಭಕೋಶದಲ್ಲಿರುವ ಸಮಸ್ಯೆಗಳು ಕಡಿಮೆಯಾಗಿ, ಮಗು ಆರೋಗ್ಯವಾಗಿ ಬೆಳೆಯುತ್ತದೆಂದು ವೈದ್ಯರು ಹೇಳುತ್ತಿದ್ದಾರೆ.
* ಎಳನೀರು ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸಲು ಸಹಕಾರಿ.
* ಎಳನೀರು ಕುಡಿಯುವುದರಿಂದ ಚರ್ಮದ ಮೇಲೆ ಸುಕ್ಕುಗಳು ಬರುವುದು ಕಡಿಮೆಯಾಗುತ್ತದೆ. ವಯಸ್ಸು ಕಡಿಮೆಯಾದಂತೆ ಕಾಣಿಸುತ್ತದೆ ಎನ್ನುತ್ತಿದ್ದಾರೆ ಬ್ಯೂಟಿಷಿಯನ್ಸ್.

Comments are closed.