ಕರಾವಳಿ

ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ತುಳುನಾಡ ರಕ್ಷಣ ವೇದಿಕೆ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಆಗುವ ಕನಸು ಹೊತ್ತುಕೊಂಡಿದೆ. ಆದರೆ ಮಂಗಳೂರಿನ ಹೃದಯ ಭಾಗದಲ್ಲಿರುವ ಜಪ್ಪು ಮಹಾಕಾಳಿ ಪಡ್ಪು ಪ್ರದೇಶ ಸ್ವಾತಂತ್ರ್ಯ ಬಂದು ವರ್ಷಗಳಾದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲಿ ವಾಸಿಸುವರಿಗೆ ಮರೀಚಿಕೆಯಾಗಿದೆ ಎಂದು ತುಳುನಾಡ ರಕ್ಷಣ ವೇದಿಕೆ ಸ್ಥಾಪಾಕಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಆರೋಪಿಸಿದ್ದಾರೆ.

ನಗರದ ಮಂಗಳಾದೇವಿ ಸಮೀಪದ ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ತಕ್ಷಣ ನಿರ್ಮಿಸುವಂತೆ ಆಗ್ರಹಿಸಿ ತುಳುನಾಡ ರಕ್ಷಣ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಮಹಾಕಾಳಿ ಪಡ್ಪು ಪ್ರದೇಶದಲ್ಲಿರುವ ರೈಲ್ವೇಗೇಟ್, ತೊಕ್ಕೊಟ್ಟು, ದೇರಳಕಟ್ಟೆ, ತಲಪಾಡಿ, ಕೇರಳದಿಂದ ಬರುವ ವಾಹನ ಸವಾರರು, ಪ್ರಯಾಣಿಕರು ಮಂಗಳೂರು ನಗರಕ್ಕೆ ಬರಲು ಹತ್ತಿರದ ರಸ್ತೆಯೆಂದರೆ ಜಪ್ಪು ಮಹಾಕಾಳಿ ಪಡ್ಪು ರಸ್ತೆ ಇಲ್ಲಿ ದಿನವೊಂದಕ್ಕೆ 50 ಕ್ಕೂ ಹೆಚ್ಚು ರೈಲುಗಳು ಈ ರಸ್ತೆಗೆ ಅಡ್ಡವಾಗಿ ಹಾದು ಹೋಗುವುದರಿಂದ ರೈಲ್ವೇ ಗೇಟ್ ಅಕ್ಕ ಪಕ್ಕ ವಾಹನ ಸವಾರರು ಹಾಗೂ ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಲ್ಲುತ್ತಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಈ ರಸ್ತೆಯ ಮೂಲಕ ಪ್ರಯಾಣಿಸಿದರೆ ರೋಗಿ ಬದುಕುವುದು ಕಷ್ಟ ಎಂಬಂತಾಗಿದೆ ಎಂದವರು ತಿಳಿಸಿದರು.

ತುಳುನಾಡ ರಕ್ಷಣಾ ವೇದಿಕೆಯು ಹಲವು ವರ್ಷಗಳಿಂದ ಇತರ ಸಂಘ ಸಂಸ್ಥೆಗಳ ಜೊತೆಗೂಡಿ ಕೆಳ ಸೇತುವೆ ನಿರ್ಮಿಸಲು ನಡೆಸಿದ ಹೋರಾಟದ ಫಲವಾಗಿ ರೈಲ್ವೇ ಇಲಾಖೆ ಸರ್ವೆ ಕಾರ್ಯ ನಡೆಸಿ 21 ಕೋಟಿ ರೂಗಳ ವೆಚ್ಚದ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಿದೆ. ರೈಲ್ವೆ ಇಲಾಖೆಯು ಮಂಗಳೂರು ಮಹಾನಗರ ಪಾಲಿಕೆಯ ಅನುದಾನ ಬಯಸುತ್ತಿದೆ.

ಮಹಾನಗರ ಪಾಲಿಕೆಯು ಅನುದಾನದ ಕೊರತೆಯ ನೆಪವೊಡ್ಡಿ ರೈಲ್ವೆ ಇಲಾಖೆಯ ಮೇಲೆ ಗೂಬೆ ಕೂರಿಸುತ್ತಿದೆ. ಒಟ್ಟಿನಲ್ಲಿ ಎರಡು ಸರಕಾರಿ ಇಲಾಖೆಗಳ ಸಮನ್ವಯ ಕೊರತೆಯಿಂದ ಸಮಸ್ಯೆಗೆ ಮುಕ್ತಿ ಯಾವಾಗ ಸಿಗಬಹುದೆಂದು ಬಹು ದೊಡ್ಡ ಪ್ರಶ್ನೆಯಾಗಿದೆ. ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಪೊಳ್ಳು ಭರವಸೆಗಳನ್ನು ನೀಡುತ್ತಾ ಜವಾಬ್ದಾರಿಯಿಂದ ನುಣುಜಿಕೊಳ್ಳುತ್ತಿದ್ದಾರೆ ಎಂದವರು ಆರೋಪಿಸಿದರು.

ಈಗ ಸ್ಥಳಿಯರಿಗೆ ಸಿಕ್ಕಿರುವ ಮಾಹಿತಿ ಪ್ರಕಾರರೈಲ್ವೆ ಇಲಾಖೆಯು ರೈಲ್ವೆ ಹಣಿ ದ್ವಿಗುಣಗೊಳಿಸುವ ಕಾಮಗಾರಿಗೆ ಮುಂದಾಗಿದ್ದು ರಾಷ್ಟ್ರೀಯ ಹೆದ್ದಾರಿ -66ಸಂಪರ್ಕಿಸುವ ಜಪ್ಪು ಮಹಾಕಾಳಿ ಪಡ್ಪು ರಸ್ತೆಯು ಕೆಲ ಸಮಯ ಮುಚ್ಚುಗಡೆ ಆಗುವ ಪ್ರಮೇಯ ಒದಗಿ ಬಂದಿದೆ.

ನಮ್ಮ ಬೇಡಿಕೆಯೇನೆಂದರೆ ಪ್ರಥಮವಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಿ ಆಮೇಲೆ ಹಳಿ ದ್ವಿಗುಣ ಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಸಹಿತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಲುವುದು ಅನಿವಾರ್ಯವಾಗಲಿದೆ ಎಂದು ಯೋಗಿಶ್ ಶೆಟ್ಟಿ ಜಪ್ಪು ಎಚ್ಚರಿಸಿದ್ದಾರೆ.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅಹಮದ್‌ಭಾವ, ಪ್ರಶಾಂತ್ ಭಟ್ ಕಡಬ, ಅಶೋಕ್ ಜಪ್ಪು, ಸಿರಾಜ್ ಅಡ್ಕರೆ, ಆನಂದ್ ಅಮಿನ್ ಅಡ್ಯಾರ್ ಮತ್ತಿತರ ಪ್ರಮುಖರು ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ನಿರ್ಮಲ ಹಿತರಕ್ಷಣಾ ವೇದಿಕೆ ಮುಖಂಡ‌ಉದ್ಯಮಿ ಮಹಮ್ಮದ್ ಹಾಗೂ ತು.ರಾ.ವೇ ಮುಖಂಡರುಗಳಾದ ಜ್ಯೋತಿಕಾ ಜೈನ್, ರಾಜ್ ಗೋಪಾಲ್, ವೆಂಕಟೇಶ್ ಜಪ್ಪು, ಶರೀಫ್, ರಾಜರತ್ನ, ತಾರಾನಾಥ್ ಜತ್ತನ್ನಾ, ಚಂದ್ರಹಾಸ್ ಕುಲಾಲ್, ರವಿ ಶೆಟ್ಟಿ ಮಾಡೂರ್, ತನ್ವಿರ್, ಶಿವಪ್ರಸಾದ್, ಇರ್ಪಾನ್, ಖಾದರ್, ನವಾಝ್, ಇಬ್ರಾಹಿಂ, ರಶೀದ್, ಮಂಜು, ಅಮೀರ್, ಸಾದಿಕ್, ವಿದ್ಯಾ, ರಾಮಾ, ಆಸ್ಟಿನ್, ಯೋಗಿಶ್, ಪ್ರಾಣೆಶ್, ಸಲೀಮ್, ಸ್ಥಳಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು, ಕಾರ್ಮಿಕರುಸೇರಿದಂತೆ ೪೦೦ಕ್ಕೂ ಹೆಚ್ಚು ಮಂದಿಪ್ರತಿಭಟನಾ ಸಭೆ ಹಾಗೂ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದರು.

Comments are closed.