ಕುಂದಾಪುರ: ಇದು ಪ್ರೇಮವೋ ಅಥವಾ ಇನ್ನೇನೋ ಗೊತ್ತಿಲ್ಲ..ಆಕೆ ಕೂಡ ವಿವಾಹಿತೆ…ಆತನೂ ವಿವಾಹಿತ. ಇಬ್ಬರಿಗೂ ಕೂಡ ಕುಟುಂಬವಿತ್ತು. ಮಕ್ಕಳಿದ್ದರು. ಆದರೆ ಆಕೆಗೆ ಈತನ ಮೇಲೆ ಲವ್…ಇವನಿಗೂ ಆಕೆ ಅಂದರೆ ಮೊಹಬ್ಬತ್. ಅಂತೂ ಇಂತು ಆತ ಹೆಂಡತಿಗೆ ಕೈಕೊಟ್ಟ…. ಆಕೆಯೂ ಕೂಡ ಗಂಡನ ಕಿವಿಗೆ ಹೂ ಇಟ್ಳು. ನಾಲ್ಕು ದಿನದ ಹಿಂದೆ ಇವರಿಬ್ಬರು ಕೂಡ ತಮ್ಮೂರಿಗೆ ಬೈ ಹೇಳಿ ಬಂದಿದ್ದು ಕುಂದಾಪುರಕ್ಕೆ. ಇಲ್ಲಿ ಬಂದು ಲಾಡ್ಜೊಂದರಲ್ಲಿ ‘103’ ಸಂಖ್ಯೆ ರೂಂ ಪಡೆದ ಇಬ್ಬರು ಇಂದು ಸಿಕ್ಕಿದ್ದು ಶವವಾಗಿ.
ಶೃಂಗೇರಿ ಮೂಲದ ಗುರುಮೂರ್ತಿ (43) ಹಾಗೂ ಶೃಂಗೇರಿ ನೇತ್ರವಳ್ಳಿ ರಮೇಶ್ ಎಂಬವರ ಪತ್ನಿ ಶಾರದಾ (30) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಕುಂದಾಪುರದ ಹರಿಪ್ರಸಾದ್ ಲಾಡ್ಜಿನಲ್ಲಿ ಈ ಘಟನೆ ನಡೆದಿದ್ದು ಇಂದು ಬೆಳಕಿಗೆ ಬಂದಿದೆ.



ಗುರುಮೂರ್ತಿ ವಿವಾಹಿತನಾಗಿದ್ದು 8 ವರ್ಷದ ಹಿಂದೆ ಮದುವೆಯಾದ ಈತನಿಗೆ ಪುಟ್ಟ ಹೆಣ್ಣುಮಗುವಿದೆ. ಶಾರದಾ ಕೂಡ 10 ವರ್ಷದ ಹಿಂದೆ ಮದುವೆಯಾಗಿದ್ದು 8 ವರ್ಷ ಪ್ರಾಯದ ಹೆಂಂಉ ಮಗಳಿದ್ದಾಳೆ. ಅದ್ಯಾಗೋ ಇಬ್ಬರ ಪರಿಚಯವಾಗಿದ್ದು ಬಳಿಕೆ ಆ ಪರಿಚಯ ಸಂಬಂದವಾಗಿದೆ. ಈ ಬಗ್ಗೆ ಶಾರದಾ ಹಾಗೂ ಆಕೆ ಪತಿ ಜೊತೆ ಜಗಳವೂ ನಡೆದಿದ್ದು ಪತಿ ವಿರುದ್ಧ ಪತ್ನಿ ಇತ್ತೀಚೆಗೆ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಶಾರದಾ ಪತಿ ಜೊತೆ ಇರದೆ ತವರು ಮನೆಯಲ್ಲಿ ನೆಲೆಸಿದ್ದಳು. ಅಲ್ಲಿಂದ ಸೆ.23ಕ್ಕೆ ಕಾರಣ ಹೇಳಿ ಹೊರಬಿದ್ದಿದ್ದ ಆಕೆ ವಾಪಾಸ್ ಮನೆಗೆ ಬಂದಿರಲಿಲ್ಲ. ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವೂ ಆಗಿರಲಿಲ್ಲ.
ಆತನೂ ಕೂಡ ಅಂದೇ ಮನೆ ತೊರೆದಿದ್ದ. ಸೆ.26 ರಂದು ಕುಂದಾಪುರ ವಸತಿಗೃಹಕ್ಕೆ ಆಗಮಿಸಿದ ಇವರಿಬ್ಬರು ಅಲ್ಲಿಯೇ ತಂಗಿದ್ದರು. ಭಾನುವಾರದಂದು ಕೊಠಡಿಯಂದ ಹೊರಬಾರದ ಕಾರಣ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದುಬಂದಿದ್ದು ಮನೆಮಂದಿಗೆ ಮಾಹಿತಿ ನೀಡಿದ್ದಾರೆ. ಸಂಜೆ ವೇಳೆ ಇಬ್ಬರ ಕುಟುಂಬಿಕರು ಕುಂದಾಪುರಕ್ಕೆ ಆಗಮಿಸಿದ್ದು ಅವರ ಸಮಕ್ಷಮದಲ್ಲಿ ವಸತಿ ಗೃಹದ ಬಾಗಿಲು ಒಡೆದು ಶವ ಮಹಜರು ನಡೆಸಲಾಗಿದೆ.
ಈ ವೇಳೆ ಖಾಲಿ ಮದ್ಯದ ಬಾಟಲಿ, ಕೀಟನಾಶಕ ಪತ್ತೆಯಾಗಿದೆ. ಇಬರು ಕೂಡ ಮದ್ಯದಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಹುತೇಕ ಇಂದು ಮುಂಜಾನೆ ಈ ಘಟನೆ ನಡೆದಿರುವ ಸಾಧ್ಯತೆಗಳಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣಕ್ಕೆ ಟ್ವಿಸ್ಟ್
ಆತ್ಮಹತ್ಯೆಗೆ ಮೊದಲು ಶಾರದಾ ಬರೆದ ಡೆತ್ ನೋಟ್ ಲಾಡ್ಝ್ ಕೊಠಡಿಯಲ್ಲಿ ಸಿಕ್ಕಿದ್ದು ತನ್ನಪತಿಯ ಕಿರುಕುಳ ಆತ್ಮಹತ್ಯೆಗೆ ಕಾರಣವಾಗಿದೆ ಎಂಬ ಉಲ್ಲೇಖವಿರುವ ಕಾರಣ ಆಕೆಯ ಪತಿ ರಮೇಶ್ ವಿರುದ್ಧ ಕುಂದಾಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕುಂದಾಪುರ ಪಿಎಸ್ಐ ಹರೀಶ್ ಆರ್.ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.