ಕರಾವಳಿ

ಪಂಚರತ್ನ ಸಿರಿಧಾನ್ಯಗಳಲ್ಲಿರುವ ವಿಶೇಷ ಆರೋಗ್ಯಕರ ಗುಣ ಬಲ್ಲಿರಾ?

Pinterest LinkedIn Tumblr

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಸಾಧನೆಯ ಮಾರ್ಗ ಅತೀ ಕಠಿಣವೇ ಆಗಿದೆ. ಈ ಗೊಂದಲ, ತೊಳಲಾಟಗಳ ಮಧ್ಯೆ ನಿಸ್ಸಂಶಯವಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಳಾಗುವುದು. ಆಧುನಿಕತೆ ಎಂಬ ಭ್ರಮೆಯಲ್ಲಿ ಬಿದ್ದು ಮನುಜರೆಲ್ಲರೂ ಅವಿಶ್ರಾಂತವಾಗಿ ತೊಡಗಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿಯ ಕೊರತೆಯ ಫಲಶೃತಿ ಅನೇಕಾನೇಕ ಕಾಯಿಲೆಗಳು. ನಿಜವಾಗಿಯೂ ಇದು ನಮ್ಮ ದುಸ್ಥಿತಿ. ಇಂತಹ ದುಸ್ಥಿತಿಯನ್ನು ದೂರಮಾಡಲು ಇರುವುದು ಒಂದೇ ಮಾರ್ಗ, ಅದುವೇ ಅತ್ಯಂತ ಹಳೆಯ ಪೋಷಣೆಯುಳ್ಳ ಆಹಾರ…..

ಸಿರಿಧಾನ್ಯಗಳು
ಸಿರಿಧಾನ್ಯಗಳು ಮಾನವನ ಅತ್ಯಂತ ಹಳೆಯ ಆಹಾರ ಹಾಗೂ ಗೃಹಬಳಕೆಗೆ ಉಪಯೋಗಿಸುತ್ತಿದ್ದ ಮೊದಲ ಏಕದಳ ಧಾನ್ಯ. ನಮ್ಮ ಅಡುಗೆ ಮನೆಗಳಲ್ಲಿ ಕಾಳುಗಳು ಮತ್ತು ಸಿರಿಧಾನ್ಯಗಳ ಅನುಪಸ್ಥಿತಿ, ಪಾಲಿಶ್ ಅಕ್ಕಿಗಳು, ಗೋಧಿ, ಸಕ್ಕರೆ, ಕರಿದ ಆಹಾರ, ಮೈದಾ, ಆಹಾರದಲ್ಲಿ ರಾಸಾಯನಿಕಗಳ ಬಳಕೆಯಿಂದ ಜೀವನ ಪರ್ಯಂತ ಅನುಭವಿಸುವ ಕಾಯಿಲೆಗಳನ್ನು ಆಹ್ವಾನಿಸಿದ್ದೇವೆ. “ಉತ್ತಮ ಆಹಾರ ಸೇವನೆ ನಮ್ಮ ಹಕ್ಕು”. ನಾವು ಸೇವಿಸುವ ಆಹಾರಗಳು ಕಡಿಮೆ ಗ್ಲೈಸಿಮಿಕ್ ಸೂಚಿಗಳನ್ನು ಒಳಗೊಂಡಿದ್ದಲ್ಲಿ ಅಂತಹ ಆಹಾರಗಳು ನಮ್ಮ ದೇಹಕ್ಕೆ ಉತ್ತಮವಾಗಿರುತ್ತದೆ.

ಆದ್ದರಿಂದ ನಾವು ಉತ್ತಮ ಆರೋಗ್ಯಕರ ಜೀವನಕ್ಕಾಗಿ ಕಡಿಮೆ ಇರುವ ಪದಾರ್ಥ ಹಾಗೂ ಪೋಷಣೆಯುಳ್ಳ ಆಹಾರ ಎಂದು ಖಚಿತಪಡಿಸಿಕೊಂಡು, ಅಂತಹ ಆಹಾರ ಪದಾರ್ಥಗಳನ್ನು ತಿನ್ನಲು ಉಪಯೋಗಿಸಬೇಕು. ಸಿರಿಧಾನ್ಯಗಳು ಹೆಚ್ಚಿನ ಪೌಷ್ಠಿಕತೆ ಹೊಂದಿದ್ದು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತವೆ. ಸಿರಿಧಾನ್ಯಗಳು ಅತ್ಯಂತ ಪೌಷ್ಟಿಕರವಾಗಿರುವುದರಿಂದ, ಇದನ್ನು ಉಪಯೋಗಿಸಿದಾಗ ಅಪೌಷ್ಠಿಕತೆಯನ್ನು ಹೋಗಲಾಡಿಸುವುದಲ್ಲದೆ ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಗಟ್ಟಬಹುದು.

ಪಂಚರತ್ನ ಸಿರಿಧಾನ್ಯಗಳಲ್ಲಿರುವ ಗುಣ ವಿಶೇಷಗಳು

ಆರ್ಕ : ಇದು ಆದಿ ಬೀಜ. ಸೂರ್ಯ ದೇವರ ಹೆಸರು ಇದು ನಸು ಕೆಂಪು ಬಣ್ಣದಿಂದ ಕೂಡಿದೆ ಈ ಧಾನ್ಯ ದೇಹದಲ್ಲಿ ರಕ್ತಶುದ್ಧಿ ಕಾರ್ಯದಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ನವಣೆ: ಈ ಧಾನ್ಯವು ತೆಳು ಹಳದಿ ಬಣ್ಣದಿಂದ ಕೂಡಿದ್ದು, ಶರೀರದಲ್ಲಿರುವ ನರನಾಡಿಗಳನ್ನು ಪುನಶ್ಚೇತನಗೊಳಿಸುವುದಲ್ಲದೆ. ನರ ದೌರ್ಬಲ್ಯವನ್ನು ನಿವಾರಿಸುತ್ತದೆ. ಮುಷ್ಠಿ ರೋಗ ಬರುವುದನ್ನು ತಡೆಗಟ್ಟುತ್ತದೆ. ಸರ್ವಜ್ಞನಂತಹ ಕವಿಗಳೂ ಸಹ ನವಣೆಯ ಗುಣತತ್ವವನ್ನು ತಮ್ಮ ತ್ರಿಪದಿಯ ವಚನದಲ್ಲಿ ಕೊಂಡಾಡಿದ್ದಾರೆ. ನವಣೆಯ ಶಕ್ತಿಯನ್ನು ಬಿಲ್ಲಿನ ದಾರಕ್ಕೆ ಹೋಲಿಸಿದ್ದಾರೆ. ಈ ದಾರ ಹೇಗೆ ಅನುಕೂಲಕ್ಕೆ ತಕ್ಕಂತೆ ಬಾಗಿದರೂ ಶಕ್ತಿಯುತವಾಗಿರುತ್ತದೋ ಹಾಗೆ ನವಣೆ ತಿಂದವನ ದೇಹ ಆರೋಗ್ಯವಾಗಿರುತ್ತದೆ ಎಂಬುದು ಅರ್ಥ. ಗ್ರಾಮೀಣ ಪ್ರದೇಶದಲ್ಲಿ ನವಣೆ ಅಕ್ಕಿಯ ಅನ್ನವನ್ನು ಮಜ್ಜಿಗೆ ಹಾಗೂ ಮೊಸರಿನೊಂದಿಗೆ ಉಣ್ಣುವುದು ರೂಢಿ, ಇದನ್ನು ಗರ್ಭಿಣಿ ಸ್ತ್ರೀಯರು ಸೇವಿಸುತ್ತಿದ್ದರೆ ಹುಟ್ಟುವ ಮಕ್ಕಳಿಗೆ ಜ್ವರ ಬಂದಾಗ ಮಕ್ಕಳಿಗೆ ಮುಷ್ಠಿ ರೋಗ ಬರುವುದಿಲ್ಲ. ಅಲ್ಲದೆ ಅಂಗಾಂಗಳನ್ನು ಯಾವುದೇ ನೋವಿನಿಂದ ಪಾರು ಮಾಡುತ್ತದೆ. ನವಣೆಯು ಸಂಧಿವಾತ ಹಾಗೂ ಕಂಪವಾಯು ವಿಗೆ ಬಹಳ ಲಾಭದಾಯಕ.

ಸಾಮೆ : ಇದು ಮಾಸಲು ಬಿಳಿ ಬಣ್ಣವುಳ್ಳದ್ದು ಸಂತಾನೋತ್ಪತ್ತಿಯ ಕ್ಷೀಣತೆಯನ್ನು ಸಮಪರ್ಕಗೊಳಿಸುತ್ತದೆ. ಅಂದರೆ ಹೆಣ್ಣು ಮಕ್ಕಳಲ್ಲಿ ಅಂಡಾಶಯದ ಅನಾರೋಗ್ಯವನ್ನು ಸರಿಪಡಿಸುತ್ತದೆ. ಗಂಡು ಮಕ್ಕಳಲ್ಲಿ ವೀರ್ಯಾಣುಗಳ ಕೊರತೆಯನ್ನು ನೀಗಿಸುತ್ತದೆ.

ಊದಲು : ಈ ಧಾನ್ಯವು ಬಿಳಿ ಬಣ್ಣದ್ದು ಇದರ ನಾರು ಯಕೃತ್ತು ಅಂಗದ ಶುದ್ಧೀಕರಣದಲ್ಲಿ ಉಪಯುಕ್ತ.

ಕೊರ್ಲೆ : ಇದು ತಿಳಿ ಹಸುರು ಬಣ್ಣದ ಧಾನ್ಯ. ಪಂಚನಾಂಗಗಳ ಕಾರ್ಯ ದಕ್ಷತೆಯನ್ನು ಹೆಚ್ಚಿಸುತ್ತದೆ. ನವಣೆಯು
ಸಂಧಿವಾತ ಹಾಗೂ ಕಂಪವಾಯು ಕಾಯಿಲೆಗೆ ಬಹಳ ಲಾಭದಾಯಕ. ಮಲಬದ್ಧತೆಗೆ ರಾಮಬಾಣ.

ಸಿರಿಧಾನ್ಯಗಳ ಬಗ್ಗೆ ಉಪಯುಕ್ತ ಮಾಹಿತಿಗಳು

ಜೀವನ ಎಂದರೆ ದುಡ್ಡು ಮಾತ್ರವಲ್ಲ, ಆರೋಗ್ಯವಿಲ್ಲದ ದುಡ್ಡು ಕಬ್ಬಿಣಕ್ಕೆ ಸಮ.ಜೀರ್ಣಕ್ರಿಯೆಯು ಸಂಪೂರ್ಣವಾದಾಗ ಮಾತ್ರ ಆರೋಗ್ಯ ಲಭಿಸುತ್ತದೆ.ನಾವು ಸೇವಿಸುವ ಆಹಾರದಲ್ಲಿ ನಾರು ಪದಾರ್ಥವು ಕಡ್ಡಾಯವಾಗಿ ಇರಲೇಬೇಕು. ಇದು ಜೀರ್ಣಕ್ರಿಯೆ ಸಂದರ್ಭದಲ್ಲಿ ನಡೆಯುವ 108 ಜಲವಿಚ್ಛೇದಕ ರಾಸಾಯನಿಕ ಕ್ರಿಯೆಗಳನ್ನು ಪೋಷಿಸಿ ಅದು ಸರಳವಾಗಿ ರಕ್ತಕ್ಕೆ ಸೇರಲು ನೆರವಾಗುತ್ತದೆ.ಇದು ಇರುವುದರಿಂದ ಮಲ ವಿಸರ್ಜನೆಯು ಸಲೀಸಾಗಿ ನಡೆಯುತ್ತದೆ.

ಅಕ್ಕಿ, ಗೋಧಿ ಸೇವನೆಯಿಂದ ದೇಹಕ್ಕೆ ಹೆಚ್ಚು ನಾರು ದೊರೆಯಲಾರದು. ಸಿರಿ ಧಾನ್ಯ ಅಕ್ಕಿಗಳು ನಾರಿನ ಗಣಿಗಳು. ಹಾಗಾಗಿ ಸಿರಿಧಾನ್ಯಗಳಾದ ಆರ್ಕ (9% ನಾರು), ನವಣೆ (8% ನಾರು), ಊದಲು (9.8% ನಾರು), ಸಾಮೆ (9.8% ನಾರು), ಕೊರಲೆ (12% ನಾರು) ಜೊತೆಗೆ ತರಕಾರಿಗಳು ಮತ್ತು ಹಣ್ಣುಗಳನ್ನು ನಾವು ಹೆಚ್ಚು ಸೇವಿಸಬೇಕು. ಸಿರಿಧಾನ್ಯವಾದ ಆರ್ಕ ರಕ್ತ ಶುದ್ಧಿ ಮಾಡುತ್ತದೆ.

ಸಿರಿ ಧಾನ್ಯ ಅಕ್ಕಿಗಳು ಸಕ್ಕರೆ ಯನ್ನು ನಿಧಾನವಾಗಿ ರಕ್ತದಲ್ಲಿ ಕರಾರುವಾಕ್ಕಾಗಿ ಬಿಡುಗಡೆ ಮಾಡುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ ಸಿರಿ ಧಾನ್ಯ ಅಕ್ಕಿಗಳು ನಮ್ಮ ದೇಹದ ರೋಗ ನಿರೋಧಕ
ಸಿರಿ ಧಾನ್ಯ ಅಕ್ಕಿಗಳನ್ನು ಬೇರೆ ಬೇರೆಯಾಗಿಯೇ ಉಪಯೋಗಿಸಬೇಕು. ಮಿಶ್ರಣ ಮಾಡಿದರೆ ಯಾವುದೇ ಉಪಯೋಗವಿಲ್ಲ.
ನವಣೆಯಲ್ಲಿ 8% ನಾರು ಮತ್ತು 12.3% ಗ್ರಾಂ ಪ್ರೊಟೀನು ಇದೆ. ನವಣೆಯಲ್ಲಿರುವ ಥೈಮಿನ್ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೂ ಸಹಕಾರಿ. ನವಣಿಯು ಮೆದುಳಿನ ಬೆಳವಣಿಗೆಗೆ ತುಂಬಾ ಉಪಯುಕ್ತ.
ಸಜ್ಜೆ ಹಾಲು ಹೆಣ್ಣು ಮಕ್ಕಳಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿನ ಏರುಪೇರುಗಳನ್ನು ಸಮತೋಲನದಲ್ಲಿಡುತ್ತದೆ.

Comments are closed.