ಕಾಫಿ ತುಂಬಾ ಜನ ಇಷ್ಟಪಟ್ಟು ಕುಡಿಯುವ ಪೇಯ. ಆದರೂ ಅದನ್ನು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ ಎನ್ನುತ್ತಾರೆ. ಆದರೆ ಅದೇ ಬೆಲ್ಲ ಹಾಕಿ ಮಾಡಿದ ಕಾಫಿಯಲ್ಲಿ ಅಷ್ಟೇ ಆರೋಗ್ಯ ಲಾಭಗಳಿವೆಯಂತೆ. ಹಾಲು, ಸಕ್ಕರೆ ಹಾಕಿದ ಕಾಫಿ ಕುಡಿಯುವವರು ಬ್ಲ್ಯಾಕ್ ಕಾಫಿಗೆ ಬದಲಾಯಿಸಿಕೊಂಡರೆ ಕಾಫಿ ಕುಡಿದ ತೃಪ್ತಿಯೂ ಸಿಗುತ್ತದೆ ಆರೋಗ್ಯ ಲಾಭವೂ ಆಗುತ್ತದೆ.
ಹಾಗಾದ್ರೆ ಕರಿ ಕಾಫಿಯಿಂದ ಏನೆಲ್ಲಾ ಆರೋಗ್ಯಲಾಭಗಳಿವೆ ಬನ್ನಿ ತಿಳಿದುಕೊಳ್ಳೋಣ;
ಜ್ಞಾಪಕ ಶಕ್ತಿ ಹೆಚ್ಚುವುದು:
ಕಾಫಿ ಕುಡಿಯುವುದರಿಂದ ಮೆದುಳು ಚುರಿಕಾಗಿರುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ. ಇದರಿಂದ ‘ಅಲ್ಜೈಮರ್ಸ್’ ಖಾಯಿಲೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಅಧ್ಯಯನ ಹೇಳುತ್ತದೆ. ‘ಅಲ್ಜೈಮರ್ಸ್’ ಅಂದ್ರೆ ನೆನಪಿನ ಶಕ್ತಿ ಕುಂದಿ ಮರೆಗುಳಿತನ ಕಾಡುವುದು.
ವ್ಯಾಯಾಮ ಮಾಡುವಾಗ ದೇಹಕ್ಕೆ ಶಕ್ತಿ ತುಂಬುವುದು:
ಕಾಫಿ ಕುಡಿದಾಗ ರಕ್ತದಲ್ಲಿ ‘ಎಪಿನ್ಫ್ರಿನ್ (Epinephrine)’ ಎಂಬ ಹಾರ್ಮೋನ್ ಬಿಡುಗಡೆಯಾಗುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದು. ಆದ್ದರಿಂದಲೇ ಸಾಮಾನ್ಯವಾಗಿ ಜಿಮ್ ಟ್ರೈನರ್ ಗಳು ಬ್ಲ್ಯಾಕ್ ಕಾಫಿ ಕುಡಿಯಿರಿ ಎಂದು ಸಲಹೆ ನೀಡುತ್ತಾರೆ.
ಲಿವರ್ ಗೆ ಉತ್ತಮ:
ಬ್ಲ್ಯಾಕ್ ಕಾಫಿ ಕುಡಿಯುವ ಶೇ 80ರಷ್ಟು ಜನರಿಗೆ ಲಿವರ್ ಕ್ಯಾನ್ಸರ್, ಹೆಪಟೈಟಿಸ್ ಮತ್ತು ಫ್ಯಾಟಿ ಲಿವರ್ ಸಮಸ್ಯೆಗಳುಂಟಾಗುವುದಿಲ್ಲ.
ಹೊಟ್ಟೆಯನ್ನು ಶುದ್ಧೀಕರಿಸುತ್ತದೆ:
ಕರಿ ಕಾಫಿ ಹೇಹದಲ್ಲಿರುವ ಬೇಡದ ಬ್ಯಾಕ್ಟೀರೀಯಾ ಮತ್ತು ಕಲ್ಮಶವನ್ನು ಹೊರಹಾಕುತ್ತದೆ.
ತೂಕ ಕಡಿಮೆಯಾಗುವುದು:
ಬ್ಲ್ಯಾಕ್ ಕಾಫಿ ಚಯಾಪಚಯ ಕ್ರೀಯೆಗೆ ಸಹಕಾರಿ. ಇದರಿಂದ ತೂಕ ಕಡಿಮೆಯಾಗುತ್ತದೆ. ಅಷ್ಟು ಮಾತ್ರವಲ್ಲದೆ, ಮಧುಮೇಹವನ್ನು ನಿಯಂತ್ರಿಸಿ, ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ. ನಿಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ಹ್ಯಾಪಿ ಹಾರ್ಮೋನ್ ಬಿಡುಗಡೆ ಮಾಡುತ್ತದೆ.

Comments are closed.