ಉಡುಪಿ : ನಗರ ಸ್ಥಳೀಯ ಸಂಸ್ಥೆ ಚುನಾವಣೆ-2018 ಕ್ಕೆ ಸಂಬಂದಪಟ್ಟಂತೆ, ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತ ಮತದಾನವಾಗಿದೆ.

ಉಡುಪಿ ನಗರಸಭೆಗೆ 68% , ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ 75%, ಕುಂದಾಪುರ ಪುರಸಭೆಗೆ 68%, ಕಾರ್ಕಳ ಪುರಸಭೆಗೆ 71% ಮತದಾನವಾಗಿದ್ದು, ಒಟ್ಟು ಜಿಲ್ಲೆಯಲ್ಲಿ 70.5% ಮತದಾನವಾಗಿದೆ.
ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿದ ಜನತೆ ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ 14.25% ಮತದಾನವಾಗಿದ್ದು, 11 ಗಂಟೆಯ ವೇಳೆಗೆ 31.14 %, 1 ಗಂಟೆಗೆ 45.40 % , 3 ಗಂಟೆಗೆ 56.43% ಮತದಾನ ನಡೆದಿತ್ತು. ವೃದ್ದರು, ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಸಹಾಯಕರ ನೆರವಿನಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಕುಂದಾಪುರದ ಸರಕಾರಿ ಆಸ್ಪತ್ರೆ ವಾರ್ಡ್ನ ಬಂಟ್ವಾಳ ರಘುನಾಥ ರಾವ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಅನಾರೋಗ್ಯ ಪೀಡಿತ 80 ವರ್ಷದ ಸಿದು ಮೊಗೇರ್ತಿ ವಾಕರ್ ನೆರವಿನಿಂದ ಬಂದು ಮತ ಚಲಾಯಿಸಿದರು. ಸಾಲಿಗ್ರಾಮದ ಯಕ್ಷಮಠ ವಾರ್ಡ್ ನ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿಯಲ್ಲಿ 50 ವರ್ಷದ ವಿಶೇಷಚೇತನ ವ್ಯಕ್ತಿ ವಾಸು ಮತ ಚಲಾಯಿಸಿದರು.
ಸಾಲಿಗ್ರಾಮ ಕುಂದಾಪುರ ಬಿಜೆಪಿ ಬಹುಮತ
ಕುಂದಾಪುರ ಹಾಗೂ ಸಾಲಿಗ್ರಾಮದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದ ಅಧಿಕಾರ ಹಿಡಿಯಲಿದೆ. ಕಳೆದ ಬಾರಿ ಕುಂದಾಪುರ ಪುರಸಭೆಯಲ್ಲಿ ಬಿಜೆಪಿ ಪಡೆದ ಸ್ಥಾನಕ್ಕಿಂತ ಈ ಬಾರಿ ಹೆಚ್ಚು ಸ್ಥಾನ ಪಡೆಯಲಿದೆ. ಈ ಹಿಂದೆ ಬಿಜೆಪಿಯಿಂದ ಗೆದ್ದ ಅಭ್ಯರ್ಥಿಗಳು ಉತ್ತಮ ಕೆಲಸ ಮಾಡಿದ್ದು, ಕುಂದಾಪುರ ಪುರಸಭೆಯಲ್ಲಿ ಬಿಜೆಪಿ ಅಧಿಕಾರಿದಲ್ಲಿದ್ದಾಗ ಉತ್ತಮ ಕೆಲಸ ಮಾಡಿದೆ. ಈ ಬಾರಿ ಅದರ ಪ್ರತಿಫಲವಾಗಿ ಬಿಜೆಪಿ ಪುರಸಭೆ ಅಧಿಕಾರಿ ಹಿಡಿಯಲಿದೆ. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧಿಕಾರಿ ಕೂಡಾ ಬಿಜೆಪಿ ಪಾಲಾಗಲಿದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ, ಕುಂದಾಪುರ ವಿಧಾನ ಸಭಾ ಕ್ಷೇತ್ರ.
Comments are closed.