ಕರಾವಳಿ

ಪತ್ರಿಕೆಗಳು ಎಲ್ಲಾ ಆಯಾಮಗಳಲ್ಲಿ ಕೆಲಸ ಮಾಡಬೇಕಾಗಿದೆ : ಡಾ. ನರೇಂದ್ರ ರೈ ದೇರ್ಲ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರುತಾಲೂಕುಘಟಕ ಮತ್ತುಸ್ಕೂಲ್‌ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯಕನ್ನಡ ಸಂಘ ಇದರ ಸಹಭಾಗಿತ್ವದಲ್ಲಿವಿದ್ವಾನ್ ವಿ.ಬಿ. ಹೊಸಮನಿ, ಭಾರಧ್ವಾಜ ಪ್ರಕಾಶನಕೊಂಚಾಡಿ ಮಂಗಳೂರು ಇದರ ಕಲಾ ದರ್ಶನ ದತ್ತಿ ಕಾರ್ಯಕ್ರಮ ರೋಶನಿ ನಿಲಯದಲ್ಲಿ ನಡೆಯಿತು.

ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು‌ ಉದ್ಘಾಟನಾ ಭಾ ಷಣದಲ್ಲಿ ‘ಕನ್ನಡ ತನ್ನೊಳಗಿನ ಭಾಷೆಯಾಗಬೇಕು, ಬದುಕಾಗಬೇಕು. ಆಗ ನಾಡು ನುಡಿಕುರಿತಂತೆ ಆಸಕ್ತಿ ಬೆಳೆಯುತ್ತದೆ. ಕನ್ನಡ ಕೇವಲ ಕನ್ನಡಿಗರಿಗೆಸೀಮಿತವಾಗಿರದೆ ಈ ನಾಡಿನಲ್ಲಿರುವ‌ಎಲ್ಲರದ್ದೂ ಆಗಬೇಕು. ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿಕನ್ನಡೇತರರನ್ನು ಭಾಗಿಯಾಗಿಸುವ ಮೂಲಕ ನಾಡು, ನುಡಿಯ‌ಋಣ ಸಂದಾಯವಾಗುವಂತಾಗುತ್ತದೆ ಎಂದರು .

ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ‌ಅಂಕಣಕಾರರಾಗಿರುವ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪುತ್ತೂರು‌ಇಲ್ಲಿನಕನ್ನಡ ವಿಭಾಗ ಮುಖ್ಯಸ್ಥರಾದಡಾ. ನರೇಂದ್ರರೈದೇರ್ಲ ಭಾಗವಹಿದ್ದರು.

ಅವರುತಮ್ಮ‌ಉಪನ್ಯಾಸ ಮಾಡುತ್ತಾ ಪತ್ರಿಕೆಗಳ ಕೇಂದ್ರಿಕರಿಸುವ ವಿಚಾರ ವಿಷಯಗಳು ಭಿನ್ನವಾಗಬೇಕು. ಮಾಧ್ಯಮ‌ಇನ್ನೊಂದು ಮಾಧ್ಯಮವನ್ನು ವಿಶ್ಲೇಷಿಸುವ ಸನ್ನಿವೇಶದ ನಿರ್ಮಾಣವಾಗಬೇಕು. ಪ್ರತಿಯೊಬ್ಬರೂ ಪತ್ರಿಕೆ ಖರೀದಿಸಿ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು. ಆಗ ಬರೆಯುವ ಹವ್ಯಾಸ ಬೆಳೆಯುತ್ತದೆ’ ಎಂದರು.

ಕಾಲೇಜಿನ ಪ್ರಾಶುಪಾಲರಾದಮಿಸ್. ಜ್ಯೂಲಿಯಟ್ ಸಿ.ಜೆ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕುಘಟಕಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಸ್ವಾಗತಿಸಿ, ಕಾಲೇಜಿನಕನ್ನಡ ಸಂಘದ‌ಅಧ್ಯಕ್ಷರಾದ ಶ್ರೀ ಓಬನಾಥ್ ವಂದಿಸಿದರು, ವಿದ್ಯಾರ್ಥಿನಿ ಸಿಸ್ಟರ್ ಜೊವಿಟ ನಿರೂಪಿಸಿದರು.

ಈ ಸಂದರ್ಭ ಮಂಗಳೂರು ಘಟಕದ ಕಾರ್ಯದರ್ಶಿಗಳಾದ ಡಾ.ಎಸ್. ಪದ್ಮನಾಭ ಭಟ್ ಮತ್ತುದೇವಕಿ‌ಅಚ್ಚುತ, ಕೋಶಾಧಿಕಾರಿಕೃಷ್ಣಮೂರ್ತಿ ಉಪಸ್ಥಿತರಿದ್ದರು.

Comments are closed.