ಕರಾವಳಿ

ತುಳುವೇಶ್ವರ ತುಳುನಾಡಿನ ಪ್ರತೀಕ :ತುಳುನಾಡೋಚ್ಚಯ ಸಮಾಲೋಚನ ಸಭೆಯಲ್ಲಿ ಡಾ. ಆರೂರು ಪ್ರಸಾದ್ ರಾವ್

Pinterest LinkedIn Tumblr

ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆ – ಬಸ್ರೂರಿನಲ್ಲಿ ತುಳುನಾಡೋಚ್ಚಯ-2018

ಮಂಗಳೂರು : ಒಂದು ಊರಿಗೆ ಆ ಊರಿನ ದೇವಾಲಯ ಅಥವಾ ಆ ಊರಿನ ದೇವರ ಹೆಸರಲ್ಲಿ ಕರೆಯುವುದು ಸಾಮಾನ್ಯ. ಹಾಗಿರುವಾಗ ತುಳುವೇಶ್ವರನಿಂದ ತುಳುನಾಡಾಗಿರಬಹುದು. ಅದುದರಿಂದ ತುಳುವೇಶ್ವರನು ತುಳುನಾಡಿನ ದೇವನಾಗಿರುವನು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತುಳುವೇಶ್ವರನ ದರ್ಶನಪಡೆದು ಕೃತಾರ್ಥರಾಗಬಹುದು ಎಂದು ಡಾ. ಆರೂರು ಪ್ರಸಾದ್ ರಾವ್ ಅಭಿಪ್ರಾಯ ಪಟ್ಟರು.

ಅವರು ಡಿಸಂಬರ್ ತಿಂಗಳಲ್ಲಿ ಬಸ್ರೂರಿನಲ್ಲಿ ನಡೆಯಲಿರುವ ತುಳುನಾಡೋಚ್ಚಯ-2018 ಕಾರ್ಯಕ್ರಮದ ಸಮಾಲೋಚನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮೀಸಲಾತಿಯಿಂದ ನಮ್ಮ ಅಭಿವೃದ್ದಿ ಕುಂಠಿತ : ಅಪ್ಪಣ್ಣ ಹೆಗ್ಡೆ

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ ತುಳು ಹಲವು ಶತಮಾನಗಳ ಭಾಷೆ, ಜಗತ್ತಿನಲ್ಲಿ ಕರಾವಳಿಗರನ್ನು ಗುರುತಿಸುವ ಸಂಪರ್ಕ ಭಾಷೆ ತುಳು. ನಾವು ಭಾರತೀಯರು ವಿಶಾಲ ಹೃದಯದವರು, ಅದರಲ್ಲೂ ತುಳುನಾಡಿನ ನಾವು ಮಹಾ ಸಾಧಕರು, ಧೈರ್ಯಶಾಲಿಗಳು, ಅದರೆ ಇಂದು ಮೀಸಲಾತಿಯಿಂದ ನಮ್ಮ ಅಭಿವೃದ್ದಿ ಕುಂಠಿತವಾಗಿದೆ. ಜನರು ಮೀಸಲಾತಿಗಾಗಿ ತಮ್ಮ ಶಕ್ತಿ-ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹಿಂದೆ ನಮ್ಮ ಬಂಟ ಸಮುದಾಯದವರು.ಮೀಸಲಾತಿಗಾಗಿ ಒತ್ತಾಯಿಸಿದಾಗ ಇದರ ದುಷ್ಪರಿಣಾಮವನ್ನರಿತ ನಮ್ಮ ಹಿರಿಯರು ಅದಕ್ಕೆ ಸಮ್ಮತಿಸಿರಲಿಲ್ಲ. ಅದುದರಿಂದಲೇ ಬಂಟ ಸಮಾಜ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.

ಕುಂದಾಪುರ ಜಿಲ್ಲಾನ್ಯಾಯಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿಯವರು ಮಾತನಾಡಿ ತುಳುಭಾಷೆ, ನಾಡು, ಸಂಸ್ಕೃತಿಗೆ ಅದ್ಭುತ ಶಕ್ತಿಯಿದೆ. ನಾವು ಎಷ್ಟೇ ಉನ್ನತ ಮಟ್ಟಕ್ಕೆ ಏರಿದರೂ ಅದರ ಕಾಂತೀಯ ವಲಯ ನಮ್ಮನ್ನು ಆಕರ್ಷಿಸುತ್ತದೆ ಎಂದರು.

ಸಭೆಯಲ್ಲಿ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳ ಕೊನೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆಯ ನಿಟ್ಟಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಕನ್ನಡ, ತುಳು, ಕುಂಧಗನ್ನಡ, ಕೊಂಕಣಿ, ಮರಾಠಿ, ಹವ್ಯಕ, ಶಿವಳ್ಳಿ, ಮಲೆಯಾಳ, ಮಾವಿಲ, ಉರ್ದು, ಬೈರಕನ್ನಡ, ಕರ್ಹಾಡ, ಅರೆಗನ್ನಡ, ಕೊಡವ, ಕೊರಗ ಮತ್ತು ಬ್ಯಾರಿ ಭಾಷೆಗಳ ಸಾಹಿತ್ಯ, ಸಾಂಸ್ಕೃತಿಕ, ಜನಪದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಮುಂದಿನ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಎಲ್ಲಾ ಸಮುದಾಯ ಮತ್ತು ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಸಪ್ಟೆಂಬರ್ 16ರಂದು ಆದಿತ್ಯವಾರ ಸಂಜೆ 3ಗಂಟೆಗೆ ನಿವೇದಿತಾ ಪ್ರೌಢಶಾಲೆಯ ವಿಶಾಲಾಕ್ಷಿ ಪೂಂಜ ಸಭಾ ಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ಮೋಹನ್ ಸ್ವಾಮೀಜಿ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಮಕಿಶನ್ ಹೆಗಡೆ ಬಸ್ರೂರು, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಮಮತ ರಾಮಕಿಶನ್ ಹೆಗಡೆ, ಒಡಿಪು ತುಳು ಕೂಟದ ತಾರಾ ಆಚಾರ್ಯ, ಕುಡ್ಲ ತುಳು ಪತ್ರಿಕೆಯ ಯಶೋದಾ ಕೇಶವ್, ಸರ್ಗ ಯಶವಂತ್, ಪುರುಷೋತ್ತಮ ಬಲ್ಯಾಯ, ನಮ ತುಳುವೆರ್ ಸಂಘಟನೆಯ ಸುಕುಮಾರ್ ಮೋಹನ್, ರಾಮಪ್ರಸಾದ್ ಭಟ್, ತುಳುವೆರೆ ಆಯನೊ ಕೂಟ ಕುಡ್ಲದ ಆಶಾ ಶೆಟ್ಟಿ ಆತ್ತಾವರ, ಹರೀಶ್ ಶೆಟ್ಟಿ ಫಣಿಯೂರು, ವಿಜಯಕುಮಾರ್ ಶೆಟ್ಟಿ ಬೈಂದೂರು, ಚಂದ್ರಿಕಾ ಶೆಟ್ಟಿ, ವಿನಯ ಮಲ್ಲಿ, ಎ. ರಾಜಾರಾಮ್ ರಾವ್, ದಿನೇಶ್ ಕಿಣಿ, ಮಹೇಶ್ ಕಿಣಿ, ನಾಗರಾಜ್ ಕುದ್ರೊಳಿ, ಪೃಥ್ವಿರಾಜ್ ಶೆಟ್ಟಿ, ಮಹೇಶ್ ಶೆಟ್ಟಿ, ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

ನಿವೇದಿತಾ ಪ್ರೌಢಶಾಲೆಯ ಪ್ರಾಧ್ಯಾಪಕರಾದ ದಿನಕರ ಶೆಟ್ಟಿ ಸ್ವಾಗತಿಸಿ ತುಳುವೆರೆ ಆಯನೊ ಕೂಟ ಕುಡ್ಲದ ಕಾರ್ಯದರ್ಶಿ ಪ್ರಸಾದ್ ಎಸ್. ಕೊಂಚಾಡಿ, ಕೃತಜ್ಞತೆ ಸಲ್ಲಿಸಿದರು, ವಿಶ್ವ ತುಳುವೆರೆ ಆಯನೊ ಕೂಟದ ಪ್ರಧಾನ ಸಂಚಾಲಕ ಡಾ. ರಾಜೇಶ್ ಆಳ್ವ ಬದಿಯಡ್ಕ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದರು.

Comments are closed.