ಕರಾವಳಿ

ಸ್ನಾಯು ಸೆಳೆತ ನಿವಾರಣೆಗೆ ಸಾಸಿವೆ ಪೇಸ್ಟ್‌ ಸಹಕಾರಿ.

Pinterest LinkedIn Tumblr

ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ನಾನಾ ರೀತಿಯ ಪರಿಹಾರಗಳು ಇರುತ್ತವೆ. ಅವುಗಳಲ್ಲಿ ಮುಖ್ಯವಾದದ್ದು ಸಾಸಿವೆ. ಇದು ಹಲವಾರು ಸಮಸ್ಯೆಗಳಿಗೆ ರಾಮಬಾಣ ಇದ್ದಂತೆ. ಮುಖ್ಯವಾಗಿ ನೋವು ನಿವಾರಕ. ಸ್ನಾಯು ಸೆಳೆತ, ಹುಳುಕಡ್ಡಿಯಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

* ಗಂಟಲು ನೋವು ಇದ್ದರೆ ನೀರಿಗೆ ಅರ್ಧ ಹೋಳು ನಿಂಬೆ ರಸ ಒಂದು ಚಮಚ ಸೈಂಧವ ಉಪ್ಪು ಮತ್ತು ಒಂದು ಚಮಚ ಸಾಸಿವೆಯನ್ನು ಹಾಕಿ 10 ನಿಮಿಷ ಕುದಿಸಿ. ಬೆಚ್ಚಗಾದ ನಂತರ ಈ ನೀರನ್ನು ಬಾಯಿಗೆ ಹಾಕಿ ಗಾರ್ಗಲ್‌ ಮಾಡಿದರೆ ನೋವು ಬೇಗ ಶಮನವಾಗುತ್ತದೆ.

* ಒಂದು ಚಮಚ ಹಳದಿ ಸಾಸಿವೆ ಪೇಸ್ಟ್‌ ಅನ್ನು ಸೇವಿಸಿ, ಮೇಲೆ ಬಿಸಿ ನೀರು ಕುಡಿದರೆ ಮಸಲ್‌ ಕ್ರಾಂಫ್ಸ್‌(ಸ್ನಾಯು ಸೆಳೆತ) ನಿವಾರಣೆಯಾಗುತ್ತದೆ.* ಮಕ್ಕಳು ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ ಹಳದಿ ಸಾಸಿವೆಯನ್ನು ಹುರಿದು ಪುಡಿ ಮಾಡಿ. ಅರ್ಧ ಚಮಚ ಪುಡಿಯನ್ನು ಒಂದು ಲೋಟ ಬಿಸಿ ಹಾಲಿಗೆ ಹಾಕಿ ಕಲಸಿ ಮಲಗುವ ಮುಂಚೆ ಮಕ್ಕಳಿಗೆ ಕುಡಿಸಿದರೆ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದು ಕಡಿಮೆಯಾಗುತ್ತದೆ.

* ಎದೆಯಲ್ಲಿ ಕಫ ಹೆಚ್ಚು ಕಟ್ಟಿದ್ದರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಎದೆ ಮತ್ತು ಬೆನ್ನಿಗೆ ಮಸಾಜ್‌ ಮಾಡಿದರೆ ಕಫ ಕರಗಿ ದಮ್ಮು, ಕೆಮ್ಮು ಶಮನವಾಗುತ್ತದೆ.* ಕರಿ ಸಾಸಿವೆ ಬೀಜವನ್ನು ನೀರಿನೊಂದಿಗೆ ಪೇಸ್ಟ್‌ ಮಾಡಿ ಹುಳುಕಡ್ಡಿ ಆದ ಚರ್ಮದ ಮೇಲೆ ದಿನಕ್ಕೆ 3 ರಿಂದ 4 ಬಾರಿ ಲೇಪಿಸಿದರೆ ಹುಳುಕಡ್ಡಿ ಸಮಸ್ಯೆ ನಿವಾರಣೆಯಾಗುತ್ತದೆ.

* ಹೆಚ್ಚು ಸಮಯ ನಿಂತು ಕೆಲಸ ಮಾಡಿ ಪಾದಗಳ ನೋವಿದ್ದರೆ ಸಾಸಿವೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಆ ನೀರಲ್ಲಿ ಎರಡು ಕಾಲುಗಳನ್ನು ಇಟ್ಟುಕೊಂಡರೆ ನೋವು ಬೇಗ ಕಡಿಮೆಯಾಗುತ್ತದೆ.

Comments are closed.