ಕರಾವಳಿ

ಒಣಬೀಜಗಳನ್ನು ತಿಂದ ನಂತರ ನೀರು ಕುಡಿಯಬಾರದು ಯಾಕೆ..?

Pinterest LinkedIn Tumblr

ಒಂದು ಮುಷ್ಟಿ ನೀರು ನೆಲಗಡಲೆ ತಿಂದ ನಂತರ ನಮ್ಮ ಹಿರಿಯರು ನೀರು ಕುಡಿಯಬೇಡ ಎಂದು ತಾಕೀತು ಮಾಡುತ್ತಾ ಇದ್ದಿದ್ದು ನೆನಪಿದೆಯೇ? ಯಾಕೆ ಹೀಗೆ? ನೆಲಕಡಲೆ ತಿಂದ ತಕ್ಷಣ ನೀರು ಕುಡಿದರೆ ಕೆಮ್ಮು ಪ್ರಾರಂಭವಾಗುತ್ತದೆ ಎನ್ನುವುದು ಅವರ ನಂಬಿಕೆಯಾಗಿತ್ತು. ಇದು ನಿಜವೇ? ತಿಳಿದುಕೊಳ್ಳೋಣ ಬನ್ನಿ;

ಸಾಮಾನ್ಯವಾಗಿ ಎಲ್ಲಾ ಆರೋಗ್ಯ ತಜ್ಞರು ಇದನ್ನು ನಿರಾಕರಿಸುತ್ತಿದ್ದರೂ, ಕೆಲವರು ಈ ನಂಬಿಕೆಗೂ ಒಂದು ಕಾರಣ ಕಂಡುಹಿಡಿದಿದ್ದಾರೆ. ಅದಕ್ಕೆ ಕಾರಣ ನೆಲಕಡಲೆಯಲ್ಲಿರುವ ಎಣ್ಣೆಯ ಅಂಶ.

“ಎಣ್ಣೆಯಂಶ ಹೊಂದಿರುವ ಯಾವುದೇ ಆಹಾರವನ್ನು ಸೇವಿಸಿದ ನಂತರ ತಣ್ಣಗಿನ ನೀರು ಅಥವಾ ತಣ್ಣಗಿನ ಯಾವುದೇ ಪಾನೀಯ ಸೇವಿಸಿದರೆ ಅದರಲ್ಲಿರುವ ಕೊಬ್ಬಿನಂಶ ನಮ್ಮ ಆಹಾರದ ನಾಳದಲ್ಲಿ ಉಳಿದುಬಿಡುತ್ತದೆ. ಹೀಗಾಗಿ ಗಂಟಲಿನಲ್ಲಿ ಕಿರಿಕಿರಿಯುಂಟಾಗಿ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ವೈಯುಕ್ತಿಕವಾಗಿ ನಾನು ಈ ಕಾರಣವನ್ನು ಬೆಂಬಲಿಸುವುದಿಲ್ಲ. ಯಾಕೆಂದರೆ ನೆಲಕಡಲೆಯಲ್ಲಿರುವುದು ಪೂರ್ತಿ ಆರ್ದ್ರವಾಗುವ ಕೊಬ್ಬು (saturated fats). ಆದ್ದರಿಂದ ಇದನ್ನು ತಿಂದು ನೀರು ಕುಡಿಯುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ” ಎನ್ನುತ್ತಾರೆ

ಆಯುರ್ವೇದ ಏನು ಹೇಳುತ್ತದೆ?
‘ಆಯುರ್ವೇದದ ಪ್ರಕಾರ ಕೆಲವು ನಿಗದಿತ ಎಣ್ಣೆಯುಕ್ತ ಆಹಾರಗಳನ್ನು ನೀರಿನ ಜೊತೆ ಸೇವಿಸುವುದರಿಂದ ಆರೋಗ್ಯದ ಹಲವು ಸಮಸ್ಯೆಗಳನ್ನು ಗುಣಪಡಿಸಬಹುದು. ಇದಕ್ಕೆ ಉತ್ತಮ ಉದಾಹರಣೆ ‘ಚೀನಿಕಾಯಿ ಬೀಜ (pumpkin seed) ‘. ಮಲಗುವ ಮುಂಚೆ ಇದರ ಎಣ್ಣೆಯನ್ನು ನೀರಿನ ಜೊತೆ ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು’ ಎನ್ನುತ್ತಾರೆ

ತಣ್ಣೀರನ್ನು ಖಡಾಖಂಡಿತವಾಗಿ ಕುಡಿಯಲೇಬಾರದು ಎನ್ನುತ್ತದೆ ಆಯುರ್ವೇದ. ನೀರು ಕುಡಿಯುವುದಾದರೆ ಅದು ಬಿಸಿನೀರೇ ಆಗಿರಬೇಕು. ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ನೀರು ಕುಡಿಯಲೇಬಾರದು, ಆಹಾರ ಸೇವಿಸಿದ ನಂತರ 15 – 20 ನಿಮಿಷದ ನಂತರವೇ ನೀರು ಕುಡಿಯಬೇಕು ಎಂದೂ ಆಯುರ್ವೇದ ಹೇಳುತ್ತದೆ.

ಯಾವುದೇ ಒಣಬೀಜಗಳನ್ನು ತಿಂದ ತಕ್ಷಣ ಮಕ್ಕಳಿಗೆ ನೀರುಕೊಡಬಾರದು ಎಂದು ಹೇಳುವುದಕ್ಕೂ ಕಾರಣವಿದೆ. ಯಾಕೆಂದರೆ ಯಾವ ಸಂಯೋಜನೆಯ ಆಹಾರಗಳು ಯಾವ ದೇಹ ಪ್ರಕೃತಿಯ ಮಕ್ಕಳಿಗೆ ಹೊಂದಿಕೆಯಾಗತ್ತದೋ ನಮಗೆ ಗೊತ್ತಿರುವುದಿಲ್ಲ.

ಒಟ್ಟಾಗಿ ಹೇಳುವುದಾದರೆ ನೆಲಕಡಲೆ ಅಥವಾ ಯಾವುದೇ ಒಣಬೀಜಗಳನ್ನು ತಿಂದ ನಂತರ ನೀರು ಕುಡಿದರೆ ದೊಡ್ಡವರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮಕ್ಕಳಿಗೆ ಅಲರ್ಜಿಯಾಗಬಹುದೋ ಇಲ್ಲವೋ ಎಂದು ತಿಳಿದುಕೊಂಡು ಕೊಟ್ಟರೆ ಉತ್ತಮ.

Comments are closed.