ಕರಾವಳಿ

ಹರಳೆಣ್ಣೆ ಬಿಸಿ ಮಾಡಿ ಸೈಂಧವ ಲವಣ ಬೆರೆಸಿ ಹೊಟ್ಟೆ ಮೇಲೆ ಹಚ್ಚಿದರೆ ಅಗುವ ಪ್ರಯೋಜನ ಬಲ್ಲಿರಾ…?

Pinterest LinkedIn Tumblr

ಸೈಂಧವ

ಸೈಂಧವ ಲವಣ ಎಂಬುದು ಉಪ್ಪಿನ ಒಂದು ವಿಧವಾದರೂ, ಇದನ್ನು ಹೆಚ್ಚಾಗಿ ಔಷಧಿಯಾಗಿ ಬಳಕೆ ಮಾಡುತ್ತಾರೆ. ಅದರಲ್ಲೂ ಮನೆಮದ್ದಿನ ವಿಚಾರದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಆಯುರ್ವೇದ ಅಂಗಡಿಗಳಲ್ಲಿ, ಗ್ರಂಧಿಗೆ ಮಳಿಗೆಗಳಲ್ಲಿ ಸೈಂಧವ ಲವಣ ಲಭಿಸುತ್ತದೆ. ಹಾಗಿದ್ದರೆ ಇದರ ಉಪಯೋಗಗಳು ಏನು? ಎಂಬುದನ್ನು ಈಗ ನೋಡೋಣ.

* ಹೆಚ್ಚು ಔಷಧ ಗುಣಹೊಂದಿರುವ ಸೈಂಧವ ಲವಣಕ್ಕೆ ಆಯುರ್ವೇದದ ಚಿಕಿತ್ಸೆಯಲ್ಲಿ ಅಗ್ರ ಸ್ಥಾನ ನೀಡಲಾಗಿದೆ. ಇದರ ಕೆಲ ಔಷಧೀಯ ಗುಣ ಹೀಗಿದೆ.
* ಅಜೀರ್ಣ, ಹಸಿವು ಕಡಿಮೆ ಇದ್ದರೆ ಸೈಂಧವ ಲವಣವನ್ನು ಮಜ್ಜಿಗೆ ಜೊತೆ ಸೇವಿಸಬೇಕು.
* ಕಫ ಹೆಚ್ಚಾಗಿದ್ದರೆ ಬಿಸಿ ನೀರಿಗೆ ಸೈಂಧವ ಲವಣ ಹಾಕಿ ಕುಡಿದರೆ ವಾಂತಿಯಾಗಿ ಕಫ ಕಡಿಮೆಯಾಗುತ್ತದೆ.
* ಸೈಂಧವ ಲವಣವನ್ನು ಹುರಿದು ಬಟ್ಟೆಯಲ್ಲಿ ಕಟ್ಟಿ ವಾತದಿಂದ ನೋವಾಗಿರುವ ಜಾಗಕ್ಕೆ ಕಾವು ಕೊಟ್ಟರೆ ನೋವು ಕಡಿಮೆಯಾಗುತ್ತದೆ.
* ನಿಂಬೆಹಣ್ಣಿನ ರಸಕ್ಕೆ ಅಜವಾನದ ಪುಡಿ ಮತ್ತು ಸೈಂಧವ ಲವಣ ಕಲಸಿ ಸ್ವಲ್ಪ ಸ್ವಲ್ಪವಾಗಿ ನೆಕ್ಕುತ್ತಿದ್ದರೆ ವಾಂತಿ ನಿಲ್ಲುತ್ತದೆ.
* ಗ್ಯಾಸ್‌ ಸಮಸ್ಯೆಯಿಂದ ಹೊಟ್ಟೆ ಉಬ್ಬಿದ್ದರೆ, ಹರಳೆಣ್ಣೆ ಬಿಸಿ ಮಾಡಿ ಅದಕ್ಕೆ ಸೈಂಧವ ಲವಣ ಬೆರೆಸಿ ಹೊಟ್ಟೆ ಮೇಲೆ ಹಚ್ಚಿದರೆ ಗ್ಯಾಸ್‌ ಕಡಿಮೆಯಾಗಿ ಹೊಟ್ಟೆ ಹಗುರವಾಗುತ್ತದೆ.

Comments are closed.