ಕೋಕಮ್ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಬೆಳೆಯುವ ಹಣ್ಣು. ಇದನ್ನು ದಕ್ಷಿಣ ಭಾರತ, ಗುಜರಾತ್, ರಾಜಸ್ತಾನ್ ಗಳಲ್ಲಿ ಖಾದ್ಯ ಪದಾರ್ಥವಾಗಿ ಬಳಸುತ್ತಾರೆ. ಹಣ್ಣು, ಹಣ್ಣಿನ ಸಿಪ್ಪೆ ಇವು ಪುನರ್ಪುಳಿಯ ಔಷಧೀಯ ಗುಣಗಳು.
1. ಹಣ್ಣು ತಂಪು ಗುಣವನ್ನು ಹೊಂದಿದೆ. ಆಹಾರದ ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
2. ಹಣ್ಣಿನ ಸಿಪ್ಪೆಯನ್ನು ತಿಕ್ಕಿದರೆ ಗುಳ್ಳೆ- ಕಜ್ಜಿ ಗುಣವಾಗುತ್ತದೆ.ಹಣ್ಣಿನ ರಸವನ್ನು ಸುತ್ತ ಗಾಯ , ಗಾಯಗೊಂಡ ಚರ್ಮ ಮುಂತಾದವುಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.
3. ಕೋಕಮ್ ಬೀಜದಲ್ಲಿ ಶೇ ೨೩ ರಿಂದ ೨೬ ರಷ್ಟು ತೈಲಾಂಶವಿದ್ದು ಇದನ್ನು ಔಷಧಿಯಾಗಿ ಬಳಸುತ್ತಾರೆ.
4. ಇದರ ಸಿಪ್ಪೆಯ ಕಷಾಯವನ್ನು ಕುಡಿದರೆ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
5. ಕೋಕಮ್ ಮರದ ಕಾಂಡದ ತೊಗಟೆಯನ್ನು ಪುಡಿ ಮಾಡಿ, ಬಿಸಿ ನೀರಿಗೆ ಸೇರಿಸಿ ಕುದಿಸಬೇಕು. ಸ್ವಲ್ಪ ತಣ್ಣಗಾದ ಕಷಾಯದಿಂದ ಪಕ್ಷಾಘಾತವಾದ ಭಾಗಕ್ಕೆ ಹಚ್ಚಬೇಕು. ಇದರಿಂದ ಪಕ್ಷಾಘಾತದಲ್ಲಿ ಚೇತರಿಕೆ ಕಂಡುಬರುತ್ತದೆ.

Comments are closed.