ಕರಾವಳಿ

ತಿರುಮಲ ಶ್ರೀ ಕಾಶೀಮಠದಲ್ಲಿ ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವೃತ ಆರಂಭ

Pinterest LinkedIn Tumblr

ಮಂಗಳೂರು : ಗೌಡ ಸಾರಸ್ವತ ಸಮಾಜದ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ತಿರುಪತಿಯ ತಿರುಮಲ ಬೆಟ್ಟದಲ್ಲಿರುವ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿ ಮೃತಿಕಾ ಪೂಜನೆಯೊಂದಿಗೆ ಪ್ರಾರಂಭವಾಗಿದೆ.

ಪ್ರಾತಃ ಕಾಲ ಶ್ರೀ ಸಂಸ್ಥಾನದ ಶ್ರೀದೇವರುಗಳ ಬಿಂಬಗಳಿಗೆ ಪಂಚಾಮೃತ , ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕ , ಶತಕಲಶಾಭಿಷೇಕ ಬಳಿಕ ಪವಮಾನ ಅಭಿಷೇಕಗಳು ಶ್ರೀಗಳವರ ದಿವ್ಯ ಹಸ್ತಗಳಿಂದ ನೆರವೇರಿದವು, ಬಳಿಕ ನೆರೆದ ಸಮಾಜ ಬಾಂಧವರಿಗೆ ತಪ್ತ ಮುಧ್ರಧಾರಣೆ ನಡೆಯಿತು . ಸಾಯಂಕಾಲ ಮ್ರಿತಿಕಾ ಪೂಜನೆ ಬಳಿಕ ಸಭಾ ಕಾರ್ಯಕ್ರಮ ಜರಗಿತು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.