ಕರಾವಳಿ

ಚರ್ಮಕ್ಕೆ ಸನ್​​ಸ್ಕ್ರೀನ್​​ ಬಳಸುವ ಮುನ್ನ ಇದನ್ನು ತಿಳಿದುಕೊಳ್ಳಿ…?

Pinterest LinkedIn Tumblr

ನಿಮ್ಮ ಅಂದವನ್ನು ತೋರಿಸುವ ಹಾಗು ನಿಮ್ಮ ಅಂಗಗಳನ್ನು ಕಾಪಾಡುವ ಚರ್ಮದ ಕಾಳಜಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಯುವಕರಿಗಿಂತ ಯುವತಿಯರಿಗೆ ತಮ್ಮ ಚರ್ಮದ ಕಾಳಜಿ ಹೆಚ್ಚು ಹಾಗಾಗಿ ಅವರು ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವಾಗ ತಮ್ಮ ಚರ್ಮಕ್ಕೆ ಸನ್​​ಸ್ಕ್ರೀನ್​​ನಂತಹ ಅನೇಕ ಕ್ರೀಮ್​​ಗಳನ್ನು ಬಳಸುವುದುಂಟು. ನಿಮ್ಮ ದೇಹದ ತುಂಬಾ ಹೊದಿಕೆಯಾಗಿರುವ ಮೃದುವಾದ ಚರ್ಮದ ರಕ್ಷಣೆ ಮಾಡುವ ಆತುರದಲ್ಲಿ ಅತಿಯಾದ ಕೆಮಿಕಲ್ಸ್​​​ ಇರುವ ಕ್ರೀಮ್​ಗಳನ್ನು ಬಳಸಿ ನಿಮ್ಮ ಚರ್ಮವನ್ನು ಹಾಳು ಮಾಡಿಕೊಳ್ಳಬೇಡಿ. ಅದಕ್ಕಾಗಿ ಇಲ್ಲಿವೆ ನೋಡಿ ಕೆಲವು ಸಲಹೆಗಳು.

1. ಕನಿಷ್ಟ 15ರ ಎಸ್​​​​ಪಿಎಫ್ (ಸೂರ್ಯ ರಕ್ಷಣೆ ಅಂಶ) ಹೊಂದಿರುವ ಸನ್​​ಸ್ಕ್ರೀನ್​​​ ಅನ್ನು ಆಯ್ಕೆಮಾಡಿ.

2. ಒಂದು ವೇಳೆ ನೀವು ಬಿಸಿಲಿನ ಸಮಯದಲ್ಲಿ ಹೊರಗಡೆ ಹೋಗಬೇಕಾದರೆ, 30 ನಿಮಿಷಗಳ ಮೊದಲೇ ಸನ್​​ಸ್ಕ್ರೀನ್​​ ಹಚ್ಚಿಕೊಳ್ಳಿ. ಮತ್ತು ನೀವು ದೀರ್ಘಕಾಲ ಬಿಸಿಲಿನಲ್ಲಿ ಇರಬೇಕಾದ ಸಂದರ್ಭ ಬಂದರೆ ಪ್ರತಿ 2 ಗಂಟೆಗೊಮ್ಮೆ ಸನ್​​ಸ್ಕ್ರೀನ್​​ ಅನ್ವಯಿಸಿಕೊಳ್ಳಬೇಕು.

3. ಈಜಿನ ನಂತರ, ಅತಿಯಾದ ಬೆವರಿದಾಗ ಅಥವಾ ಟವೆಲ್​​ನಿಂದ ಮೈ ಒರಸಿಕೊಂಡ ನಂತರ ಸನ್​​ಸ್ಕ್ರೀನ್​​ ಅನ್ನು ಮತ್ತೆ ಅನ್ವಯಿಸಿಕೊಳ್ಳಿ.

4. ಸನ್​​​ಸ್ಕ್ರೀನ್​​ ಅನ್ನು ಹಚ್ಚಿಕೊಳ್ಳುವಾಗ ಮೃದುವಾಗಿ ಅನ್ವಯಿಸಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬಳಸಿ.

5. ಸನ್​​ಸ್ಕ್ರೀನ್​ ತೆಗೆದುಕೊಳ್ಳುವಾಗ UVA ಮತ್ತು UVB ಕಿರಣಗಳ ವಿರುದ್ಧ ರಕ್ಷಿಸುವ ಹಾಗೂ ಪರೀಕ್ಷಿತ ಸನ್​​ಸ್ಕ್ರೀನ್​​ ಅನ್ನು ನೀವು ಆಯ್ಕೆ ಮಾಡಿಕೊಳ್ಳಿ.

Comments are closed.