ಕರಾವಳಿ

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಜಯಮಾಲಾ

Pinterest LinkedIn Tumblr

ಉಡುಪಿ: ಮೈತ್ರಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬರೋಬ್ಬರಿ ಎರಡು ತಿಂಗಳ ಬಳಿಕ ಆಯಾಯ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೂ ನಡೆದಿದೆ.

ಜಿಲ್ಲೆಗೆ ಜಯಮಾಲ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿ ಸರಕಾರ ಆದೇಶಿಸಿದೆ. ಮಹಿಳಾ, ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿರುವ ಜಯಮಾಲ ಮೇಲ್ಮನೆ ಸಭಾನಾಯಕಿಯಾಗಿದ್ದಾರೆ

ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ ಒಟ್ಟು ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯು.ಟಿ ಖಾದರ್ ಹೊರತು ಪಡಿಸಿ ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರು ಇರಲಿಲ್ಲ. ಇದರಿಂದಾಗಿ ಉಡುಪಿಗೆ ಯಾರನ್ನು ಉಸ್ತುವಾರಿ ಮಾಡ್ತಾರೆಂಬ ಕುತೂಹಲವಿತ್ತು.

Comments are closed.