ರಾಷ್ಟ್ರೀಯ

ತನ್ನ ಪತ್ನಿ ಜತೆ ಜಗಳವಾಡಿ ನೇಣಿಗೆ ಶರಣಾದ ಕೊನೆ ಕ್ಷಣಗಳನ್ನು ಫೇಸ್​ಬುಕ್​ ನಲ್ಲಿ ಲೈವ್​ ವಿಡಿಯೋ ಪೋಸ್ಟ್ ಮಾಡಿದ !

Pinterest LinkedIn Tumblr

ಗುರುಗ್ರಾಮ: 28 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಜೊತೆ ಜಗಳವಾಡಿ, ಬಳಿಕ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಕೊನೆ ಕ್ಷಣಗಳನ್ನು ಫೇಸ್​ಬುಕ್​ ನಲ್ಲಿ ಲೈವ್​ ವಿಡಿಯೋ ಪೋಸ್ಟ್ ಮಾಡಿದ್ದಾನೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅಮಿತ್​ ಚೌಹಾಣ್​ ಎಂದು ಗುರುತಿಸಲಾಗಿದ್ದು, ಗುರುಗ್ರಾಮದಿಂದ 28 ಕಿ.ಮೀ.ದೂರದ ಪಟೌಡಿ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ.

ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ಚೌಹಾಣ್​ ಹಾಗೂ ಆತನ ಪತ್ನಿ ಪ್ರೀತಿಯ ನಡುವೆ ಭಿನ್ನಾಭಿಪ್ರಾಯ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಪ್ರೀತಿ ನಿನ್ನೆ ಚೌಹಾಣ್​ ಜತೆ ಜಗಳವಾಡಿ ತನ್ನ ಪೋಷಕರ ಜತೆ ತವರು ಮನೆಗೆ ತೆರಳಿದ್ದರು. ಇದೇ ಕಾರಣಕ್ಕೆ ಬೇಸರಗೊಂಡ ಚೌಹಾಣ್​ ಫೇಸ್​ಬುಕ್ ನಲ್ಲಿ​ ಲೈವ್​ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸುಭಾಶ್ ಬೊಕೆನ್ ಅವರು ಹೇಳಿದ್ದಾರೆ.

ಚೌಹಾಣ್​ ನೇಣಿಗೆ ಶರಣಾಗುವ ಮುನ್ನ ತನ್ನ ಆತ್ಮಹತ್ಯೆ ವಿಡಿಯೋವನ್ನು ಶೇರ್​ ಮಾಡುವಂತೆ ಸ್ನೇಹಿತರಿಗೆ ಕೇಳಿಕೊಂಡಿದ್ದು, ಆತ ಖಿನ್ನತೆಯಿಂದ ಬಳಲುತ್ತಿದ್ದು, ರೋಹ್​ಟಕ್​ನ ಪಿಜಿಐಎಂಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಿಳಿಸಿದ್ದಾರೆ.

ಪೊಲೀಸರಿಗೆ ವಿಷಯ ತಿಳಿಸದೆ ಕುಟುಂಬಸ್ಥರು ಚೌಹಾಣ್ ಅಂತ್ಯ ಸಂಸ್ಕಾರ ಮಾಡಿದ್ದು, ಪ್ರರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ಬೊಕೆನ್ ಹೇಳಿದ್ದಾರೆ.

Comments are closed.