ಕರಾವಳಿ

ಮಣಿಪಾಲ ರಿಕ್ರಿಯೇಶನ್ ಕ್ಲಬ್ ಮಾಲಿಕನ ಕೊಲೆ: ಅರೆಸ್ಟ್ ಆದ ನಾಲ್ವರು ಪೊಲೀಸ್ ಕಸ್ಟಡಿಗೆ

Pinterest LinkedIn Tumblr

ಉಡುಪಿ: ತನ್ನ ರಿಕ್ರಿಯೇಶನ್ ಕ್ಲಬ್ಬಿನಲ್ಲಿರುವಾಗಲೇ ಹಾಡು ಹಗಲಲ್ಲೇ ದಾರುಣವಾಗಿ ಕೊಲೆಯಾದ ಮಣಿಪಾಲ ಇಸ್ಪೀಟು ಕ್ಲಬ್ ಮಾಲಕನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ನಾಲ್ವರು ಆರೋಪಿಗಳನ್ನು ಇಂದು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಯಲಕ್ಕೆ ಪೋಲಿಸರು ಹಾಜರುಪಡಿಸಲಾಯಿತು.

ಹಣಕಾಸಿನ ವಿಚಾರದಲ್ಲಿ ನಿನ್ನೆ ಮಣಿಪಾಲದ ರಿಕ್ರಿಯೇಶನ್ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಅವರನ್ನು ಅಪರಿಚಿತ ನಾಲ್ವರ ತಂಡ ಚೂರಿ ಇರಿದು ಕೊಲೆ ಮಾಡಿತ್ತು. ಕ್ಲಬ್‍ನಲ್ಲಿ ಆಳವಡಿಸಿರುವ ಸಿ.ಸಿ ಟಿ.ವಿಯಲ್ಲಿ ಆಗಂತುಕರ ಕೃತ್ಯ ಹಾಗೂ ಅವರ ಚಲನವಲನವು ಸೆರೆಯಾಗಿತ್ತು. ಪೊಲೀಸರು ಈ ದೃಶ್ಯಾವಳಿಯನ್ನು ಕೇಂದ್ರಿಕರಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಕಲ್ಯಾಣಪುರದ ರಂಜಿತ್ , ಸುಜೀತ್ ಪಿಂಟೋ, ಉಡುಪಿ ಕೊಂಡಕ್ಕೂರಿನ ನ್ಯೂ ಕಾಲನಿ ಪ್ರದೀಪ್ ಪೂಜಾರಿ ಹಾಗೂ ಕುಂಜಿಬೆಟ್ಟು ಕಕ್ಕುಂಜೆಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳು. ಇವರಲ್ಲಿ ಮೂವರನ್ನು ನಿನ್ನೆ ರಾತ್ರಿಯೇ ಕುಂದಾಪುರದ ಕಂಡ್ಲೂರಿನಲ್ಲಿ ಬಂಧಿಸಿದ್ದು ರಂಜಿತ್ ಎನ್ನುವ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಪೋಲಿಸರು ಇವತ್ತು ಈ ನಾಲ್ವರು ಆರೋಪಿಗಳನ್ನು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳನ್ನು ಅಗಸ್ಟ್ 2 ರವರೆಗೆ ಪೋಲಿಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

Comments are closed.