ಕರಾವಳಿ

‘ನಮ್ಮ ಅಬ್ಬಕ್ಕ’ ಕರೆಯೋಲೆ ಬಿಡುಗಡೆ : ಅಬ್ಬಕ್ಕನನ್ನು ನಾಡು ಸ್ಮರಿಸಬೇಕು: ಡಾ.ಜಯಮಾಲ

Pinterest LinkedIn Tumblr

ಮಂಗಳೂರು: ‘ತುಳುನಾಡಿನ ಅಬ್ಬಕ್ವ ರಾಣಿ ದೇಶ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತ ಧೀರ ಮಹಿಳೆ.ಆಕೆಯ ತ್ಯಾಗವನ್ನು ನಮ್ಮ ನಾಡು-ರಾಷ್ಟ್ರ ಸದಾ ಸ್ಮರಿಸಬೇಕು’ ಎಂದು ಕರ್ನಾಟಕ ರಾಜ್ಯ ಕನ್ನಡ ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.

ವೀರರಾಣಿ ಅಬ್ಬಕ್ಕರಾಷ್ಟ್ಟ್ರೀಯ ಪ್ರತಿಷ್ಠಾನವು ಆಗಸ್ಟ್‌4 ರಂದು ನಗರದ ಪುರಭವನದಲ್ಲಿ ಏರ್ಪಡಿಸಿರುವ ‘ನಮ್ಮ ಅಬ್ಬಕ್ಕ’ ಆಷಾಢ ವೈಭವ ಕಾರ್ಯಕ್ರಮದ ಕರೆಯೋಲೆಯನ್ನು ತುಳು ಅಕಾಡೆಮಿ ಸಿರಿ ಚಾವಡಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ನಮ್ಮ ಅಬ್ಬಕ್ಕ-ಪರಿಕಲ್ಪನೆಯೇ ಚೆಂದ.ಅಬ್ಬಕ್ಕರಾಣಿ ಎಂದೆಂದೂ ನಮ್ಮವಳು.ಪ್ರತಿಷ್ಠಾನದ ಇಂತಹ ಕಾರ್ಯಕ್ರಮಗಳನ್ನು ಸರಕಾರ ಬೆಂಬಲಿಸುತ್ತದೆ’ ಎಂದವರು ನುಡಿದರು.ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ,ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್,ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ.,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ವೇದಿಕೆಯಲ್ಲಿದ್ದರು.

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮೊದಲ ಆಮಂತ್ರಣ ಪತ್ರಿಕೆಯನ್ನು ಸಚಿವರಿಗೆ ನೀಡಿದರು.

ಅಧ್ಯಕ್ಷ ಹರಿಕೃಷ್ಣ ಪುನರೂರು, ಉಪಾಧ್ಯಕ್ಷೆ ನಮಿತಾ ಶ್ಯಾಮ್, ಕೋಶಾಧಿಕಾರಿ ಪಿ.ಡಿ.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್,ಜತೆ ಕಾರ್ಯದರ್ಶಿ ನಿರ್ಮಲ್ ಕುಮಾರ್ ವೈ,ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಬಿ.ಶೆಟ್ಟಿ, ಭಾತಿಷಾ ಸಾಂಬಾರ್ ತೋಟ,ಲೋಹಿತ್ ಕುಮಾರ್ ಉಪಸ್ಥಿತರಿದ್ದರು.

Comments are closed.