ಕರಾವಳಿ

ಮಂಗಳೂರು ರಥಬೀದಿ : ಶ್ರೀ ವೆಂಕಟರಮಣ ದೇವರಿಗೆ ನೂತನ ರಜತ ತುಳಸಿ ಸಮರ್ಪಣೆ

Pinterest LinkedIn Tumblr

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಗೆ ಬೆಳ್ಳಿಯ ಹೊದಿಕೆಯನ್ನು ಗುರುಪುರ ಪೇಟೆ ಶೆಣೈ ಕುಟುಂಬದ ಪರವಾಗಿ ಶ್ರೀಮತಿ ಲಕ್ಷ್ಮೀದೇವಿ ಮತ್ತು ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಮಂಗಳೂರು ಇವರ ಸ್ಮರಣಾರ್ಥ ಶ್ರೀಮತಿ ಲತಿಕಾ ಮತ್ತು ಲೆಕ್ಕ ಪರಿಶೋಧಕ ಗುರುಪುರ ಹರಿರಾಮ್ ಶೆಣೈ ಕುಟುಂಬದ ವತಿಯಿಂದ ಸೇವಾರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸಲಾಯಿತು.

ಸಮರ್ಪಣಾ ಕಾರ್ಯಕ್ರಮದ ವೈದಿಕ ಪೂಜಾ ವಿಧಿವಿಧಾನಗಳನ್ನು ದೇವಳದ ಪಂಡಿತ್ ನರಸಿಂಹ ಆಚಾರ್ಯ ನೆರವೇರಿಸಿದರು .

ದೇವಳದ ಮೊಕ್ತೇಸರರಾದ ಶ್ರೀಯುತ ಎಂ. ಪದ್ಮನಾಭ ಪೈ, ಜಯರಾಜ್ ಪೈ, ಅಡಿಗೆ ಕೃಷ್ಣ ಶೆಣೈ ಹಾಗೂ ನೂತನ ಮೊಕ್ತೇಸರರಾಗಿ ಆಯ್ಕೆಯಾದ ಸಿ . ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಪ್ರಧಾನ ಅರ್ಚಕರಾದ ಚಂದ್ರಕಾಂತ್ ಭಟ್ , ಬೆಳ್ಳಿಯ ಕಸೂರಿ ಕೆಲಸ ಮಾಡಿದ ಕೆನರಾ ಜುವೆಲ್ಸ್ ಮಾಲಕರಾದ ಧನಂಜಯ ಪಾಲ್ಕೆ ಮತ್ತಿತರರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.