ಕರಾವಳಿ

ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತರಬೇಕು : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ಕೆನರಾ ಹೈಸ್ಕೂಲ್ (ಪ್ರಧಾನ) ನಲ್ಲಿ ವಿದ್ಯಾರ್ಥಿ ಸಂಘವನ್ನು ಶನಿವಾರ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಶಾಲೆಯ ಪರವಾಗಿ ನೂತನ ಶಾಸಕರನ್ನು ಶಾಲು ಹೊದೆಸಿ ಫಲಪುಷ್ಪವನ್ನಿತ್ತು ಅಭಿನಂದಿಸಲಾಯಿತು. ನಂತರ ಮಾತನಾಡಿದ ಶಾಸಕರು, ತಾನು ಶಾಸಕನಾಗಿ ಆಯ್ಕೆಯಾದ ಮೇಲೆ ನೂರಾರು ಕಡೆ ಅಭಿನಂದನೆ ನಡೆದಿದೆ. ಆದರೆ ಇಂದಿನ ಈ ಅಭಿನಂದನೆಯ ಅನುಭವವೇ ಬೇರೆ. ತಾನು ಕಲಿತ ಶಾಲೆಯ ವೇದಿಕೆ ಮೇಲೆ ನನಗೆ ಕಲಿಸಿದ ಗುರುಗಳ ಕೈಯಲ್ಲಿ ಅಭಿನಂದನೆ ಪಡೆಯುವಾಗ ಮನಸ್ಸು ತುಂಬುತ್ತದೆ.

ಒಬ್ಬ ವಿದ್ಯಾರ್ಥಿಯ ಶಾಲಾ ಜೀವನದಲ್ಲಿ ನಾಯಕತ್ವದ ಮುದ್ರೆಯೊತ್ತುವ ಮಹತ್ತರ ಕಾರ್ಯಗಳಲ್ಲಿ ಶಾಲಾ ಮಂತ್ರಿ ಮಂಡಲ ಅತ್ಯಂತ ಪ್ರಭಾವ ಬೀರುತ್ತದೆ. ಇದು ಮುಂದುವರೆದು ಆ ವಿದ್ಯಾರ್ಥಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನವೇ ಇಂದಿನ ಈ ಕಾರ್ಯ. ಶಾಲಾ ಚಟುವಟಿಕೆಗಳಲ್ಲಿ ಶಿಕ್ಷಕರ ಜೊತೆ ವಿದ್ಯಾರ್ಥಿಯರೂ ಸೇರಿಕೊಂಡು ಶಾಲೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೇರಿಸಲು ಕಾರ್ಯವನ್ನು ಮಾಡಬೇಕು ಎಂದರು.

ವಿದ್ಯಾರ್ಥಿಗಳು ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ಆಗಲೇ ನಮ್ಮ ದೇಶದ ಬಗ್ಗೆ ಭಕ್ತಿ ಮೂಡಲು ಸಾಧ್ಯ ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಶೆಣೈ, ಶಾಲಾ ಮುಖ್ಯೋಪಾಧ್ಯಾಯಿನಿ ಲತಾ, ಶುಭಾ ಭಟ್, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು

Comments are closed.