ಕರಾವಳಿ

ಮೀನುಗಾರಿಕೆ ಸಚಿವರಿಂದ ಮೀನುಗಾರ ಮಹಿಳೆಯರ ಭೇಟಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ

Pinterest LinkedIn Tumblr

ಉಡುಪಿ: ಮಹಿಳಾ ಮೀನುಗಾರರಿಗೆ ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಸೇರಿದಂತೆ ವಿವಿದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿ ರಾಜ್ಯದ್ಯಾಂತ ಸುದ್ದಿ ಮಾಡಿರುವ ಉಡುಪಿ ಮಹಿಳಾ ಮೀನುಗಾರರ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದನೆ ಭರವಸೆ ನೀಡಿದೆ.

ಸಿ.ಎಂ ಕುಮಾರಸ್ವಾಮೀ ಬಜೆಟ್‍ನಲ್ಲಿ ಕರವಾಳಿ ಮೀನುಗಾರರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ 3 ದಿನಗಳ ಹಿಂದೆ ಉಡುಪಿ ಮೀನು ಮಾರುಕಟ್ಟೆಯ ಮಹಿಳಾ ಮೀನುಗಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸುವ ಮೂಲಕ ರಾಜ್ಯ ಸರಕಾರದ ಗಮನ ಸೆಳೆದಿದ್ರು. ಈಗ ರಾಜ್ಯ ಸರಕಾರ ಮಹಿಳಾ ಮೀನುಗಾರರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದೆ. ಮೀನುಗಾರಿಕ ಸಚಿವ ವೆಂಕಟೇಶ್ ನಾಡಗೌಡ ಇಂದು ಮಾರುಕಟ್ಟೆಗೆ ಬೇಟಿ ನೀಡಿದ್ರು. ಇದೇ ಸಂದರ್ಭ ಮೀನುಗಾರರ ಮಹಿಳೆಯರು ಸಚಿವರಿಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ರು.

ಮೀನುಗಾರ ಮಹಿಳೆಯರೊಂದಿಗೆ ಮಾತಿಕತೆ ನಡೆಸಿದ ಸಚಿವರು ಎಲ್ಲಾ ಬೇಡಿಕೆಗಳನ್ನು ಅತೀ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದ್ರು. ಇನ್ನು ಮಾರುಕಟ್ಟೆಯ ಬೇಟಿಯ ಬಳಿಕ ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾಹಿತಿ ನೀಡಿ ಮಾತನಾಡಿದ್ರು ಮಹಿಳಾ ಮೀನುಗಾರರ ಬೇಡಿಕೆಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಗಾಗಲೇ ಸರಕಾರ ಈಡೇರಿಸಲು ಆದೇಶ ಹೊರಡಿಸಿದೆ. ಮಹಿಳಾ ಮೀನುಗಾರರು .60 ವರ್ಷ ಮೇಲ್ಪಟ್ಟ ಹಿರಿಯರಿಗೆ ಒಂದು ಸಾವಿರ ಪಿಂಚಣಿ ಯೋಜನೆ ನೀಡಬೇಕು ಎಂಬ ಆಗ್ರಹ ಮಾಡಿದ್ದು ಇಗಾಗಲೇ ಸರಕಾರ ಪಿಂಚಣೆ ಯೋಜನೆಯ ಬೇಡಿಕೆಯನ್ನು ಈಡೇರಿಸಿದೆ. ಮಹಿಳಾ ಮೀನುಗಾರರ ಸಾಲ ಮನ್ನಾ ಹಾಗೂ 50 ಸಾವಿರ ಬಡ್ಡಿ ರಹಿತ ಸಾಲ ಸೌಲಭ್ಯ, ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ಮುಂದಿರಿಸಿದ್ದಾರೆ. ಇವರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದ್ರು.

ಉಡುಪಿ ಶಾಸಕ ರಘುಪತಿ ಭಟ್ , ಜೆಡಿ ಎಸ್ ಜಿಲ್ಲಾದ್ಯಕ್ಷ ಯೋಗಿಶ್ ಶೆಟ್ಟಿ ಹಾಗೂ ಜೆಡಿ ಎಸ್ ಪಕ್ಷದ ಪ್ರಮುಖ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.

Comments are closed.