ಕರಾವಳಿ

ಪುಡ್ ಫಾಯ್ಸನ್ ಆಗಿ ಆಸ್ಪತ್ರೆ ಸೇರಿದ್ದ ಶೀರೂರು ಶ್ರೀ ಚಿಕಿತ್ಸೆ ಫಲಿಸದೇ ವಿಧಿವಶ

Pinterest LinkedIn Tumblr

ಉಡುಪಿ: ಆರೋಗ್ಯದಲ್ಲಿ ಏರು ಪೇರು ಕಂಡ ಹಿನ್ನಲೆಯಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಶೀರೂರು ಶ್ರೀ ಲಕ್ಷ್ಮೀವರ ತೀರ್ಥರು ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಶಿರೂರು ಮೂಲ ಮಠದಲ್ಲಿ ವಾಸವಾಗಿದ್ದ ಅವರು ಸೋಮವಾರ ಮಠದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಬಳಿಕ ತೀವ್ರ ಅಸ್ವಸ್ಥರಾಗಿದ್ದರು. ಮಠದಲ್ಲೇ ಅವರ ಆರೋಗ್ಯ ಉಪಚಾರ ನಡೆಯುತ್ತಿತ್ತು. ಶ್ರೀ ಗಳ ಆರೋಗ್ಯ ಮತ್ತಷ್ಟು ಹದೆಗೆಟ್ಟ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಕೆ ಎಂ ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶ್ರೀಗಳನ್ನು ಪರಿಕ್ಷೀಸಿದ ವೈದ್ಯರು ಪುಡ್ ಪಾಯ್ಸನ್ ಆಗಿದೆ ಎಂಬ ಮಾಹಿತಿ ನೀಡಿದ್ದು ಶಿರೂರು ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ ಬಳಿಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಕೃತಕ ಉಸಿರಾಟದ ವವ್ಯಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮಿಜಿ ವಿಧಿವಶರಾಗಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಧೀಕ್ರತವಾಗಿ ಪ್ರಕಟಿಸಿದ್ದಾರೆ.

ಶೀರೂರು ಶ್ರೀಗಳು ವಿಧಿಶರಾದ ಸುದ್ದಿ ಈಗಷ್ಟೇ ಹೊರಬಿದ್ದಿದ್ದು ಶೀರೂರು ಮಠದ ಅಭಿಮಾನಿ ,ಭಕ್ತರು ಹಾಗೂ ಶ್ರೀಗಳ ಆಪ್ತರು ಆಸ್ಪತ್ರೆಗೆ ದೌಡಯಿಸಿ ಬರುತ್ತಿದ್ದು ಭಕ್ತಸಾಗರ ಶೋಕದಲ್ಲಿ ಮುಳುಗಿದೆ.

Comments are closed.