ಕರಾವಳಿ

ಅಪಘಾತ ಸಂಖ್ಯೆ ಹೆಚ್ಚಳಕ್ಕೆ ಚಾಲಕರ ನಿರ್ಲಕ್ಷ್ಯ ಮತ್ತು ಮಿತಿ ಮೀರಿದ ವೇಗ ಕಾರಣ :ಎ. ಎಸೈ ಜ್ಞಾನಶೇಖರ್

Pinterest LinkedIn Tumblr

ಮಂಗಳೂರು : ನಗರದ ರಥಬೀದಿಯಲ್ಲಿರುವ ಡಾ| ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್‌ಕ್ರಾಸ್‌, ರೇಂಜರ್ ರೋವರ್ ಮತ್ತು ಪಶ್ಚಿಮ ಪೊಲೀಸ್‌ ಠಾಣೆ, ಮಂಗಳೂರು ಇವುಗಳ ಸಹಯೋಗದಲ್ಲಿ “ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ” ಕಾರ್ಯಕ್ರಮ ಶುಕ್ರವಾರ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರು ಪಶ್ಚಿಮ ಪೊಲೀಸ್‌ ಠಾಣೆಯ ಎ. ಎಸೈ ಜ್ಞಾನಶೇಖರ್ ಅವರು ಮಾತನಾಡಿ, ಭಾರತದಲ್ಲಿನ ಅಪಘಾತ ಸಂಖ್ಯೆ ಹೆಚ್ಚಳಕ್ಕೆ ಚಾಲಕನ ನಿರ್ಲಕ್ಷ್ಯ ಮತ್ತು ಮಿತಿ ಮೀರಿದ ವೇಗ ಮುಖ್ಯ ಕಾರಣ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಸಂಚರಿಸುವಾಗ ಪಾಲಿಸಬೇಕಾದ ಸುರಕ್ಷಾ ನೀತಿಗಳನ್ನು ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವ ವಿಧಾನಗಳ ಬಗ್ಗೆ ಅವರು ಜಾಗೃತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ಸಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವುದು ಅತೀ ಆವಶ್ಯಕ. ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಮತ್ತು ರಸ್ತೆ ದಾಟುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಹೇಳಿದರು.

ಚಂದ್ರಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಬ್‌ಇನ್‌ಸ್ಪೆಕ್ಟರ್‌ ಉದಯ್‌, ಮಣಿಕಂಠ, ಯುವ ರೆಡ್‌ಕ್ರಾಸ್‌ ಮತ್ತು ರೋವರ್ ಘಟಕ ಸಂಯೋಜಕ ಡಾ| ಮಹೇಶ್‌ ಕೆ.ಬಿ. ಮತ್ತು ಪ್ರೊ| ಪುರುಷೋತ್ತಮ ಭಟ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕ ಸಂಯೋಜಕ ಡಾ| ಶೈಲಾ ರಾಣಿ ಬಿ. ನಿರೂಪಿಸಿದರು.

Comments are closed.