ಕರಾವಳಿ

ಬೆಳಗ್ಗೆ ಎದ್ದ ಕೂಡಲೇ ಎಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ಆಗುವ ಉಪಯೋಗಗಳು..ಬಲ್ಲಿರಾ !

Pinterest LinkedIn Tumblr

ಆಯಿಲ್ ಪುಲ್ಲಿಂಗ್ ಅಥವಾ ತೈಲ ಹೀರಿಕೊಳ್ಳುವಿಕೆ ಒಂದು ಪುರಾತನ ಆಯುರ್ವೇದಿಕ್ ಔಷಧ ಪದ್ಧತಿಯಾಗಿದೆ. ಒಂದಷ್ಟು ಪ್ರಮಾಣದ ಎಣ್ಣೆಯನ್ನು ಬಾಯಿಯೊಳಗೆ ಹಾಕಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬಾಯಿಯೊಳಗೆ ಆ ಕಡೆ ಈ ಕಡೆ ಮಾಡುತ್ತಾ ಚೆನ್ನಾಗಿ ಮುಕ್ಕಳಿಸಬೇಕು. ಇದರಿಂದ ನಿಮ್ಮ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರೀಯಾ ಮತ್ತು ಇತರ ವಿಷಕಾರಿ ಅಂಶಗಳು ಈ ಎಣ್ಣೆಯೊಂದಿಗೆ ಹೊರಟುಹೋಗುತ್ತದೆ. ಅಪ್ಪಿತಪ್ಪಿಯೂ ಬಾಯಿಯೊಳಗಿನ ಎಣ್ಣೆಯನ್ನು ಒಳಗೆಳೆದುಕೊಳ್ಳಬೇಡಿ, ಆಗ ಹೊರಹೋಗಬೇಕಾದ ಅಂಶಗಳು ನಿಮ್ಮ ದೇಹ ಸೇರಬಹುದು.

ತೆಂಗಿನಕಾಯಿ ಬಹಳಷ್ಟು ಆರೋಗ್ಯಕರ ಗುಣಗಳನ್ನು ಹೊಂದಿರುವುದರಿಂದ ಇದು ಬಾಯಿ ಮುಕ್ಕಳಿಸಲು ಉತ್ತಮ, ಆದರೆ ಸಾಸಿವೆ, ಸೂರ್ಯಕಾಂತಿ ಅಥವಾ ಆಲಿವ್ ಎಣ್ಣೆಯನ್ನು ಬಳಸಿದರೂ ಸಮಸ್ಯೆಯೇನಿಲ್ಲ.

ಆಯಿಲ್ ಪುಲ್ಲಿಂಗ್ ನೀವು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯಾಕೆಂದರೆ ಬಾಯಿ ಹಲವಾರು ಬ್ಯಾಕ್ಟೀರೀಯಾ, ವೈರಸ್ ಮತ್ತು ಇತರ ವಿಷಕಾರಿ ಅಂಶಗಳ ವಾಸಸ್ಥಾನ, ಹಾಗಾಗಿ ಇವುಗಳು ದೇಹದೊಳಗೆ ಸೇರುವ ಮುನ್ನ ಇದನ್ನು ಬಾಯಿಯಿಂದ ಹೊರದೂಡಬೇಕು.

ಬೆಳಗ್ಗೆ ಎದ್ದ ಕೂಡಲೇ ತೆಂಗಿನ ಎಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ಆಗುವ ಉಪಯೋಗಗಳೇನು?

ಬಾಯಿಯ ಆರೋಗ್ಯಕ್ಕೆ:
ನೀವು ಬೆಳಿಗ್ಗೆ ಎದ್ದ ಕೂಡಲೇ ತೆಂಗಿನ ಎಣ್ಣೆಯಿಂದ ಹಲ್ಲುಜ್ಜಿ ಮತ್ತು ಮೌತ್ ವಾಶ್ ತರಹ ಎಣ್ಣೆಯಿಂದ ಬಾಯಿ ಮುಕ್ಕಳಿಸಿ. ತೆಂಗಿನಲ್ಲಿರುವ ಆ್ಯಂಟಿ ಬ್ಯಾಕ್ಟೀರೀಯಾ ನಿಮ್ಮ ಬಾಯಲ್ಲಿರುವ ಬ್ಯಾಕ್ಟೀರೀಯಾವನ್ನು ಕೊಲ್ಲುತ್ತದೆ. ಆದರೆ ನೀವು ನಂತರ ನಿಮ್ಮ ಟೂತ್ ಪೇಸ್ಟ್ ನಿಂದ ಹಲ್ಲುಜ್ಜುವುದನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ.

ಉತ್ತಮ ಚಯಾಪಚಯ ಕ್ರೀಯೆಗೆ:
ತೆಂಗಿನ ಎಣ್ಣೆಯಲ್ಲಿ 3 ತರಹದ ಆಮ್ಲೀಯ ಅಂಶಗಳವೆ ಇದನ್ನು ಎಂಸಿಟಿ (medium chain triglycerides) ಎನ್ನುತ್ತಾರೆ. ಇದು ನಿಮಗೆ ಹೆಚ್ಚು ಶಕ್ತಿ ನೀಡಿ ನಿಮ್ಮ ದೇಹದ ಚಯಾಪಚಯ ಕ್ರೀಯೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ.

ಕಾಂತಿಯುತ ತ್ವಚೆಗೆ:
ಆಯಿಲ್ ಪುಲ್ಲಿಂಗ್ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ರಕ್ತದೊಳಗೆ ಸೇರಲು ಬಿಡದೆ ಹೊರಗೆಡುವುತ್ತದೆ. ಇದರಿಂದ ಚರ್ಮದ ಆರೋಗ್ಯವು ಉತ್ತಮಗೊಂಡು ಮುಖವು ಹೆಚ್ಚು ಆರೋಗ್ಯಕರ ಮತ್ತು ಕಾಂತಿಯುತವಾಗುತ್ತದೆ. ಇದನ್ನು ನಿರಂತರವಾಗಿ ಮಾಡುತ್ತಾ ಬಂದರೆ ನಿಮ್ಮ ಚರ್ಮದ ಬಹುತೇಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.

ಹುಳುಕು ಹಲ್ಲುಗಳಿಗೆ:
ಹುಳುಕು ಹಲ್ಲು ಮಕ್ಕಳು ಮತ್ತು ದೊಡ್ಡವರನ್ನು ಕಾಡುವ ಸಾಮಾನ್ಯ ಸಮಸ್ಯೆ. ಆಯಿಲ್ ಪುಲ್ಲಿಂಗ್ ಈ ಸಮಸ್ಯೆಯಿಂದ ಮುಕ್ತಗೊಳ್ಳಲು ಇರುವ ಅತ್ಯಂತ ಸುಲಭ, ನೈಸರ್ಗಿಕ ಮತ್ತು ಪರಿಣಾಮಕಾರಿಯಾದ ಪರಿಹಾರವಾಗಿದೆ. ರಾತ್ರಿಯಿಡೀ ಸೂಕ್ಷ್ಮಾಣುಜೀವಿಗಳು ಬಾಯಿಯೊಳಗೆ ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುತ್ತವೆ. ಆಯಿಲ್ ಪುಲ್ಲಿಂಗ್ ನಾವು ಇದನ್ನು ಹೊಹಾಕುವುದರಿಂದ ಸಹಜವಾಗಿ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ.

Comments are closed.