ಕರಾವಳಿ

“ಯುವಶಕ್ತಿ” ಸಂಘಟನೆಯಿಂದ ಬಲಯುತವಾಗಲಿ : ಪ್ರಜ್ವಲ್ ಯುವಕ ಮಂಡಲದ ವಿಂಶತಿ ಸಂಭ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಪರಿಸರದಲ್ಲಿ ಯುವ ಸಂಘಟನೆಗಳ ಪಾತ್ರ ಬಹುಮುಖ್ಯವಾದದು. ಕೇವಲ ಸಂಘಟನೆಯೊಂದು ಇದ್ದರೆ ಸಾಲದು , ಅದು ಬಲಯುತವಾಗಿ ಬೆಳೆದಾಗ ಮಾತ್ರ ‘ ಯುವಶಕ್ತಿ’ಯಸದ್ಭಾಳಕೆ ಸಾಧ್ಯವೆಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ರಂಗವೇದಿಕೆಯಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ ವಿಂಶತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಗುರುಪುರ ಗೋಳಿದಡಿಗುತ್ತು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಅವರು ಮಾತನಾಡಿ ‘ ಯುವಕರಲ್ಲಿ ಸಾತ್ವಿಕ ಗುಣಗಳು ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವಕ ಮಂಡಲದ ಮೂಲಕ ಸಾಮಾಜಿಕ,  ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಯುವಕರು ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿ ಸಜ್ಜನರಾಗಿ ಬದುಕಲು ಸಾಧ್ಯವೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಬ್ರಹ್ಮ ಮುಗೇರ ಸಮಾಜ ರ ರಸೇವಾ ಸಂಘದ ಅಧ್ಯಕ್ಷರಾದ  ಸೀತಾರಾಮ್ ಕೊಂಚಾಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕೋರ್ದಬ್ಬು ದೇವಸ್ಥಾನದ ಗುರಿಕಾರರಾದ  ಎಸ್ ರಾಘವೇಂದ್ರ, ಗೌರವ ಸಲಹೆಗಾರರಾದ  ಕೆ. ಪಾಂಡುರಂಗ,  ತುಳು ಚಿತ್ರನಟ  ಪೃಥ್ವಿ ಅಂಬರ್ , ಬಿಜೆಪಿ ಯುವ ಮೋರ್ಚದ ರಾಜ್ಯ ಸದಸ್ಯ  ಪೃಥ್ವಿರಾಜ್ ಬಂಗೇರ , ನಿವೃತ್ತ ಉಪ ತಹಶೀಲ್ದಾರರಾದ   ಪಿ.ಬಾಬು, ತುಳು ಭಾಷಾ ವಿದ್ವಾಂಸರಾದ  ಕೆ. ಕೆ.ಕೆ.ಪೇಜಾವರ್, ಕ್ರೀಡಾ ಅಂಕಣಕಾರ ಎಸ್ .ಜಗದೀಶ್ಚಂದ್ರ ಅಂಚನ್ ಭಾಗವಹಿಸಿದರು.

ಸಮಾರಂಭದಲ್ಲಿ ಪ್ರಜ್ವಲ್ ಯುವಕ ಮಂಡಲದ ಅಧ್ಯಕ್ಷರುಗಳಾಗಿ ಶ್ರಮಿಸಿದ  ಯಾದವ ಮಜಿಲಕೋಡಿ ,  ಎಸ್. ಜಗನ್ನಾಥ,  ಲಕ್ಷ್ಮಣ್ ಪಡೀಲ್ ,  ಪ್ರಮೋದ್,  ರವೀಂದ್ರ ಹಾಗೂ  ಅನಿಲ್ ಪೆರಿಸ್ ಅವರನ್ನು ಸಮ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್, ನೃತ್ಯ ವೈಭವ ಹಾಗೂ ಶ್ರೀ ವ್ಯಾರ್ಘ ಚಾಮುಂಡೇಶ್ವರಿ ಯಕ್ಷಗಾನ ತಂಡದಿಂದ ಯಕ್ಷಗಾನ ಬಯಲಾಟ ನಡೆಯಿತು. ಕೆ.ಕೆ.ಪೇಜಾವರ್ ಸ್ವಾಗತಿಸಿದರು.  ಸೃಜನ್ ಪೇಜಾವರ್ ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.